ಮಾಹಿತಿ
ವಿನಿಮಯ ಕ್ಷೇತ್ರದಲ್ಲಿ ತನ್ನದೇ ವೈಶಿಷ್ಟ್ಯಗಳಿಂದಾಗಿ 1 ಬಿಲಿಯನ್ ಗ್ರಾಹಕರನ್ನು
ಹೊಂದಿರುವ ವಾಟ್ಸಪ್ ಇದೀಗ ‘ಫಿಕ್ಸ್‌ಡ್‌ಸಿಸ್’ ಎಂಬ ಗುಪ್ತ ಫಾಂಟನ್ನು ಪರಿಚಯಿಸಿದೆ. ಈ
ಮಾದರಿಯ ಲಿಪಿ ಈಗಾಗಲೇ ಸಾಮಾನ್ಯವಾಗಿ ವಿಂಡೋಸ್‌ನ ನೋಟ್ ಪ್ಯಾಡ್ ಮತ್ತು ಇದಕ್ಕೂ
ಮುನ್ನ ಆ್ಯಂಡ್ರಾಯಿಡ್ ಬೇಟಾ ಮಾದರಿಯ ಮೊಬೈಲ್`ಗಳಲ್ಲಿ ಬಳಕೆ ಮಾಡಲಾಗಿತ್ತು.
ಈ ನೂತನ ಫಾಂಟ್ ಅನ್ನು ಬಳಸಲು ಸಾಮಾನ್ಯ ಫಾಂಟ್‌ನಲ್ಲಿ ಮೊದಲು ಬರೆದು, ಬಳಿಕ
ಬದಲಾಯಿಸಬೇಕಾದ ಫಾಂಟ್‌ನ ಚಿಹ್ನೆಯನ್ನು ಮೂರು ಬಾರಿ ಬಳಸಬೇಕು. ಬೋಲ್ಡ್, ಇಟಾಲಿಕ್
ಫಾಂಟ್ ಹೊರತುಪಡಿಸಿ ವಿಶಿಷ್ಟರೀತಿಯ ಸೌಲಭ್ಯಗಳನ್ನು ವಾಟ್ಸಪ್ ಮೆಸೆಂಜರ್
ಅಪ್ಲಿಕೇಶನ್ ಬಿಡುಗಡೆ ಮಾಡಿದೆ. ವಿಡಿಯೋ ಕಾಲಿಂಗ್‌ನಂಥ ಸೇವೆಗಳು ಸಹ ಶೀಘ್ರದಲ್ಲೇ
ಸೇರ್ಪಡೆಗೊಳ್ಳಲಿವೆ.
No comments:
Post a Comment