ಯಾವುದೇ ಊರಿಗೆ ಹೋದರೂ ಬರುವಾಗ ಕೆಲವು ಪುಸ್ತಕಗಳನ್ನು ಕೊಂಡು ತರುವ ಖಯಾಲಿ ನನ್ನದು, ಮೊನ್ನೆ ಕೂಡ ಈಗೇ ಆಯ್ತು ಬೆಂಗಳೂರಿಗೆ ಹೋದಾಗ ಹಲವು ಸೆಕೆಂಡ್ ಹ್ಯಾಂಡ್ ಪುಸ್ತಕಗಳನ್ನೂ ಹೊತ್ತುತಂದೆ ಅವುಗಳಲ್ಲಿ ರವಿ ಬೆಳಗೆರೆಯ ಓ ಮನಸೇ ಕೂಡ 2-3 ಇದ್ದವು. ಓ ಮನಸೇ ಯ ಒಂದನೇ ಸಂಚಿಕೆಯಿಂದ ತಪ್ಪದೇ ಕೊಂಡು ಓದಿದಂತವನು ನಾನು, ಯಾಕೋ ಇತ್ತೀಚೆ ಬೆಳಗೆರೆಯ ಬರಹಗಳು ಸರಿ ಬರುತ್ತಿಲ್ಲ, ಅವನ ಬರಹಗಳಿಗೆ ಹಿಂದಿನ ಮೊನಚುತನ ಇಲ್ಲ.
ಬಹುಶಃ ದುಡ್ಡು ಮಾಡುವ ಹುಂಬತನಕ್ಕೆ ಇಳಿದಿರಬಹುದು, ಯಾಕೆಂದರೆ ಮೊನ್ನೆ ನಾನು ಕೊಟ್ಟ 5 ರೂಪಾಯಿ ( ಸೆಕೆಂಡ್ ಹ್ಯಾಂಡ್ ಓ ಮನಸೇ ಗೆ) ಕೂಡ ವೇಸ್ಟ ಆಯಿತಲ್ಲ ಅಂತ ಅನ್ನಿಸಿ ಬಿಡ್ತು. ಯಾಕೆಂದರೆ ಅದರಲ್ಲಿ ಏನೊಂದು ವಿಷಯ ಇರಲಿಲ್ಲ ಮೊದಲ ಸಂಚಿಕೆಗಲ ಕಥೆಗಳನ್ನೇ ಮತ್ತೆ ಮತ್ತೆ ಕೊಟ್ಟಿದ್ದಾನೆ. ಅವನ ಫ್ಯಾಮಿಲಿ ಬಗ್ಗೆ ಕೇಳಿ ಕೇಳಿ (Sorry ಓದಿ ಓದಿ) ತಲೆ ಕೆಟ್ಟು ಹೋಗಿದೆ, ಮೊದಲೆಲ್ಲ ಅವನ ಲೇಖನಗಳೆಂದರೆ ಹುಚ್ಚೆದ್ದು ಓದುತ್ತಿದ್ದ ನಾನು ಈಗ ಹುಚ್ಚೆದ್ದು ಓಡುತ್ತಿದ್ದೆನೆ,
ಹೌದು, ಅವನ ಬರಹದಲ್ಲೇನಿದೆ ಎಂದು ಕುಳಿತಲ್ಲೇ ಊಹಿಸಬಹುದಾಗಿದೆ, ಅವನ ಫ್ಯಾಮಿಲಿ, ಅವನ ವಿದೇಶಿ ಟೂರು, ಅವನ ಸ್ಟಾಫ್, ಅದ್ಯಾವುದೋ ಕಿತ್ತೋಗಿರೊ ಅವನ Love ಸ್ಟೋರಿ ಅಬ್ಬಾ!! ನಮಗೇ ಇಷ್ಟು ಹಿಂಸೆಯಾಗುತ್ತಲ್ಲ ಪಾಪ ಅವನ ಆಫೀಸಿನಲ್ಲಿ ಕೆಲಸ ಮಾಡುತ್ತಿರುವವರಿಗೆ ಹೇಗಾಗಿರಬೇಡ??
ಇನ್ನೊಂದು ಮುಖ್ಯವಾದ ವಿಷಯ ಏನಪ್ಪ ಅಂದ್ರೆ ಅವನ ಅಳಿಯ (ಶ್ರೀನಗರ ಕಿಟ್ಟಿ) ಮಾಡಿರೋ ಎಲ್ಲಾ ಫಿಲಂಗಳು "ತುಂಭಾ ಚೆನ್ನಾಗಿರುತ್ತವೆ, ಅದರಲ್ಲೂ ಅವನ ನಟನೆಯಂತು ಸೂಪರ್" ಈ ರೀತಿ ಬರೆದರೆ ನಂಬೊಕೆ ನಾವೇನು ಕಿವಿಯಲ್ಲಿ ಹೂ ಇಟ್ಟುಕೊಂಡಿದಿವಾ?
