Showing posts with label ಹಾಸ್ಯ. Show all posts
Showing posts with label ಹಾಸ್ಯ. Show all posts

Friday, 7 January 2011

ಅನರ್ಥ ಕೋಶ



ಡಾಕ್ಟರ್ - ಯಮಧರ್ಮರಾಯನ ಏಜೆಂಟ್
ಜೈಲು - ಮಂತ್ರಿಗಳ ಬೇಸಿಕ್ ಟ್ರೈನಿಂಗ್
ಕಾಯಿಲೆ - ದೇಹವು ಆತ್ಮಕ್ಕೆ ಕಟ್ಟುವ ಕಂದಾಯ
ಸೂರ್ಯ - ಕತ್ತಲಾದಾಗ ಹೊರಬರದ ಹೇಡಿ
ರೆಪ್ಪೆ - ಕಣ್ಣಿನ ಮೇಲೆ ಇರುವ ಭೂತ
ಹಾಲು - ದ್ರವ ರೂಪದ ಹಸುವಿನ ಮಾಂಸ
ಹೋಟೆಲ್ - ಪರಸ್ಪರ ಎಂಜಲನ್ನು ಸಾರ್ವಜನಿಕರು ಹಂಚಿಕೊಳ್ಳುವ ಕ್ಷೇತ್ರ
ಫಾಲಿಡಾಲ್ - ಬೇಜಾರಾದಾಗ ಸಂತೊಷಕ್ಕೆ ತೆಗೆದುಕೊಳ್ಳುವ ಶುದ್ದ ಔಷದ
ಅನುಭವ - ಈಗ ಮಾಡುವ ತಪ್ಪುಗಳಿಗೆ ನಾಳೆಕೊಡುವ ಹೆಸರು
ಜಾಣತನ - ಮೋಸ ಮಾಡಿ ತಪ್ಪಿಸಿಕೊಳ್ಳುವ ಶಕ್ತಿ
ತಿರುಪೆ - ನಮ್ಮ ದೇಶದಲ್ಲಿ ಬಂಡವಾಳವಿಲ್ಲದ ಒಂದು ದೊಡ್ಡ ಕೈಗಾರಿಕೆ
ಕಳ್ಳ - ಅನ್ಯರ ಆಸ್ತಿಗೆ ಒಡೆಯ
ಅಗಸ - ಇತರರ ಬಟ್ಟೆಗಳನ್ನು ಚೆನ್ನಾಗಿ ಧರಿಸುವ ವ್ಯಕ್ತಿ..
ಜ್ಯೋತಿಷಿ - ಅನ್ಯರ ದುಡ್ಡಿನಿಂದ ತನ್ನ ಭವಿಷ್ಯ ರೂಪಿಸಿ ಕೊಳ್ಳುವವ.
ವಕೀಲ - ನ್ಯಾಯ ದೇಗುಲದಲ್ಲಿ ಅನ್ಯಾಯ ಎತ್ತಿ ಹಿಡಿಯುವ ವ್ಯಕ್ತಿ.
Mathemetics(ಮೆಂತೆ ಮೆಣಸಿನಕಾಯಿ) - ಮೆಂತೆ ಮೆಣಸಿನಕಾಯಿ ನೆಂಚಿಕೊಂಡು ಮೊಸರು ಅನ್ನ ತಿಂದು ಮಲಗುವದು.
Arithmetic(ಅರಿತ ಮೆಟ್ರಿಕ್ ) - ಅರಿತ ಮೇಲೆ ಮೆಟ್ರಿಕ್ ಪಾಸಾಗ ಬಹುದೇನೋ?.
Algebra(ಎಲ್ಲ ಗೊಬ್ರ ) - ಇದು ನಮ್ಮ ಹೊಲಕ್ಕೆ ಹಾಕಿದರೆ ಬೆಳೆ ಚೆನ್ನಾಗಿ ಬರುತ್ತೆ.
Geometry(ಗೋ ಮೂತ್ರ ) - ಗೋ ಮೂತ್ರ ತುಂಬಾ ಪವಿತ್ರವಾದುದು. ಅದಕ್ಕೆ ತುಂಬಾ ಔಷಧಿಯ ಗುಣಗಳು ಇರುತ್ತವೆ.
Trignometry (ತಿರಗೋಣು ಮತ್ತೆ ) - ಮತ್ತೆ ಮತ್ತೆ ತಿರುಗಿ ಕಲಿಯೂ ಸೂತ್ರ
Calculas (ಖಾಲಿ ಕೆಲಸ) - ಇದನ್ನು ಕಲಿತ್ತಿದ್ದರೆ ಕೆಲಸ ಖಾಲಿ ಇರಬಹುದು.
physics (ಫಿಸಿಕ್ ) - ಕಟ್ಟು ಮಸ್ತಾದ ದೇಹ(ಯಾರದು ಅಂತ ಕೇಳಬೇಡಿ?).
chemistry(ಕೆಮ್ಮು ಎಷ್ಟುರಿ ?) - ಕದ್ದು ಸೇದುವ ಸಮಯದಲ್ಲಿ ಬರುವ ವ್ಯಾಧಿ.
sociology (ಸೋಸಿ ಒಳಗೆ) - ಮಿತ್ರರನ್ನು ಮಾಡಿಕೊಳ್ಳುವಾಗ ಬಳಸುವ ಸೂತ್ರ.
biology(ಭಯಾಲಜಿ) - ಪರೀಕ್ಷೆ ಮುಂಚೆ ಬರುವ ವ್ಯಾಧಿ.
-- ಕನ್ನಡ ಹನಿಗಳಿಂದ ಆರಿಸಲಾಗಿದೆ

