Sunday 30 January 2011

ವರ್ಡನಲ್ಲಿ ಬರೆದಿದ್ದನ್ನು ಇಮೇಜ್ ಗೆ ಪರಿವರ್ತಿಸಿ

MS ವರ್ಡನಲ್ಲಿ ಟೈಪ್ ಮಾಡಿದ ಪಠ್ಯವನ್ನು ಕೆಲವೊಮ್ಮೆ ಇಮೇಜ್ ಗೆ ಪರಿವರ್ತಿಸುವ ಸಂದರ್ಭಗಳು ಬಂದಿರ ಬಹುದು , ಅದಕ್ಕಾಗಿ ಮಾರುಕಟ್ಟೆಯಲ್ಲಿ ಹಲವಾರು ತಂತ್ರಾಂಶಗಳಿವೆ (ಕೆಲವೊಮ್ಮೆ ಇದರಿಂದ ದೊರಕುವ ಚಿತ್ರ(Image) ಗಳ ಗುಣಮಟ್ಟ ಕೂಡ ಕಡಿಮೆ ಇರುತ್ತದೆ,)
ತಂತ್ರಾಂಶಗಳನ್ನು ಬಳಸದೇ ಇಮೇಜ್ ಗೆ ಪರಿವರ್ತಿಸುವ ಸುಲಭ ವಿಧಾನವೊಂದನ್ನು ನಾ ಕಂಡುಕೊಂಡಿದ್ದೆನೆ, ಅದೆನೆಂದರೆ
ಮೊದಲು ನಿಮ್ಮ ಪಠ್ಯವನ್ನು ಟೈಪ್ ಮಾಡಿಕೊಳ್ಳಿ.
ನಂತರ Ctrl+P ಒತ್ತಿರಿ

ಪ್ರಿಂಟರ್ Name ನಲ್ಲಿ Send to oneNote 2007 ನ್ನು ಆಯ್ಕೆ ಮಾಡಿ
 ok Click ಮಾಡಿ
ನಂತರ  oneNote ನಲ್ಲಿ ನಿಮ್ಮ ದಾಕ್ಯುಮೆಂಟ್ ತೆರೆದುಕೊಳ್ಳುವುದು

ದಾಕ್ಯುಮೆಂಟ್ ನ ಮೇಲೆ ಬಲಗಡೆ ಕ್ಲಿಕ್ ಮಾಡಿ Save As ಆಯ್ಕೆ ಮಾಡಿ


ಈಗ ನಿಮ್ಮ ದಾಕ್ಯುಮೆಂಟ್ JPEG ಪಾರ್ಮೆಟ್ ನಲ್ಲಿ ಸೇವ್ ಆಗುವುದು





Monday 10 January 2011

ಐದು ರೂಪಾಯಿ ಮತ್ತು ಓ ಮನಸೇ

          ಯಾವುದೇ ಊರಿಗೆ ಹೋದರೂ ಬರುವಾಗ ಕೆಲವು ಪುಸ್ತಕಗಳನ್ನು ಕೊಂಡು ತರುವ ಖಯಾಲಿ ನನ್ನದು, ಮೊನ್ನೆ ಕೂಡ ಈಗೇ ಆಯ್ತು ಬೆಂಗಳೂರಿಗೆ ಹೋದಾಗ ಹಲವು ಸೆಕೆಂಡ್ ಹ್ಯಾಂಡ್ ಪುಸ್ತಕಗಳನ್ನೂ ಹೊತ್ತುತಂದೆ ಅವುಗಳಲ್ಲಿ ರವಿ ಬೆಳಗೆರೆಯ ಓ ಮನಸೇ ಕೂಡ 2-3 ಇದ್ದವು. ಓ ಮನಸೇ ಯ ಒಂದನೇ ಸಂಚಿಕೆಯಿಂದ ತಪ್ಪದೇ ಕೊಂಡು ಓದಿದಂತವನು ನಾನು, ಯಾಕೋ ಇತ್ತೀಚೆ ಬೆಳಗೆರೆಯ ಬರಹಗಳು ಸರಿ ಬರುತ್ತಿಲ್ಲ, ಅವನ ಬರಹಗಳಿಗೆ ಹಿಂದಿನ ಮೊನಚುತನ ಇಲ್ಲ.
ಬಹುಶಃ ದುಡ್ಡು ಮಾಡುವ ಹುಂಬತನಕ್ಕೆ ಇಳಿದಿರಬಹುದು, ಯಾಕೆಂದರೆ ಮೊನ್ನೆ ನಾನು ಕೊಟ್ಟ 5 ರೂಪಾಯಿ ( ಸೆಕೆಂಡ್ ಹ್ಯಾಂಡ್ ಓ ಮನಸೇ ಗೆ) ಕೂಡ ವೇಸ್ಟ ಆಯಿತಲ್ಲ ಅಂತ ಅನ್ನಿಸಿ ಬಿಡ್ತು. ಯಾಕೆಂದರೆ ಅದರಲ್ಲಿ ಏನೊಂದು ವಿಷಯ ಇರಲಿಲ್ಲ ಮೊದಲ ಸಂಚಿಕೆಗಲ ಕಥೆಗಳನ್ನೇ ಮತ್ತೆ ಮತ್ತೆ ಕೊಟ್ಟಿದ್ದಾನೆ. ಅವನ ಫ್ಯಾಮಿಲಿ ಬಗ್ಗೆ ಕೇಳಿ ಕೇಳಿ (Sorry ಓದಿ ಓದಿ) ತಲೆ ಕೆಟ್ಟು ಹೋಗಿದೆ, ಮೊದಲೆಲ್ಲ ಅವನ ಲೇಖನಗಳೆಂದರೆ ಹುಚ್ಚೆದ್ದು ಓದುತ್ತಿದ್ದ ನಾನು ಈಗ ಹುಚ್ಚೆದ್ದು ಓಡುತ್ತಿದ್ದೆನೆ,