ಅದೇನೇ ಇರಲಿ ನನ್ನ ನೆಚ್ಚಿನ ಬರಹಗಾರನೊಬ್ಬನು ಈ ರೀತಿಯ ಹಾದಿ ತುಳಿಯುತ್ತಿರುವುದು ನನಗೆ ಬೇಸರವನ್ನುಂಟುಮಾಡಿದೆ
ರವಿ ಬೆಳಗೆರೆ ಬರಹಗಳನ್ನು ಕಾಲೇಜು ದಿನಗಳಲ್ಲಿ ತುಂಬಾ ಇಷ್ಟಪಟ್ಟು ಓದುತ್ತಿದ್ದವನರಲ್ಲಿ ನಾನೂ ಒಬ್ಬ. ಪರೀಕ್ಷೆ ಹಿಂದಿನ ದಿನವೂ ಹೊಸ ಸಂಚಿಕೆ ಕೊಂಡು ತಂದು ಓದುತ್ತಿದ್ದ ದಿನಗಳು ಇನ್ನೂ ನೆನಪಿವೆ... ಆಮೇಲಾಮೇಲೆ ಅವನ ಬರಹಗಳಲ್ಲಿ "ನಾನು ಬೀದಿಯಿಂದ ಬಂದವನು, ನಾನು ಹುಬ್ಬಳ್ಳಿಯ ಕಮರಿ ಪೇಟೆಯಲ್ಲಿ ಸಾರಾಯಿ ಕುಡಿಯುತ್ತಿದ್ದೆ, ಶೃಂಗಾರ ಮಾಸಿಕಕ್ಕೆ ಅಶ್ಲೀಲ ಸಾಹಿತ್ಯ ಬರೆಯುತ್ತಿದ್ದೆ, ನನ್ನ ಹೆಂಡತಿ ಹೀಗೆ, ನಮ್ಮ ಅಜ್ಜ ಹಾಗೆ, ಅದ್ಯಾವಳೊ ಅವನ ಆಫೀಸಿನ ಹುಡುಗಿ ಹಾಗೆ, ಹೀಗೆ, ಅವನ ಮಗಳು ಹಾಗಂದಳು, ಇನ್ಯಾವಳೋ ಅಣ್ಣಾ ಅಂತ ರಾತ್ರಿ ಆಫೀಸಿಗೆ ಫೋನ್ ಮಾಡಿದಳು, ಅವಳ ಬಾಳು ಸರಿ ಮಾಡಿದೆ, ನನ್ನ ಸ್ಕೂಲಿನಲ್ಲಿ ಹೀಗೆ, ಹಾಗೆ, ನನ್ನ ಪೇಪರ್ ಕೃಷ್ಣ ಸುಂದರಿ ಬ್ಲ್ಯಾಕ್ ಅಂಡ್ ವೈಟ್, ...." ಅಬ್ಬಾ!! ದುಡ್ಡು ಕೊಟ್ಟು ತಂದು ಇವನ ಕರ್ಮ ಕಾಂಡ ಓದಬೇಕಾ ನಾವು? ಇವನಿಗೆ ಮುತ್ತಪ್ಪ ರೈ ನಂತಹ ಮಾಜಿ ಭೂಗತ ದೊರೆ ದೇವರಂತೆ ಕಾಣುತ್ತಾನೆ.. ಅವನ ಬಗ್ಗೆ ವಾರಗಟ್ಟಲೇ, ಪುಟಗಟ್ಟಲೆ ಓದಿದ್ದಾಯ್ತು... ಅವನಂತೆ ಅವನ ಬಾಲ ಬಡುಕ ಹುಡುಗರು... ಅವನ ಪತ್ರಿಕೆಯಲ್ಲೇ ಅವರು ಬಳಸುವ ಭಾಷೆ... ಅಬ್ಬಬ್ಬಾ!! ಕನ್ನಡ ಪತ್ರಿಕೋದ್ಯಮ ಸಾಹಿತ್ಯದ ಮಾಡಿವಂತಿಕೆಯನ್ನು ಹಾಳುಗೆಡವಿದೆ ಅಪಕೀರ್ತಿ ಅವನಿಗೇ ಸಲ್ಲಬೇಕು... ತನ್ನ ಸ್ಕೂಲಿನ ಸಮಾರಂಭವೊಂದಕ್ಕೆ ಶೋಭ ಕಾರಂದ್ಲಾಜೆಯನ್ನು ಕರೆತಂದು, ಅವಳನ್ನು ಹೊಗಳಿ ಅಟ್ಟಕ್ಕೇರಿಸಿ ಸ್ಕೂಲಿಗೊಂದು ಮೈದಾನಕ್ಕೆ ಅರ್ಜಿ ಸಲ್ಲಿಸಿ, ಅವಳ ಕೊಡಲ್ಲ ಅಂದ ತಕ್ಷಣ ಅವಳ ಬಗ್ಗೆ ಬಾಯಿಗೆ ಬಂದಂತೆ ಬರೆದದ್ದು ಎಲ್ಲರಿಗೂ ಗೊತ್ತು... ಅದೊಂದು ಉದಾಹರಣೆ ಸಾಕು ಅವನೆಂತವನು ಎಂದು ತಿಳಿದುಕೊಳ್ಳಲು.. ಛೀ! ಅಸಹ್ಯ!!
ReplyDeleteಅದೆಲ್ಲಾ ಸರಿ ಕಣ್ರಿ, ಪತ್ರಿಕೆಯ ಮುಖ ಪುಟದಲ್ಲಿ ಅರೆ-ಬರೆ ಬಟ್ಟೆಯ ಹೆಂಗಸರ ಪೋಸ್ ಹಾಕೋದ್ರಿಂದ ಮಾತ್ರ ಪತ್ರಿಕೆ ಮಾರಾಟವಾಗುತ್ತೆ ಅಂತ ಅಂದುಕೊಂಡುಬಿಟ್ಟಿದ್ದಾನೆ ,
ReplyDeleteಹೆಂಗಸರ ಬಗ್ಗೆ ಗೌರವ ಇದ್ದೋರು ಮಾಡೊ ಕೆಲ್ಸನಾ ಇದು??