Sunday 26 December 2010

ಹೀಗೊಂದು ಕರೆ...

ಮಧ್ಯಾನ್ಹ ಸುಮಾರು ಎರಡು ಗಂಟೆ ಯಾಗಿರಬಹುದು ಯಾವುದೋ ಪುಸ್ತಕ ಓದುತ್ತ ಕುಳಿತ್ತಿದ್ದೆ, ಪೋನ್ ರಿಂಗಾಯಿತು,,,,  ಎತ್ತಿ 'ಹಲೋ' ಹೇಳಿದೆ ಅತ್ತಕಡೆಯಿಂದ ಯಾವುದೋ ಹುಡುಗಿ ಧ್ವನಿ
'ಸರ್ ನಿಮ್ಮ ಬ್ಲಾಗ್ ನೋಡಿದೆ ಅದರಲ್ಲಿ ಕೆಲಸ ಕೊಡಿಸ್ತಿವಿ ಅಂತ ಇತ್ತಲ್ಲ ಸರ್ ಅದ್ಕೆ Call ಮಾಡಿದೆ' ಎಂದಳು
' ಸರಿ ನಿಮಗೆ ಕೆಲಸ ಬೇಕಿತ್ತಾ?' ಎಂದೆ.
'ನನಗಲ್ಲ ಸರ್ ನಮ್ಮ ಅಣ್ಣನಿಗೆ'
'ok ಅವರು ಏನು ಓದಿದ್ದಾರೆ?'
'SSLC ಫೇಲ್ ಆಗಿದ್ದಾರೆ ಸರ್'
'ಪರ್ವಗಿಲ್ಲ ಬಿಡಿ. ಎಷ್ಟು ಸಂಬಳ ನಿರೀಕ್ಷೆ ಮಾಡ್ತರೆ?..
'4ರಿಂದ 4ವರೆ ಸಾವಿರ ಆದ್ರೂ Ok ಸರ್'
ನನಗೆ ಬೇಕಾದ ಎಲ್ಲಾ ಮಾಹಿತಿಯನ್ನು ಪಡೆದುಕೊಂಡು  ಪೋನ್ Cut ಮಾಡಿದೆ.
ಈಗ ಕೆಲಸ ಹುಡುಕುವ ಜವಬ್ಧಾರಿ ನನ್ನದಾಗಿತ್ತು. ನಮ್ಮ ಟೀಮ್ ನ ಹುಡುಗ ಪ್ರೇಮ್ ನ ಸಹಾಯದಿಂದ ಯಶವಂತಪುರದಲ್ಲಿ ಕೆಲಸವೊಂದು ಖಾಲಿ ಇರುವುದು ತಿಳಿತು. ಆ ವಿಷಯವನ್ನು ಅವಳಿಗೆ Phone ಮಾಡಿ ತಿಳಿಸಿ 'ಅವಳ ಅಣ್ಣನಿಗೆ Phone ಮಾಡಲು ಹೇಳಿದೆ' ಒಂದೆರಡು ಗಂಟೆಗಳ ಬಳಿಕ ಅವಳ ಅಣ್ಣ ಪೋನ್ ಮಾಡಿದ
'ಕೆಲಸ ಏನು? ಯಾವ ಏರಿಯಾದಲ್ಲಿ? ಎಷ್ಟು ಸಂಬಳ?' ಒಂದೇ ಉಸಿರಿನಲ್ಲಿ ಪ್ರಶ್ನೆ ಕೇಳಿದ
ನಾನು '4500 ರೂ ಸಂಬಳ ಬಟ್ಟೆ ಫ್ಯಾಕ್ಟರಿಯಲ್ಲಿ ಕೆಲಸ' ಎಂದೆ.
'ಏನೂ ಬಟ್ಟೆ ಫ್ಯಾಕ್ಟರಿಯಲ್ಲಿ ಕೆಲಸನಾ?.. ನನಗೆ ಬೇಡ' ಎಂದು ದಭಾಯಿಸುವ ರೀತಿಯಲ್ಲಿ
ನನ್ನ ಉತ್ತರವನ್ನೂ ನೀರೀಕ್ಷಿಸದೇ ಪೋನಿಟ್ಟ....

ಸ್ವಂತ ಊರಲ್ಲೇ ಕೆಲಸ 4500 ರೂ ಸಂಬಳ ಅರೇ ಅವನು ಮನಸ್ಸು ಮಾಡಿದ್ರೆ ಹಾಯಾಗಿ ಕೆಲಸ ಮಾಡಬಹುದಿತ್ತಲ್ವಾ? ಅಂದುಕೊಂಡೆ ಬಹುಷ ಅವನು ಅದೇನು ಯೋಚಿಸಿ ಬಿಟ್ಟನೋ ತಿಳಿಲಿಲ್ಲ.

'ಇಂಥಹ ಸಣ್ಣ ಪುಟ್ಟ ವಿಷಯಗಳಿಗೆ ನಾನು ಬೇಜಾರು ಮಾಡ್ಕೊಳಲ್ಲ ಬಿಡಿ '

No comments:

Post a Comment