ಆ್ಯಂಡ್ರಾಯಿಡ್ ಕೆಲ ಉಪಯೋಗಗಳು
ಈಗ
ಎಲ್ಲರ ಕೈಯಲ್ಲೂ ಆ್ಯಂಡ್ರಾಯಿಡ್ ಮೊಬೈಲ್ ಇದೆ. ಆದರೆ, ಬಹುತೇಕರಿಗೆ ಈ ಫೋನ್ ಅನ್ನು
ಯಾವ ರೀತಿ ಬಳಸಬಹುದು, ಅದರ ಉಪಯೋಗಗಳೇನು ಎಂಬ ಮಾಹಿತಿಯೇ ಇಲ್ಲ. ಈ ಕುರಿತು ಮಾಹಿತಿ.
ಪಿಸಿ ಕಂಟ್ರೋಲ್
ಬಹುತೇಕ
ಮಂದಿ ಇ- ಮೇಲ್ ಮತ್ತು ಇತರೆ ಡಾಕ್ಯುಮೆಂಟ್‌ಗಳನ್ನು ನೋಡಲಷ್ಟೇ ಸ್ಮಾರ್ಟ್‌ಫೋನ್
ಬಳಸುತ್ತಾರೆ. ಒಂದು ವೇಳೆ ನಿಮ್ಮ ಕಂಪ್ಯೂಟರ್ ಅನ್ನು ಮೊಬೈಲ್ ಮೂಲಕ ನಿಯಂತ್ರಿಸುವುದು
ಸಾಧ್ಯವಿದ್ದರೆ? ಖಂಡಿತಾ ಸಾಧ್ಯವಿದೆ. ವರ್ಚುವಲ್ ನೆಟ್‌ವರ್ಕ್ ಕಂಪ್ಯೂಟಿಂಗ್‌ನಂತಹ
ಆ್ಯಪ್‌ಗಳು ಕಂಪ್ಯೂಟರ್ ಅನ್ನು ಸ್ಮಾರ್ಟ್‌ಫೋನ್ ಡಿಸ್ಪ್ಲೇ ಮೂಲಕ ನೋಡಲು ಅವಕಾಶ
ನೀಡುತ್ತವೆ. ಅಲ್ಲದೆ, ನಿಮ್ಮ ಮೊಬೈಲ್‌ನಲ್ಲೇ ಫೈಲ್ ಕನ್‌ವರ್ಷನ್, ಇಮೇಲ್ ಮತ್ತು ಇತರೆ
ಕೆಲಸಗಳನ್ನೂ ಮಾಡಬಹುದು. ವಿಎಲ್‌ಸಿ ಡೈರೆಕ್ಟ್ ಪ್ರೋ ಫ್ರೀ ಎನ್ನುವ ಇನ್ನೊಂದು ಆ್ಯಪ್
ಬಳಸಿಕೊಂಡು ನಿಮ್ಮ ಪಿಸಿಯಲ್ಲಿರುವ ವೀಡಿಯೋ ವೀಕ್ಷಿಸಬಹುದು.
ಹೋಮ್ ಸ್ಕ್ರೀನ್‌ಗೆ
ಸ್ಮಾರ್ಟ್‌ಫೋನ್‌ಗಳು
ಕೆಲವೊಮ್ಮೆ ಕ್ಲಿಷ್ಟಕರ ಅನಿಸಬಹುದು. ಶಾರ್ಟ್‌ಕಟ್‌ಗಳ ಅರಿವಿದ್ದರೆ ಎಲ್ಲವೂ ಸುಲಭ.
ಉದಾಹರಣೆಗೆ ನಿಮ್ಮ ಸ್ಮಾರ್ಟ್‌ಫೋನ್‌ನ ಖಾಲಿ ಜಾಗವನ್ನು ಬೆರಳಿನಿಂದ ಒತ್ತಿ ಹಿಡಿಯಿರಿ.