  ಹೌದು, ಅವನ ಬರಹದಲ್ಲೇನಿದೆ ಎಂದು ಕುಳಿತಲ್ಲೇ ಊಹಿಸಬಹುದಾಗಿದೆ, ಅವನ ಫ್ಯಾಮಿಲಿ, ಅವನ ವಿದೇಶಿ ಟೂರು, ಅವನ ಸ್ಟಾಫ್, ಅದ್ಯಾವುದೋ ಕಿತ್ತೋಗಿರೊ ಅವನ Love ಸ್ಟೋರಿ ಅಬ್ಬಾ!! ನಮಗೇ ಇಷ್ಟು ಹಿಂಸೆಯಾಗುತ್ತಲ್ಲ ಪಾಪ ಅವನ ಆಫೀಸಿನಲ್ಲಿ ಕೆಲಸ ಮಾಡುತ್ತಿರುವವರಿಗೆ ಹೇಗಾಗಿರಬೇಡ??
ಇನ್ನೊಂದು ಮುಖ್ಯವಾದ ವಿಷಯ ಏನಪ್ಪ ಅಂದ್ರೆ ಅವನ ಅಳಿಯ (ಶ್ರೀನಗರ ಕಿಟ್ಟಿ) ಮಾಡಿರೋ ಎಲ್ಲಾ ಫಿಲಂಗಳು "ತುಂಭಾ ಚೆನ್ನಾಗಿರುತ್ತವೆ, ಅದರಲ್ಲೂ ಅವನ ನಟನೆಯಂತು ಸೂಪರ್" ಈ ರೀತಿ ಬರೆದರೆ ನಂಬೊಕೆ ನಾವೇನು ಕಿವಿಯಲ್ಲಿ ಹೂ ಇಟ್ಟುಕೊಂಡಿದಿವಾ?

ಅದೇನೇ ಇರಲಿ ನನ್ನ ನೆಚ್ಚಿನ ಬರಹಗಾರನೊಬ್ಬನು ಈ ರೀತಿಯ ಹಾದಿ ತುಳಿಯುತ್ತಿರುವುದು ನನಗೆ ಬೇಸರವನ್ನುಂಟುಮಾಡಿದೆ

