Saturday, 8 January 2011

ಕೃತಿ ಚೌರ್ಯ

ಇವತ್ತು ಕನ್ನಡಹನಿಗಳು ಡಾಟ್ ಕಾಂ ನಲ್ಲಿ ಒಂದು ವಾಕ್ಯ ಎದ್ದು ಕಾಣುತ್ತಿತ್ತು ಅದೇನೆಂದರೆ

"ಕನ್ನಡಹನಿಗಳಲ್ಲಿ ಹೊಸ ಕವಿತೆ ಬರೆದರೆ ಅದು ಕವಿತ್ವ...
ಕನ್ನಡಹನಿಗಳನ್ನೇ ಕದ್ದು ಬೇರೆಡೆ ಬರೆದರೆ ಅದು ಕಪಿತ್ವ
ಸೃಜನ ಶೀಲತೆಯನ್ನು ಪ್ರೋತ್ಸಾಯಿಸುವುದೇ ನೈಜತ್ವ " ಅಂತ ಈ ವಿಷಯ ಇಲ್ಲಿ ಯಾಕೆ ಬಂತು ಅಂತಿರಾ? ಕೆಲವು ವರ್ಷಗಳ ಹಿಂದೆ ಯಾವುದಾದರೂ ಲೇಖಕರು ಒಂದು ಕೃತಿ ಬರೆದರೆ ಅದರಲ್ಲಿನ ಯಾವುದೇ ಸಾಲುಗಳನ್ನಗಲಿ ಅಥವಾ ಕದಿಯುತ್ತಿರಲಿಲ್ಲ ಒಂದುವೇಳೆ ಬಳಸಲೇ ಬೇಕಾದ ಸಂದರ್ಭ ಬಂದಾಗ ಆ ಲೇಖಕರ ಅನುಮತಿಯನ್ನು ಪಡೆಯುತ್ತಿದ್ದರು. ಹಾಗೂ ಪುಸ್ತಕದ ಹೆಸರನ್ನು ಮತ್ತು ಲೇಖಕರ ಹೆಸರನ್ನು ಉಲ್ಲೇಖಿಸುತ್ತಿದ್ದರು.
ಆದರೆ ಈಗ ಕಾಲ ಬದಲಾಗಿದೇ ತಂತ್ರಜ್ಞಾನ ಮುಂದುವರೆದಂತೆಲ್ಲ ಕೃತಿಚೌರ್ಯದ ಹಾವಳಿ ಹೈಟೆಕ್ ಆಗುತ್ತಿದೆ, ಬರೆಯುವುದಕ್ಕೆ ಪುರುಸೊತ್ತಿಲ್ಲವೆಂದು ಸುಲಭವಾಗಿ Copy & Paste ಮಾಡುತ್ತಾರೆ, ಇನ್ನುಕೆಲವರು ಆ ಕಥೆ/ಕವಿತೆ ತನ್ನದೇನೋ ಎಂಬಂತೆ ತಮ್ಮ ಬ್ಲಾಗ್ ಗಳಲ್ಲಿ ಅಲಂಕರಿಸಿರುತ್ತಾರೆ.

'ನಿಮ್ಮ ಮಗುವನ್ನು ಬೇರೊಬ್ಬರು ತನ್ನ ಮಗುವೆಂದರೆ ನಿಮಗೆಹೇಗಾಗಿರಲಿಕ್ಕಿಲ್ಲ?' ನೀವೇ ಹೇಳಿ.ಈ ರೀತಿ ಮಾಡಿದಾಗ ಎಂಥವನೇ ಆದರೂ ಬರೆಯಲು ಹಿಂದೇಟಾಕುತ್ತಾನೆ.ಆತನ ಬರವಣಿಗೆ ಕುಸಿಯುತ್ತದೆ, ಹಾಗಾಗದಿರಬೇಕಾದರೆ ಅವನಿಗೆ ಸಲ್ಲಬೇಕಾದ ಗೌರವ ಸಲ್ಲಬೇಕು
ಇನ್ನುಮುಂದೆ ನಾವುಗಳೂ ಕೂಡ ಬೇರೆಯವರ ಲೇಖನಗಳನ್ನು ಉಪಯೋಗಿಸುವಾಗ ಅವರನ್ನು ನೆನೆಯೋಣ

ಅಂದಹಾಗೆ ಕನ್ನಡಹನಿಗಳಲ್ಲಿರುವ ಆ ಸಾಲುಗಳನ್ನು ಬರೆದವನು ನಾನೇ, ನನ್ನ ಸಾಲುಗಳಿಗೆ ಬೆಲೆಕೊಟ್ಟು ಅಲ್ಲಿ ಪ್ರಕಟಿಸಿದ ಸಂತೋಷರವರಿಗೆ ನಾನು ಅಭಾರಿಯಾಗಿದ್ದೆನೆ

No comments:

Post a Comment