Wednesday, 4 May 2011

ಕನ್ನಡದಲ್ಲಿ ಮೈಕ್ರೋಸಾಫ್ಟ್ ವಿಂಡೋಸ್ ಹಾಗೂ ಆಫೀಸ್ ಬಳಸುವದು ಹೇಗೆ?

ಇಂದು ಕಂಪ್ಯೂಟರ್ ನಲ್ಲಿ ಕನ್ನಡ ಬಳಸುವದು ಎಂದರೆ ಬರಹ ಅಥವಾ ನುಡಿ ಇನ್ಸ್ಟಾಲ್ ಮಾಡಿ ಬಳಸುವದು ಎಂಬ ಭಾವನೆ ನಮ್ಮದು. ಇದಕ್ಕೆ ಹೊರತಾಗಿ ಇಡೀ ವಿಂಡೋಸ್ ಆಪರೇಟಿಂಗ್ ಸಿಸ್ಟೆಮ್ ಗೆ ಕನ್ನಡ ಇಂಟರ್ ಫೇಸ್ ಇದೆ ಎಂಬುದು ಎಷ್ಟು ಜನರಿಗೆ ತಿಳಿದಿದೆ? ಎಷ್ಟು ಜನ ಕನ್ನಡಿಗರು ಬಳಸುತ್ತಿದ್ದಾರೆ?
ನಿಮ್ಮಲ್ಲಿ ವಿಂಡೋಸ್ ಎಕ್ಸ್ ಪಿ, ವಿಂಡೋಸ್ ವಿಸ್ತಾ ಅಥವಾ ವಿಂಡೋಸ್ 7 ಇದ್ದರೆ ಅದಕ್ಕೆ ಸಂಪೂರ್ಣ ಕನ್ನಡ ಇಂಟರ್ ಫೇಸ್ ಇದೆ. ಮೈಕ್ರೊಸಾಫ್ಟ್ ತನ್ನ ಭಾಷಾ ಇಂಡಿಯಾ ಪ್ರಾಜೆಕ್ಟ್ ಅಡಿಯಲ್ಲಿ ಭಾರತದ ಹಲವು ಭಾಷೆಗಳಿಗೆ ವಿಂಡೋಸ್ ಹಾಗೂ ಆಫೀಸ್ ಪ್ರಾಡಕ್ಟ್ ಗಳನ್ನು ಭಾಷಾಂತರಿಸಿದೆ.ಇದರಲ್ಲಿ ಕನ್ನಡವೂ ಒಂದು.ಇದು ಪ್ರಪಂಚಾದ್ಯಂತ ಕನ್ನಡಿಗರಿಗೆ ಸುಮಾರು ಐದು ವರ್ಷಗಳಿಂದ ಲಭ್ಯವಿದೆ. ಆದ್ರೆ ಎಷ್ಟು ಜನ ಬಳಸುತ್ತಿರಬಹುದು? ಗೊತ್ತಿಲ್ಲ.
ಸಾಮಾನ್ಯವಾಗಿ ನಾವೆಲ್ಲ ಕೆಲಸ ಮಾಡುವ ಆಫೀಸಿನಲ್ಲಿ ಬಳಸುವ ಕಂಪ್ಯೂಟರ್ ಗಳಲ್ಲಿ ಕನ್ನಡ ಇಂಟರ್ ಫೇಸ್ ಹಾಕಿಕೊಳ್ಳಲು ಅನುಮತಿ ನೀಡುವದಿಲ್ಲ.ಆದರೇನಾಯ್ತು ಕನಿಷ್ಟ ಪಕ್ಷ ನಮ್ಮ ನಿಮ್ಮ ಪರ್ಸನಲ್ ಡೆಸ್ಕಟಾಪ್ ನಲ್ಲಿ ಅಥವಾ ಲ್ಯಾಪಟಾಪ್ ನಲ್ಲಿ ಅಥವಾ ಬ್ರೌಸಿಂಗ್ ಸೆಂಟರ್, ಸ್ಕೂಲ್, ಡಿಟಿಪಿ ಸೆಂಟರ್ ನ ಕಂಪ್ಯೂಟರ್ ಗಳಲ್ಲಿ ಈ ಕನ್ನಡ ಇಂಟರ್ಫೇಸ್ ಹಾಕಿಕೊಂಡು ಬಳಸುವ ಅವಕಾಶ ಇದ್ದೇ ಇದೆ. ಈ ಮೂಲಕ ನಮ್ಮ ಕನ್ನಡ ಭಾಷೆಯನ್ನು ಬೆಳೆಸುವ ಅವಕಾಶ ನಿಮ್ಮದಿದೆ.

