Friday 17 September 2010

ವಿಂಡೋಸ್೭ಕ್ಕೆ ಕನ್ನಡದ ಹೊದಿಕೆ [ From- ಗಣಕಿಂಡಿ ]

ಮೈಕ್ರೋಸಾಫ್ಟ್ ವಿಂಡೋಸ್ ೭ ಕಾರ್ಯಾಚರಣೆಯ ವ್ಯವಸ್ಥೆಗೆ (ಆಪರೇಟಿಂಗ್ ಸಿಸ್ಟಮ್) ಕನ್ನಡದ ಹೊದಿಕೆ ಲಭ್ಯವಿದೆ. ಇದನ್ನು ಡೌನ್‌ಲೋಡ್ ಮಾಡಿಕೊಂಡು ಇನ್‌ಸ್ಟಾಲ್ ಮಾಡಿಕೊಂಡರೆ ವಿಂಡೋಸ್‌ನ ಬಹುಪಾಲು ಆದೇಶ ಮತ್ತು ಸಂದೇಶಗಳು ಕನ್ನಡ ಭಾಷೆಯಲ್ಲೇ ಬರುತ್ತವೆ. ಇದನ್ನು ಲಾಂಗ್ವೇಜ್ ಇಂಟರ್‌ಫೇಸ್ ಪ್ಯಾಕ್ ಎಂದು ಕರೆಯುತ್ತಾರೆ. ಇದರಲ್ಲಿ ದಿನನಿತ್ಯ ಬಳಕೆಗೆ ಬೇಕಾಗುವ ಶೇಕಡ ೮೦ ಕನ್ನಡದ ಅನುಭವ ಬರುವಂತೆ ಅನುವಾದ ಮಾಡಲಾಗಿದೆ. ಈ ಕನ್ನಡದ ಲಾಂಗ್ವೇಜ್ ಇಂಟರ್‌ಫೇಸ್ ಪ್ಯಾಕ್ ಅನ್ನು ಇಲ್ಲಿ    ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಧಿಕೃತ ವಿಂಡೋಸ್ ೭ ಇರುವವರು ಮಾತ್ರ ಇದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಹೊದಿಕೆಯನ್ನು ಅಳವಡಿಸಿದ ಮೇಲೆ ಗಣಕ ಪ್ರಾರಂಭಿಸಿದಾಗ ಇಂಟರ್‌ನೆಟ್ ಎಕ್ಸ್‌ಪ್ಲೋರರ್, ನೋಟ್‌ಪ್ಯಾಡ್, ಇತ್ಯಾದಿಗಳು ಕನ್ನಡದಲ್ಲಿರುತ್ತವೆ. ಅಂದರೆ ಅವುಗಳ ಮೆನುಗಳು ಕನ್ನಡ ಭಾಷೆಯಲ್ಲಿರುತ್ತವೆ. ಸಂವಾದ ಚೌಕಗಳೂ ಕನ್ನಡ ಭಾಷೆಯಲ್ಲಿ ಕಾಣಿಸುತ್ತವೆ. ಆದರೆ ಸಹಾಯ ಕಡತಗಳು ಮಾತ್ರ ಇಂಗ್ಲೀಷಿನಲ್ಲಿರುತ್ತವೆ.

3 comments:

  1. This comment has been removed by a blog administrator.

    ReplyDelete
  2. This comment has been removed by a blog administrator.

    ReplyDelete
  3. This comment has been removed by the author.

    ReplyDelete