Friday, 31 December 2010

ಹೀಗಾಗೋದೇ ಲೈಫ್...


ಕ್ಯೂ: ಎರಡು ಸಮಾನಾಂತರ ಕ್ಯೂಗಳಲ್ಲಿ ಒಂದರಲ್ಲಿ ನಿಂತಿರುತ್ತೆವೆ.ನಿಂತಿರುವ ಕ್ಯೂ ಬೇಗನೆ ಚಲಿಸುತ್ತಿಲ್ಲ ಎಂದು ಪಕ್ಕದ ಕ್ಯೂನಲ್ಲಿ ನಿಲ್ಲುತ್ತೇವೆ ಆಗ ನಾವು ಬಿಟ್ಟು ಬಂದ ಕ್ಯೊ ಬೇಗನೆ ಚಲಿಸಲಾರಂಭಿಸುತ್ತದೆ.

ಟೆಲಿಫೋನ್: ನಾವು ರಾಂಗ್ ನಂಬರ್ ಗೆ ಡಯಲ್ ಮಾಡಿದಾಗ ಯಾವತ್ತೂ ಅದು ಎಂಗೇಜ್ ಆಗಿರುವುದೇ ಇಲ್ಲ.

ಬೈಕ್ ರಿಪೇರಿ: ಕೈಗೆ ಗ್ರೀಸ್ ಮೆತ್ತಿಕೊಂಡಿರುವಾಗಲೇ ಮೂಗು ತುರಿಸುತ್ತೆ.

ಕಚೇರಿ: ಬೈಕ್ ಟೈರ್ ಪಂಕ್ಚರ್ ಆಗಿದ್ದರಿಂದ ತಡವಾಯಿತು ಎಂದು ಬಾಸ್ ಬಳಿ ಸಬೂಬು ಹೇಳಿದರೆ. ಮಾರನೇ ದಿನವೇ ಟೈರ್ ಪಂಕ್ಚರ್ ಆಗಿರುತ್ತದೆ.

ಸ್ನಾನದಕಾನೂನು: ಮೈ-ಮುಖಕ್ಕೆಲ್ಲಾ ಸೋಪು ಬಳಿದುಕೊಂಡಿದ್ದಗಲೇ ಫೋನ್ ರಿಂಗಾಗುತ್ತದೆ.

ಆಕಸ್ಮಿಕ: ಇವಳ ಜೊತೆ ಇರುವುದನ್ನು ಯಾರೂ ನೋಡದಿದ್ದರೆ ಸಾಕು ಎಂದು ಮನಸ್ಸಿನಲ್ಲಿ ಮಂಡಿಗೆ ತಿನ್ನುತ್ತಿರುವಾಗಲೇ ಪರಿಚಯಸ್ಥರು ಎದುರು ಸಿಕ್ಕುತ್ತಾರೆ.