ನಾವು ಯಾಕೆ ವಿಂಡೋಸ ಕನ್ನಡವನ್ನು ಕಂಪ್ಯೂಟರ್ ಗಳಲ್ಲಿ ಬಳಸಬೇಕು?

ನೆನಪಿಡಿ ವಿಂಡೋಸ್ ನಂತಹ ಪರಿಪೂರ್ಣ ಆಪರೇಟಿಂಗ್ ಸಿಸ್ಟೆಮ್ ಹಾಗೂ ಆಫೀಸು ಸಾಫ್ಟವೇರ್ ತಯಾರಿಸಲು ವಾರ್ಷಿಕ ಸಹಸ್ರಾರು ಕೋಟಿ ರುಪಾಯಿ ಹಣ ಬೇಕಾಗುತ್ತದೆ. ಕನ್ನಡದಲ್ಲಿ ಅಷ್ಟು ಹಣ ಹಾಕಿ ವಾಪಸ್ ಬರುವದಿಲ್ಲ. ಅಷ್ಟೊಂದು ಹಣ ಪ್ರತಿವರ್ಷ ದಾನ ಮಾಡುವಷ್ಟು ದಾರಾಳಿಗಳು ಯಾರೂ ಇಲ್ಲ. ಅಷ್ಟು ಖರ್ಚು ಮಾಡಿದರೂ ಇಂತಹ ಆಪರೇಟಿಂಗ್ ಸಿಸ್ಟೆಮ್ ನಿರ್ಮಿಸಲು ಆಗುತ್ತೆ ಎಂಬುದಕ್ಕೆ ಖಾತರಿ ಇಲ್ಲ.ಇದಕ್ಕೆ ವಿಂಡೋಸ್ ಹಾಗೂ ಆಫೀಸು ನೀಡಿರುವ ಈ ಕನ್ನಡ ಇಂಟರ್ಫೇಸ್ ಬಳಸಿ ಏನೆ ಕುಂದು ಕೊರತೆ ಇದ್ದರೂ ಅವರಿಗೆ ದೂರು ನೀಡಿ ಸರಿ ಪಡಿಸಿಕೊಳ್ಳುವದರಲ್ಲಿದೆ ಜಾಣತನ.
ನೆನಪಿಡಿ ನಾವು ಹೆಚ್ಚು ಹೆಚ್ಚು ಇನ್ಸ್ಟಾಲ್ ಮಾಡಿ ಬಳಸಿದಷ್ಟೂ ಮೈಕ್ರೋಸಾಫ್ಟ್ ಗೆ ಮುಂದಿನ ವಿಂಡೋಸ್ ಅವತರಣಿಕೆಯನ್ನು ಕನ್ನಡಕ್ಕೆ ತರುವ ಇದಕ್ಕಾಗಿ ಲಕ್ಷಾಂತರ ಹಣ ಖರ್ಚು ಮಾಡುವ ಮನಸ್ಸು ಬರುತ್ತದೆ.ಯಾರಿಗೆ ಗೊತ್ತು ಇತರ ಆಪರೇಟಿಂಗ್ ಸಿಸ್ಟೆಮ್ ಆದ ಮ್ಯಾಕ್ ಹಾಗೂ ಗೂಗಲ್ ಅವರ ಅಂಡ್ರಾಯಿಡ್ ಅವರಿಗೂ ಕನ್ನಡದಲ್ಲಿ ತರಲು ಮನಸ್ಸಾದೀತು. ಇಲ್ಲಾಂದ್ರೆ ಬರುವದಿಲ್ಲ.
ಎಷ್ಟು ಜನ ಇನ್ಸ್ಟಾಲ್ ಮಾಡಿದ್ದಾರೆ ಬಳಸುತ್ತಿದ್ದಾರೆ ಎಂಬ ರಿಪೋರ್ಟ್ ಮೈಕ್ರೋಸಾಫ್ಟ್ ಅವರಿಗೆ ಲಭ್ಯ ಇರುತ್ತದೆ. ಕಡಿಮೆ ಜನ ಬಳಸುತ್ತಿದ್ದಾರೆ ಎಂದು ಕಂಡು ಬಂದರೆ ಮುಂದೆ ಇಂತಹ ಕಾರ್ಯಕ್ಕೆ ಕೈ ಹಾಕದಿರಬಹುದು. ಒಟ್ಟಿನಲ್ಲಿ ಕನ್ನಡವನ್ನು ಕಂಪ್ಯೂಟರ್ ನಲ್ಲಿ ಮೆರಸುವ ಅಥವಾ ಅಳಿಸಿಹಾಕುವ ಕೀಲಿ ಕೈ ನಮ್ಮ ಬಳಿಯೇ ಇದೆ. ಇದೇ ಮೈಕ್ರೊಸಾಫ್ಟ್ ಬಿಡುಗಡೆ ಮಾಡಿದ ತುಂಗಾ ಫಾಂಟು ಅಂತರ್ಜಾಲದಲ್ಲಿ ಕನ್ನಡ ಕ್ರಾಂತಿಗೆ ನಾಂದಿ ಹಾಡಿತು. ಇದನ್ನು ಕೂಡಾ ಹೆಚ್ಚು ಜನ ಬಳಸಿ ಅವರ ಶ್ರಮ ಸಾರ್ಥಕ ಗೊಳಿಸೋಣ. ಏನಂತೀರಾ?