ಆಗ ಪಾಪ್ ಅಪ್ ಮೆನು ಡಿಸ್ಪ್ಲೇ ಆಗುತ್ತದೆ. ಅಲ್ಲಿಂದ ಶಾರ್ಟ್‌ಕಟ್ಸ್‌ಗೆ ಹೋಗಿ. ಬಳಿಕ
ಕಾಂಟ್ಯಾಕ್ಟ್ ಸೆಲೆಕ್ಟ್ ಮಾಡಿ. ಅಲ್ಲಿ ನೀವು ಹೊಸ ಕಾಂಟ್ಯಾಕ್ಟ್ ಸೇರಿಸಬಹುದು.
ಅಳತೆ ಮಾಡಬಹುದು
ನೀವು
ಎಲ್ಲಿಗೋ ಹೊರಗೆ ಯಾವುದೋ ಕಟ್ಟಡ ಅಥವಾ ವಸ್ತು ನೋಡಿರುತ್ತೀರಿ. ಆದರೆ, ನಿಮ್ಮ ಕೈಯಲ್ಲಿ
ಅಳತೆ ಟೇಪ್ ಇರುವುದಿಲ್ಲ. ಆಗ ಯಾವುದಾದರೂ ವಸ್ತುವಿನ ಎತ್ತರ ಅಳತೆ ಮಾಡಬೇಕಾದರೆ ಏನು
ಮಾಡುತ್ತೀರಿ? ಸ್ಮಾರ್ಟ್ ಮೆಷರ್ ಪ್ರೊ ಎನ್ನುವ ಆ್ಯಪ್ ಇದ್ದರೆ ಮೊಬೈಲ್ ಕ್ಯಾಮೆರಾದಲ್ಲೇ
ಅಳತೆ ತೆಗೆಯಬಹುದು.
ಬೆಳಕು ಕಡಿಮೆ ಮಾಡಲು
ಕತ್ತಲೆಯಲ್ಲಿ
ಸ್ಮಾರ್ಟ್‌ಫೋನ್ ಬಳಸುವಾಗ ಎಕ್ಸ್‌ಟರ್ನಲ್ ಬ್ಯಾಗ್ರೌಂಡ್ ಇಲ್ಲದೆ ಸ್ಕ್ರೀನ್ ನೋಡುವುದು
ಕಿರಿಕಿರಿಯೆನಿಸಬಹುದು. ತುಂಬಾ ಹೊತ್ತು ಹೀಗೇ ಮೊಬೈಲ್ ಬಳಸಿದರೆ ಕಣ್ಣು ನೋವು
ಬರಬಹುದು. ಈ ಸಮಸ್ಯೆಗೆ ಪರಿಹಾರ ಬೇಕಿದ್ದರೆ ಸೆಟ್ಟಿಂಗ್ಸ್‌ಗೆ ಹೋಗಿ. ಅಲ್ಲಿ
ಎಸ್ಸೆಸೆಬಿಲಿಟಿ, ನಂತರ ಇನ್‌ವರ್ಟೆಡ್ ರೆಂಡರಿಂಗ್ ಆಯ್ಕೆ ಮಾಡಿ. ಮತ್ತೆ ಕಣ್ಣುನೋವು
ಕಾಡದು.
ಆ್ಯಪ್‌ಗಳ ನಿಯಂತ್ರಣ
ಹೋಮ್‌ಸ್ಕ್ರೀನ್‌ನಲ್ಲಿ ಎಲ್ಲಾ
ಆ್ಯಪ್‌ಗಳು ಡಿಸ್ಪ್ಲೇ ಆಗುವುದು ಕೆಲವರಿಗೆ ಇಷ್ಟವಾಗುವುದಿಲ್ಲ. ಇಂಥವರಿಗಾಗಿಯೇ
ಆ್ಯಂಡ್ರಾಯಿಡ್‌ನಲ್ಲಿ ವಿಶೇಷ ಸೌಲಭ್ಯವೊಂದಿದೆ. ಇದಕ್ಕಾಗಿ ಗೂಗಲ್ ಪ್ಲೇಸ್ಟೇಷನ್
ತೆರೆಯಿರಿ. ನಂತರ ಫೋನ್‌ನ ಮೆನುಗೆ ಹೋಗಿ. ನಂತರ ಸೆಟ್ಟಿಂಗ್ಸ್‌ನಲ್ಲಿ ಅಟೋ ಆ್ಯಡ್-
ವಿಡ್ಜೆಟ್ ಕ್ಯಾನ್ಸಲ್ ಮಾಡಿ. ಸಮಸ್ಯೆ ನಿವಾರಣೆಯಾದಂತೆ.