Saturday 8 January 2011

ಕೃತಿ ಚೌರ್ಯ

ಇವತ್ತು ಕನ್ನಡಹನಿಗಳು ಡಾಟ್ ಕಾಂ ನಲ್ಲಿ ಒಂದು ವಾಕ್ಯ ಎದ್ದು ಕಾಣುತ್ತಿತ್ತು ಅದೇನೆಂದರೆ

"ಕನ್ನಡಹನಿಗಳಲ್ಲಿ ಹೊಸ ಕವಿತೆ ಬರೆದರೆ ಅದು ಕವಿತ್ವ...
ಕನ್ನಡಹನಿಗಳನ್ನೇ ಕದ್ದು ಬೇರೆಡೆ ಬರೆದರೆ ಅದು ಕಪಿತ್ವ
ಸೃಜನ ಶೀಲತೆಯನ್ನು ಪ್ರೋತ್ಸಾಯಿಸುವುದೇ ನೈಜತ್ವ " ಅಂತ ಈ ವಿಷಯ ಇಲ್ಲಿ ಯಾಕೆ ಬಂತು ಅಂತಿರಾ? ಕೆಲವು ವರ್ಷಗಳ ಹಿಂದೆ ಯಾವುದಾದರೂ ಲೇಖಕರು ಒಂದು ಕೃತಿ ಬರೆದರೆ ಅದರಲ್ಲಿನ ಯಾವುದೇ ಸಾಲುಗಳನ್ನಗಲಿ ಅಥವಾ ಕದಿಯುತ್ತಿರಲಿಲ್ಲ ಒಂದುವೇಳೆ ಬಳಸಲೇ ಬೇಕಾದ ಸಂದರ್ಭ ಬಂದಾಗ ಆ ಲೇಖಕರ ಅನುಮತಿಯನ್ನು ಪಡೆಯುತ್ತಿದ್ದರು. ಹಾಗೂ ಪುಸ್ತಕದ ಹೆಸರನ್ನು ಮತ್ತು ಲೇಖಕರ ಹೆಸರನ್ನು ಉಲ್ಲೇಖಿಸುತ್ತಿದ್ದರು.
ಆದರೆ ಈಗ ಕಾಲ ಬದಲಾಗಿದೇ ತಂತ್ರಜ್ಞಾನ ಮುಂದುವರೆದಂತೆಲ್ಲ ಕೃತಿಚೌರ್ಯದ ಹಾವಳಿ ಹೈಟೆಕ್ ಆಗುತ್ತಿದೆ, ಬರೆಯುವುದಕ್ಕೆ ಪುರುಸೊತ್ತಿಲ್ಲವೆಂದು ಸುಲಭವಾಗಿ Copy & Paste ಮಾಡುತ್ತಾರೆ, ಇನ್ನುಕೆಲವರು ಆ ಕಥೆ/ಕವಿತೆ ತನ್ನದೇನೋ ಎಂಬಂತೆ ತಮ್ಮ ಬ್ಲಾಗ್ ಗಳಲ್ಲಿ ಅಲಂಕರಿಸಿರುತ್ತಾರೆ.

'ನಿಮ್ಮ ಮಗುವನ್ನು ಬೇರೊಬ್ಬರು ತನ್ನ ಮಗುವೆಂದರೆ ನಿಮಗೆಹೇಗಾಗಿರಲಿಕ್ಕಿಲ್ಲ?' ನೀವೇ ಹೇಳಿ.ಈ ರೀತಿ ಮಾಡಿದಾಗ ಎಂಥವನೇ ಆದರೂ ಬರೆಯಲು ಹಿಂದೇಟಾಕುತ್ತಾನೆ.ಆತನ ಬರವಣಿಗೆ ಕುಸಿಯುತ್ತದೆ, ಹಾಗಾಗದಿರಬೇಕಾದರೆ ಅವನಿಗೆ ಸಲ್ಲಬೇಕಾದ ಗೌರವ ಸಲ್ಲಬೇಕು
ಇನ್ನುಮುಂದೆ ನಾವುಗಳೂ ಕೂಡ ಬೇರೆಯವರ ಲೇಖನಗಳನ್ನು ಉಪಯೋಗಿಸುವಾಗ ಅವರನ್ನು ನೆನೆಯೋಣ

ಅಂದಹಾಗೆ ಕನ್ನಡಹನಿಗಳಲ್ಲಿರುವ ಆ ಸಾಲುಗಳನ್ನು ಬರೆದವನು ನಾನೇ, ನನ್ನ ಸಾಲುಗಳಿಗೆ ಬೆಲೆಕೊಟ್ಟು ಅಲ್ಲಿ ಪ್ರಕಟಿಸಿದ ಸಂತೋಷರವರಿಗೆ ನಾನು ಅಭಾರಿಯಾಗಿದ್ದೆನೆ