ನನ್ನ ಲ್ಯಾಪ್ ಟಾಪ್ ನಲ್ಲಿ ವಿಂಡೋಸ್ ಕನ್ನಡ ಇಂಟರ್ ಫೇಸ್

ಈ ಮುಂದಿನ ಕೆಲವು ಚಿತ್ರ ನಿಮಗೆ ನನ್ನ ಕಂಪ್ಯೂಟರ್ ನಲ್ಲಿ ಇದನ್ನು ಹಾಕಿಕೊಂಡಿರುವದನ್ನು ನೋಡಬಹುದು.ಪ್ರತಿ ಮೆನುಗಳು ಕನ್ನಡಕ್ಕೆ ಬದಲಾಗುತ್ತದೆ.ಅಷ್ಟೇ ಅಲ್ಲ ವಿಂಡೋಸ್ ನೋಟ ಪ್ಯಾಡ್, ಎಕ್ಸ್ ಪ್ಲೋರರ್, ಮೂವಿ ಮೇಕರ್, ಕಾಲ್ಕುಲೇಟರ್ ಮತ್ತು ಗೇಮ್ ಗಳು ಹೀಗೆ ಎಲ್ಲವೂ ಕನ್ನಡಕ್ಕೆ ಭಾಷಾಂತರವಾಗುತ್ತದೆ. ನಾನು ಇಂಟರ್ ನೆಟ್ ಎಕ್ಸ್ಪ್ ಪ್ಲೋರರ್ ಹಾಗೂ ವಿಂಡೋಸ್ ಮಿಡಿಯಾ ಪ್ಲೇಯರ್ ಗಳನ್ನು ಅಪ್ ಗ್ರೇಡ್ ಮಾಡಿದ್ದರಿಂದ ಅವು ಆಗಲಿಲ್ಲ. ಬಹುಶಃ ವಿಂಡೋಸ್ ಅಪಡೇಟ್ ಮೂಲಕವೇ ಮಾಡಿದ್ದರೆ ಅವೂ ಆಗುತ್ತಿದ್ದವೇನೋ.
ಭಾಷಾಂತರದ ಗುಣಮಟ್ಟ ಅತ್ಯುತ್ತಮ ಎಂದು ನಾನು ಹೇಳಬಲ್ಲೆ. ಅಕಸ್ಮಾತ್ ಎಲ್ಲಿಯಾದರೂ ಲೋಪ ಇದ್ದರೆ ಅದಕ್ಕೆ ನಾವೇ ದೋಷಿಗಳು(ನಾನು ಸಹ). ಅವರಿಗೆ ಬಳಸಿ ಫೀಡ್ ಬ್ಯಾಕ್ ಕೊಟ್ಟಿದ್ದರೆ ಸರಿಪಡಿಸುತ್ತಿದ್ದರು. ನಾವು ಹಾಗೆ ಮಾಡಿಲ್ಲ.
ವಿಂಡೋಸ್ ಕನ್ನಡ ೧ವಿಂಡೋಸ್ ಕನ್ನಡ ೧
ವಿಂಡೋಸ್ ಕನ್ನಡ ೨ವಿಂಡೋಸ್ ಕನ್ನಡ ೨
ವಿಂಡೋಸ್ ಕನ್ನಡ ೩ವಿಂಡೋಸ್ ಕನ್ನಡ ೩
ವಿಂಡೋಸ್ ಕನ್ನಡ ೪ವಿಂಡೋಸ್ ಕನ್ನಡ ೪

