Showing posts with label ಓ ಮನಸೇ. Show all posts
Showing posts with label ಓ ಮನಸೇ. Show all posts

Monday, 10 January 2011

ಐದು ರೂಪಾಯಿ ಮತ್ತು ಓ ಮನಸೇ

          ಯಾವುದೇ ಊರಿಗೆ ಹೋದರೂ ಬರುವಾಗ ಕೆಲವು ಪುಸ್ತಕಗಳನ್ನು ಕೊಂಡು ತರುವ ಖಯಾಲಿ ನನ್ನದು, ಮೊನ್ನೆ ಕೂಡ ಈಗೇ ಆಯ್ತು ಬೆಂಗಳೂರಿಗೆ ಹೋದಾಗ ಹಲವು ಸೆಕೆಂಡ್ ಹ್ಯಾಂಡ್ ಪುಸ್ತಕಗಳನ್ನೂ ಹೊತ್ತುತಂದೆ ಅವುಗಳಲ್ಲಿ ರವಿ ಬೆಳಗೆರೆಯ ಓ ಮನಸೇ ಕೂಡ 2-3 ಇದ್ದವು. ಓ ಮನಸೇ ಯ ಒಂದನೇ ಸಂಚಿಕೆಯಿಂದ ತಪ್ಪದೇ ಕೊಂಡು ಓದಿದಂತವನು ನಾನು, ಯಾಕೋ ಇತ್ತೀಚೆ ಬೆಳಗೆರೆಯ ಬರಹಗಳು ಸರಿ ಬರುತ್ತಿಲ್ಲ, ಅವನ ಬರಹಗಳಿಗೆ ಹಿಂದಿನ ಮೊನಚುತನ ಇಲ್ಲ.
ಬಹುಶಃ ದುಡ್ಡು ಮಾಡುವ ಹುಂಬತನಕ್ಕೆ ಇಳಿದಿರಬಹುದು, ಯಾಕೆಂದರೆ ಮೊನ್ನೆ ನಾನು ಕೊಟ್ಟ 5 ರೂಪಾಯಿ ( ಸೆಕೆಂಡ್ ಹ್ಯಾಂಡ್ ಓ ಮನಸೇ ಗೆ) ಕೂಡ ವೇಸ್ಟ ಆಯಿತಲ್ಲ ಅಂತ ಅನ್ನಿಸಿ ಬಿಡ್ತು. ಯಾಕೆಂದರೆ ಅದರಲ್ಲಿ ಏನೊಂದು ವಿಷಯ ಇರಲಿಲ್ಲ ಮೊದಲ ಸಂಚಿಕೆಗಲ ಕಥೆಗಳನ್ನೇ ಮತ್ತೆ ಮತ್ತೆ ಕೊಟ್ಟಿದ್ದಾನೆ. ಅವನ ಫ್ಯಾಮಿಲಿ ಬಗ್ಗೆ ಕೇಳಿ ಕೇಳಿ (Sorry ಓದಿ ಓದಿ) ತಲೆ ಕೆಟ್ಟು ಹೋಗಿದೆ, ಮೊದಲೆಲ್ಲ ಅವನ ಲೇಖನಗಳೆಂದರೆ ಹುಚ್ಚೆದ್ದು ಓದುತ್ತಿದ್ದ ನಾನು ಈಗ ಹುಚ್ಚೆದ್ದು ಓಡುತ್ತಿದ್ದೆನೆ,

  ಹೌದು, ಅವನ ಬರಹದಲ್ಲೇನಿದೆ ಎಂದು ಕುಳಿತಲ್ಲೇ ಊಹಿಸಬಹುದಾಗಿದೆ, ಅವನ ಫ್ಯಾಮಿಲಿ, ಅವನ ವಿದೇಶಿ ಟೂರು, ಅವನ ಸ್ಟಾಫ್, ಅದ್ಯಾವುದೋ ಕಿತ್ತೋಗಿರೊ ಅವನ Love ಸ್ಟೋರಿ ಅಬ್ಬಾ!! ನಮಗೇ ಇಷ್ಟು ಹಿಂಸೆಯಾಗುತ್ತಲ್ಲ ಪಾಪ ಅವನ ಆಫೀಸಿನಲ್ಲಿ ಕೆಲಸ ಮಾಡುತ್ತಿರುವವರಿಗೆ ಹೇಗಾಗಿರಬೇಡ??
ಇನ್ನೊಂದು ಮುಖ್ಯವಾದ ವಿಷಯ ಏನಪ್ಪ ಅಂದ್ರೆ ಅವನ ಅಳಿಯ (ಶ್ರೀನಗರ ಕಿಟ್ಟಿ) ಮಾಡಿರೋ ಎಲ್ಲಾ ಫಿಲಂಗಳು "ತುಂಭಾ ಚೆನ್ನಾಗಿರುತ್ತವೆ, ಅದರಲ್ಲೂ ಅವನ ನಟನೆಯಂತು ಸೂಪರ್" ಈ ರೀತಿ ಬರೆದರೆ ನಂಬೊಕೆ ನಾವೇನು ಕಿವಿಯಲ್ಲಿ ಹೂ ಇಟ್ಟುಕೊಂಡಿದಿವಾ?

ಅದೇನೇ ಇರಲಿ ನನ್ನ ನೆಚ್ಚಿನ ಬರಹಗಾರನೊಬ್ಬನು ಈ ರೀತಿಯ ಹಾದಿ ತುಳಿಯುತ್ತಿರುವುದು ನನಗೆ ಬೇಸರವನ್ನುಂಟುಮಾಡಿದೆ