Friday 31 December 2010

ಹೀಗಾಗೋದೇ ಲೈಫ್...


ಕ್ಯೂ: ಎರಡು ಸಮಾನಾಂತರ ಕ್ಯೂಗಳಲ್ಲಿ ಒಂದರಲ್ಲಿ ನಿಂತಿರುತ್ತೆವೆ.ನಿಂತಿರುವ ಕ್ಯೂ ಬೇಗನೆ ಚಲಿಸುತ್ತಿಲ್ಲ ಎಂದು ಪಕ್ಕದ ಕ್ಯೂನಲ್ಲಿ ನಿಲ್ಲುತ್ತೇವೆ ಆಗ ನಾವು ಬಿಟ್ಟು ಬಂದ ಕ್ಯೊ ಬೇಗನೆ ಚಲಿಸಲಾರಂಭಿಸುತ್ತದೆ.

ಟೆಲಿಫೋನ್: ನಾವು ರಾಂಗ್ ನಂಬರ್ ಗೆ ಡಯಲ್ ಮಾಡಿದಾಗ ಯಾವತ್ತೂ ಅದು ಎಂಗೇಜ್ ಆಗಿರುವುದೇ ಇಲ್ಲ.

ಬೈಕ್ ರಿಪೇರಿ: ಕೈಗೆ ಗ್ರೀಸ್ ಮೆತ್ತಿಕೊಂಡಿರುವಾಗಲೇ ಮೂಗು ತುರಿಸುತ್ತೆ.

ಕಚೇರಿ: ಬೈಕ್ ಟೈರ್ ಪಂಕ್ಚರ್ ಆಗಿದ್ದರಿಂದ ತಡವಾಯಿತು ಎಂದು ಬಾಸ್ ಬಳಿ ಸಬೂಬು ಹೇಳಿದರೆ. ಮಾರನೇ ದಿನವೇ ಟೈರ್ ಪಂಕ್ಚರ್ ಆಗಿರುತ್ತದೆ.

ಸ್ನಾನದಕಾನೂನು: ಮೈ-ಮುಖಕ್ಕೆಲ್ಲಾ ಸೋಪು ಬಳಿದುಕೊಂಡಿದ್ದಗಲೇ ಫೋನ್ ರಿಂಗಾಗುತ್ತದೆ.

ಆಕಸ್ಮಿಕ: ಇವಳ ಜೊತೆ ಇರುವುದನ್ನು ಯಾರೂ ನೋಡದಿದ್ದರೆ ಸಾಕು ಎಂದು ಮನಸ್ಸಿನಲ್ಲಿ ಮಂಡಿಗೆ ತಿನ್ನುತ್ತಿರುವಾಗಲೇ ಪರಿಚಯಸ್ಥರು ಎದುರು ಸಿಕ್ಕುತ್ತಾರೆ.

ಚಿತ್ರಮಂದಿರದಲ್ಲಿ: ಮೂಲೆಯ ಸೀಟ್ ನಲ್ಲಿ ಕುಳಿತುಕೊಳ್ಳಬೇಕಾದ ವ್ಯಕ್ತಿಗಳು ಯಾವಾಗಲೂ ಕೊನೆಗೆ ಬರುತ್ತಾರೆ.

No comments:

Post a Comment