 ನಿಮ್ಮ ಕಂಪ್ಯೂಟರ್ ಗಳಲ್ಲಿ ಇನ್ಸ್ಟಾಲ್ ಮಾಡುವದು ಹೇಗೆ?

ಸೂಚನೆ: ನಿಮ್ಮ ಬಳಿ ಒರಿಜಿನಲ್ ವಿಂಡೋಸ್ ಅಥವಾ ಆಫೀಸು ಇರಬೇಕು. ಕದ್ದ ವಿಂಡೋಸ ಅಥವಾ ಆಫೀಸು ಇರಬಾರದು.
 ಹಂತ ೧:
ಕೆಳಗೆ ವಿವಿಧ ಪ್ರಾಡಕ್ಟ್ ಗಳ ಕನ್ನಡ ಇಂಟರ್ ಫೇಸ್ ಪ್ಯಾಕ್ ಗಳ ಲಿಂಕ್ ನೀಡಲಾಗಿದೆ. ನಿಮಗೆ ಬೇಕಾದುದನ್ನು ಆಯ್ಕೆ ಮಾಡಿ ಕೊಳ್ಳಿ. ಅಲ್ಲಿಂದ ಪ್ಯಾಕ್ ಡೌನ್ ಲೋಡ್ ಮಾಡಿಕೊಳ್ಳಿ.ಮೊದಲು ನಿಮ್ಮ ವಿಂಡೋಸ್ ಇಂಟರ್ ಫೇಸ್ ಪ್ಯಾಕ್ ಹಾಕಿಕೊಂಡು ನಂತರ ಆಫೀಸು ಹಾಕಿಕೊಳ್ಳುವದು ಉತ್ತಮ.
ವಿಂಡೋಸ್ 7 ಕನ್ನಡ ಭಾಷೆಯ ಇಂಟರ್ ಫೇಸ್ ಪ್ಯಾಕ್
http://www.microsoft.com/downloads/details.aspx?FamilyID=a1a48de1-e264-48d6-8439-ab7139c9c14d&displaylang=kn
ವಿಂಡೋಸ್ ವಿಸ್ತಾ ಕನ್ನಡ ಭಾಷೆಯ ಇಂಟರ್ ಫೇಸ್ ಪ್ಯಾಕ್
http://www.microsoft.com/downloads/details.aspx?FamilyId=0E21EB7B-E01A-4FCC-B7F1-30E419DA7F5B&displaylang=kn
ವಿಂಡೋಸ್ ಎಕ್ಸ್ ಪಿ ಕನ್ನಡ ಭಾಷೆಯ ಇಂಟರ್ ಫೇಸ್ ಪ್ಯಾಕ್
http://www.microsoft.com/downloads/details.aspx?FamilyId=0DB2E8F9-79C4-4625-A07A-0CC1B341BE7C&displaylang=kn