Friday 7 January 2011

ಅನರ್ಥ ಕೋಶ



ಡಾಕ್ಟರ್ - ಯಮಧರ್ಮರಾಯನ ಏಜೆಂಟ್
ಜೈಲು - ಮಂತ್ರಿಗಳ ಬೇಸಿಕ್ ಟ್ರೈನಿಂಗ್
ಕಾಯಿಲೆ - ದೇಹವು ಆತ್ಮಕ್ಕೆ ಕಟ್ಟುವ ಕಂದಾಯ
ಸೂರ್ಯ - ಕತ್ತಲಾದಾಗ ಹೊರಬರದ ಹೇಡಿ
ರೆಪ್ಪೆ - ಕಣ್ಣಿನ ಮೇಲೆ ಇರುವ ಭೂತ
ಹಾಲು - ದ್ರವ ರೂಪದ ಹಸುವಿನ ಮಾಂಸ
ಹೋಟೆಲ್ - ಪರಸ್ಪರ ಎಂಜಲನ್ನು ಸಾರ್ವಜನಿಕರು ಹಂಚಿಕೊಳ್ಳುವ ಕ್ಷೇತ್ರ
ಫಾಲಿಡಾಲ್ - ಬೇಜಾರಾದಾಗ ಸಂತೊಷಕ್ಕೆ ತೆಗೆದುಕೊಳ್ಳುವ ಶುದ್ದ ಔಷದ
ಅನುಭವ - ಈಗ ಮಾಡುವ ತಪ್ಪುಗಳಿಗೆ ನಾಳೆಕೊಡುವ ಹೆಸರು
ಜಾಣತನ - ಮೋಸ ಮಾಡಿ ತಪ್ಪಿಸಿಕೊಳ್ಳುವ ಶಕ್ತಿ
ತಿರುಪೆ - ನಮ್ಮ ದೇಶದಲ್ಲಿ ಬಂಡವಾಳವಿಲ್ಲದ ಒಂದು ದೊಡ್ಡ ಕೈಗಾರಿಕೆ
ಕಳ್ಳ - ಅನ್ಯರ ಆಸ್ತಿಗೆ ಒಡೆಯ
ಅಗಸ - ಇತರರ ಬಟ್ಟೆಗಳನ್ನು ಚೆನ್ನಾಗಿ ಧರಿಸುವ ವ್ಯಕ್ತಿ..
ಜ್ಯೋತಿಷಿ - ಅನ್ಯರ ದುಡ್ಡಿನಿಂದ ತನ್ನ ಭವಿಷ್ಯ ರೂಪಿಸಿ ಕೊಳ್ಳುವವ.
ವಕೀಲ - ನ್ಯಾಯ ದೇಗುಲದಲ್ಲಿ ಅನ್ಯಾಯ ಎತ್ತಿ ಹಿಡಿಯುವ ವ್ಯಕ್ತಿ.
Mathemetics(ಮೆಂತೆ ಮೆಣಸಿನಕಾಯಿ) - ಮೆಂತೆ ಮೆಣಸಿನಕಾಯಿ ನೆಂಚಿಕೊಂಡು ಮೊಸರು ಅನ್ನ ತಿಂದು ಮಲಗುವದು.
Arithmetic(ಅರಿತ ಮೆಟ್ರಿಕ್ ) - ಅರಿತ ಮೇಲೆ ಮೆಟ್ರಿಕ್ ಪಾಸಾಗ ಬಹುದೇನೋ?.
Algebra(ಎಲ್ಲ ಗೊಬ್ರ ) - ಇದು ನಮ್ಮ ಹೊಲಕ್ಕೆ ಹಾಕಿದರೆ ಬೆಳೆ ಚೆನ್ನಾಗಿ ಬರುತ್ತೆ.
Geometry(ಗೋ ಮೂತ್ರ ) - ಗೋ ಮೂತ್ರ ತುಂಬಾ ಪವಿತ್ರವಾದುದು. ಅದಕ್ಕೆ ತುಂಬಾ ಔಷಧಿಯ ಗುಣಗಳು ಇರುತ್ತವೆ.
Trignometry (ತಿರಗೋಣು ಮತ್ತೆ ) - ಮತ್ತೆ ಮತ್ತೆ ತಿರುಗಿ ಕಲಿಯೂ ಸೂತ್ರ
Calculas (ಖಾಲಿ ಕೆಲಸ) - ಇದನ್ನು ಕಲಿತ್ತಿದ್ದರೆ ಕೆಲಸ ಖಾಲಿ ಇರಬಹುದು.
physics (ಫಿಸಿಕ್ ) - ಕಟ್ಟು ಮಸ್ತಾದ ದೇಹ(ಯಾರದು ಅಂತ ಕೇಳಬೇಡಿ?).
chemistry(ಕೆಮ್ಮು ಎಷ್ಟುರಿ ?) - ಕದ್ದು ಸೇದುವ ಸಮಯದಲ್ಲಿ ಬರುವ ವ್ಯಾಧಿ.
sociology (ಸೋಸಿ ಒಳಗೆ) - ಮಿತ್ರರನ್ನು ಮಾಡಿಕೊಳ್ಳುವಾಗ ಬಳಸುವ ಸೂತ್ರ.
biology(ಭಯಾಲಜಿ) - ಪರೀಕ್ಷೆ ಮುಂಚೆ ಬರುವ ವ್ಯಾಧಿ.
-- ಕನ್ನಡ ಹನಿಗಳಿಂದ ಆರಿಸಲಾಗಿದೆ