ಡಾಟಾ ಬಳಕೆ
ನೀವು
ಲಿಮಿಟೆಡ್ ಡಾಟಾ ಪ್ಲಾನ್ ಬಳಸುತ್ತಿದ್ದೀರೆಂದಾದರೆ ಡಾಟಾ ಬಳಕೆ ಕುರಿತು ಕಣ್ಣಿಡುವುದು
ಅತ್ಯಗತ್ಯ. ಆ್ಯಂಡ್ರಾಯಿಡ್‌ಗಳಲ್ಲಿ ಡಾಟಾ ಬಳಕೆ ಅದರಲ್ಲೂ ಆ್ಯಪ್‌ಗಳು ಎಷ್ಟು ಡಾಟಾ
ಬಳಕೆ ಮಾಡುತ್ತವೆ ಎನ್ನುವುದನ್ನು ಪರಿಶೀಲಿಸುವ ವ್ಯವಸ್ಥೆ ಇದೆ. ಸೆಟ್ಟಿಂಗ್ಸ್‌ಗೆ
ಹೋಗಿ, ಡಾಟಾ ಯೂಸೇಜ್ ಅನ್ನು ಒತ್ತಿ. ನಿಮಗೆ ಅಲ್ಲಿ ಆ್ಯಪ್‌ಗಳು ಬಳಸುತ್ತಿರುವ ಡಾಟಾ
ಕುರಿತ ಮಾಹಿತಿ ಸಿಗುತ್ತದೆ.
ಅಟೋಮೇಟ್
ಆ್ಯಂಡ್ರಾಯಿಡ್
ಫೋನ್‌ಗಳಲ್ಲಿ ಬಳಕೆ ಆಗದಿರುವ ಸೌಲಭ್ಯಗಳಲ್ಲಿ ಸ್ವಯಂಚಾಲಿತ ಟಾಸ್ಕ್‌ಗಳೂ ಸೇರಿವೆ.
ಯಾವುದಾದರೂ ಹೊಸ ಪ್ರದೇಶಕ್ಕೆ ಹೋದ ಕೂಡಲೇ ಗೆಳೆಯರಿಗೆ ನಿಮ್ಮ ಮೊಬೈಲ್ ಅದರಷ್ಟಕ್ಕೆ
ಎಸ್‌ಎಂಎಸ್ ಕಳುಹಿಸಬೇಕು, ಇಯರ್ ಫೋನ್ ಸಿಕ್ಕಿಸಿದ ಕೂಡಲೇ ಫೋನ್‌ನಲ್ಲಿ ಅದರಷ್ಟಕ್ಕೆ
ಸಂಗೀತ ಚಾಲೂ ಆಗಬೇಕು, ಬ್ಯಾಟರಿ ಡೌನ್ ಆಗಿದ್ದಾಗ ಅಥವಾ ವೈಫೈ ಮತ್ತು ಡಾಟಾ ಬಳಕೆ ಮಿತಿ
ಮೀರಿದಾಗ 3ಜಿ ಮತ್ತು ವೈಫೈ ಸಂಪರ್ಕವನ್ನು ತನ್ನಷ್ಟಕ್ಕೆ ಕಡಿತ ಮಾಡಬೇಕು-
ಆ್ಯಂಡ್ರಾಯಿಡ್ ಫೋನ್ ಇದಕ್ಕೆಲ್ಲ ಅವಕಾಶ ಮಾಡಿಕೊಡುತ್ತದೆ.
ಕೃಪೆ; ಕನ್ನಡಪ್ರಭ
No comments:
Post a Comment