ಆಫೀಸ್ 2003 ಕನ್ನಡ ಭಾಷೆಯ ಇಂಟರ್ ಫೇಸ್ ಪ್ಯಾಕ್
http://www.microsoft.com/downloads/details.aspx?displaylang=kn&FamilyID=ccf199bc-c987-48f5-9707-dc6c7d0e35d0
ಆಫೀಸ್ 2007 ಕನ್ನಡ ಭಾಷೆಯ ಇಂಟರ್ ಫೇಸ್ ಪ್ಯಾಕ್
http://www.microsoft.com/downloads/details.aspx?FamilyID=91426c33%2Dea45%2D482d%2Daf08%2Dcd8ea8cbfd53&displaylang=kn
ಆಫೀಸ್ 2010 ಕನ್ನಡ ಭಾಷೆಯ ಇಂಟರ್ ಫೇಸ್ ಪ್ಯಾಕ್
http://www.microsoft.com/downloads/details.aspx?displaylang=kn&FamilyID=cfec65b7-131c-440f-953f-43731fdabb8b

ಹಂತ ೨:

ಮೈಕ್ರೋಸಾಫ್ಟನ ಡೌನ್ ಲೋಡ ಪುಟದಲ್ಲಿ ಕೆಳಗೆ ಸ್ಕ್ರೋಲ್ ಮಾಡಿದರೆ ಆಯಾ ಪ್ಯಾಕ್ ನ ಇನ್ಸ್ಟಾಲೆಶನ್ ವಿವರ ಕಾಣಬಹುದು.
LIPSetup.msi ಮೇಲೆ ಕ್ಲಿಕ್ ಮಾಡಿ.
I Accept the license agreement ಆಯ್ಕೆ ಮಾಡಿ.
Next ಕ್ಲಿಕ್ ಮಾಡಿ.
ಮುಂದೆ ಮತ್ತೆ Next ಕ್ಲಿಕ್ ಮಾಡಿ.
ಮುಂದಿನ ಪುಟದಲ್ಲಿ Install ಕ್ಲಿಕ್ ಮಾಡಿ.
Ok ಕ್ಲಿಕ್ ಮಾಡಿ. ಕಂಪ್ಯೂಟರ್ ಅನ್ನು ರಿಸ್ಟಾರ್ಟ್ ಮಾಡಿ.

ಹಂತ ೩:

ನೀವು ವಿಂಡೋಸ್ ಹಾಗೂ ಅಫೀಸ್ ಎರಡರ ಕನ್ನಡ ಇಂಟರ್ ಫೇಸ್ ಇನ್ಸ್ಟಾಲ್ ಮಾಡುತ್ತಿದ್ದರೆ ಇದನ್ನು ಒಮ್ಮೆ ಮಾಡಿದರೆ ಸಾಕು. ಇದು ಕನ್ನಡ ಫಾಂಟುಗಳನ್ನು ಇನ್ನಷ್ಟು ಸುಂದರವಾಗಿ ತೋರಿಸುವಂತೆ ಮಾಡುತ್ತದೆ.
ರೈಟ್ ಕ್ಲಿಕ್ ಮಾಡಿ. ಮೆನುನಲ್ಲಿ ಗುಣಗಳು ಆಯ್ಕೆ ಮಾಡಿ.
ತೋರಿಕೆ ಟ್ಯಾಬ್ ಆಯ್ಕೆ ಮಾಡಿ.
ಸ್ಕ್ರೀನ್ ಫಾಂಟು ಅಂಚು ಮೃದು ಮಾಡಲು ಕೆಳಗಿನ ಪದ್ಧತಿ ಬಳಸು ಕೆಳಗೆ
ClearType ಆಯ್ಕೆ ಮಾಡಿ
ಸರಿ ಬಟನ್ ಕ್ಲಿಕ್ ಮಾಡಿ.
ವಿಂಡೋಸ್ ಕನ್ನಡ ೫ವಿಂಡೋಸ್ ಕನ್ನಡ ೫
ತೋರಿಕೆ ಟ್ಯಾಬ್ ಕೆಳಗೇ ಇರುವ ಆಧುನಿಕ ಬಟನ್ ಕ್ಲಿಕ್ ಮಾಡಿ.
ಇದರಲ್ಲಿ ಐಟಂ ಡ್ರಾಪ್ ಡೌನ್ ಅಲ್ಲಿ ಇರುವ ಪ್ರತಿ ಐಟಂ ಆಯ್ಕೆ ಮಾಡಿ ಅಲ್ಲಿ ಫಾಂಟ್ ಇದ್ದರೆ ಅದಕ್ಕೆ ಸೈಜ್ 12 ಸೆಟ್ ಮಾಡಿ.
ಸರಿ ಬಟನ್ ಕ್ಲಿಕ್ ಮಾಡಿ.
ಗುಣಗಳು ವಿಂಡೋ ನಲ್ಲೂ ಸರಿ ಬಟನ್ ಕ್ಲಿಕ್ ಮಾಡಿ.
ವಿಂಡೋಸ್ ಕನ್ನಡ ೬ವಿಂಡೋಸ್ ಕನ್ನಡ ೬
ಈಗ ನಿಮ್ಮ ಕಂಪ್ಯೂಟರ್ ಕನ್ನಡ ಮೆರೆದಾಡುತ್ತಿರುತ್ತದೆ. ಬಳಸಿ. ಮೊದ ಮೊದಲು ಡಿಫರಂಟ್ ಅನ್ನಿಸಿದ್ರೂ ಕಾಲಕ್ರಮೇಣ ಸಹಜ ಅನ್ನಿಸುತ್ತದೆ. ಅಕಸ್ಮಾತ್ ಯಾವುದಾದರೂ ಶಬ್ದ ಇನ್ನೂ ಚೆನ್ನಾಗಿ ಭಾಷಾಂತರಿಸಬಹುದಿತ್ತು ಅನ್ನಿಸಿದರೆ ಮೈಕ್ರೊಸಾಫ್ಟ್ ಅವರಿಗೆ ಸಲಹೆ ನೀಡಿ. ಅವರು ಪರಿಶೀಲಿಸುತ್ತಾರೆ.
ನಾನಂತೂ ವಿಂಡೋಸ್ ಅನ್ನು ಕನ್ನಡದಲ್ಲೇ ಬಳಸುತ್ತೇನೆ. ನೀವು ಇದನ್ನು ಈಗಾಗಲೇ ಬಳಸುತ್ತಿದ್ದೀರಾ? ಬಳಸಲಿದ್ದೀರಾ? ಅಥವಾ ಬಳಸಿದ್ದೀರಾ?ಕೆಳಗೆ ನಿಮ್ಮ ಅನಿಸಿಕೆ ಮೂಲಕ ತಿಳಿಸಿ. ಈಗಲೇ ಈ ಲೇಖನದ ಕೊಂಡಿಯನ್ನು ಕನ್ನಡ ಬಲ್ಲ ನಿಮ್ಮ ಗೆಳೆಯರಿಗೆ ಕಳುಹಿಸಿ. ಯಾರಿಗೆ ಗೊತ್ತು ಅವರಲ್ಲಿ ಕೆಲವರಾದರೂ ಇದನ್ನು ಬಳಸಬಹುದು. ಅದಕ್ಕಿಂತ ದೊಡ್ಡ ಕನ್ನಡ ಸೇವೆ ಇನ್ನೊಂದಿಲ್ಲ.

(ಈ ಲೇಖನವನ್ನು 'ವಿಸ್ಮಯ ನಗರಿ' ಯಿಂದ ಎರವಲು ಪಡೆಯಲಾಗಿದೆ)

No comments:

Post a Comment