ಚಿತ್ರಮಂದಿರದಲ್ಲಿ: ಮೂಲೆಯ ಸೀಟ್ ನಲ್ಲಿ ಕುಳಿತುಕೊಳ್ಳಬೇಕಾದ ವ್ಯಕ್ತಿಗಳು ಯಾವಾಗಲೂ ಕೊನೆಗೆ ಬರುತ್ತಾರೆ.

Wednesday, 29 December 2010

ಮಹಾಭಾರತ [ಇದನ್ನ ಸೀರಿಯಸ್ಸ್ಆಗಿ ತಗೋಬೇಡಿ ಪ್ಲೀಸ್]

ಮಹಾಭಾರತದ ದೃತರಾಷ್ಟ್ರ ನಿಮಗೆ ಗೊತ್ತಲ್ಲ? (ಗಾಂಧಾರಿಯ ಗಂಡ, ಹುಟ್ಟು ಕುರುಡ)
ಈ ದೃತರಾಷ್ಟ್ರ ಒಂದುಬಾರಿ ಸ್ವೀಟ್ ತೆಗೆದು ಕೋಡು ಪಾಂಡವರ ಮನೆಗೆ ಬಂದ, ಪಾಂಡವರು TVನೋಡ್ತಾ ಹಾಲ್ ನಲ್ಲಿ ಕುಳಿತಿದ್ದರು, ಪಾಂಡವರಿಗೆಲ್ಲಾ ಸ್ವೀಟ್ ಕೊಟ್ಟನಂತರ ದ್ರೌಪತಿ ಅಲ್ಲಿ ಇರದೇ ಇದ್ದದ್ದು ಅವನ ಗಮನಕ್ಕೆ ಬಂತು,
'ದ್ರೌಪತಿ ಎಲ್ಲಿ' ಎಂದು ಪಾಂಡವರನ್ನು ಕೇಳಿದ, ಅವಳು ಸ್ನಾನ ಮಾಡುತ್ತಿರುವುದಾಗಿ ಪಾಂಡವರು ಹೇಳಿದರು, 'ಸರಿ' ಎಂದು ದೃತರಾಷ್ಟ್ರ Bathroom ಹತ್ರ ಹೋಗಿ Bathroom ಬಾಗಿಲು ತಟ್ಟಿದ,
ಒಳಗಿನಿಂದ ದ್ರೌಪತಿ 'ಯಾರದು?'
'ನಾನು ದೃತರಾಷ್ಟ್ರ'
'ಏನು ವಿಷಯ?' ಎಂದು ದ್ರೌಪತಿ ಅಲ್ಲಿಂದಲೇ ಕೇಳಿದಳು.
'ನಿನಗೆ ಸ್ವೀಟ್ ಕೊಡಬೇಕಿತ್ತು,, ತಗೋ ಬಾ'
ದ್ರೌಪತಿ ಮೈಮೇಲೆ ಒಂಚೂರು ಬಟ್ಟೆ ಇಲ್ಲದೇ ಸ್ನಾನ ಮಾಡುತ್ತದ್ದರಿಂದ ಮತ್ತೆ ಬಟ್ಟೆ ಹಾಕಿಕೊಂಡು ಬಾಗಿಲು ತೆಗೆಯೋದೇಕೆ? ದೃತರಾಷ್ಟ್ರ ಹೇಗಿದ್ದರೂ ಕುರುಡ ಅಲ್ವಾ? ಅವನಿಗೇನು ಗೊತ್ತಾಗುತ್ತೆ.. ಎಂದುಕೊಂಡು ಬಟ್ಟೆ ಹಾಕಿಕೊಳ್ಳದೇ ಬಾಗಿಲು ತೆರೆದಳು. ದೃತರಾಷ್ಟ್ರ ಅವಳಿಗೆ ಸ್ವೀಟ್ ಕೊಟ್ಟ,
ದ್ರೌಪತಿ ಸ್ವೀಟ್ ತಿನ್ನುತ್ತಾ,,,'ಸ್ವೀಟ್  ಕೊಟ್ರಲ್ಲಾ ಏನು ವಿಶೇಷ?'' ಎಂದಳು.
ಅದಕ್ಕೆ ದೃತರಾಷ್ಟ್ರ ' ನನಗೆ ಕಣ್ಣು ಬಂದವು ಅದ್ಕೇ ಈ ಸ್ವೀಟ್ ' ಅಂದ