Monday 29 August 2011

ಟಿವಿ ಹೆಸರು ಗೊತ್ತಿಲ್ಲ! ಆದರೂ ಕೆಲಸ ಖಾಲಿ ಇದೆ!

ಟಿವಿ ಹೆಸರು ಗೊತ್ತಿಲ್ಲ! ಆದರೂ ಕೆಲಸ ಖಾಲಿ ಇದೆ! ಷರತ್ತುಗಳನ್ನು ಓದದೇ ಅರ್ಜಿ ಹಾಕಬೇಡಿ. ಈ ರೀತಿಯ ಜಾಹೀರಾತೊಂದು ಮಾಧ್ಯಮ ವಲಯದಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿದೆ. ಇದು ಯಾವ ವಾಹಿನಿ ಇರಬಹುದು? ಯಾವ ಯಾವ ಕೆಲಸಗಳು ಖಾಲಿ ಇವೆ ಎಂಬ ಅತೀವ ಕುತೂಹಲ ಮಾಧ್ಯಮ ಮಿತ್ರರನ್ನು ಥಕತೈ ಎಂದು ಕುಣಿಯುವಂತೆ ಮಾಡಿದೆ.

ಟಿವಿ ವಾಹಿನಿಯ ಷರತ್ತುಗಳು ಹೀಗಿವೆ. ತಂಡ ಸ್ಫೂರ್ತಿ ಇದ್ದರೆ ಮಾತ್ರ. ಅನುಭವ ಇಲ್ಲದಿದ್ದರೂ ಸರಿ, ವಿಪರೀತ ಅನುಭವ ಮಾತ್ರ ಬೇಡವೇ ಬೇಡ. ಗಡಿಯಾರ ನೋಡದ ಅಭ್ಯಾಸ ಇದ್ದವರು. ಕಷ್ಟ ಮಾರ್ಗದಲ್ಲಿ ಕಲಿಯುವ ಭರವಸೆ ಇದ್ದವರು. 25 ರಿಂದ 35 ವರುಷದ ಒಳಗಿನವರು.

ಯಾವ ಯಾವ ಹುದ್ದೆಗಳು ಖಾಲಿ ಇವೆ. ವರದಿಗಾರರು, ಕಾಪಿ ಎಡಿಟರ್‌ಗಳು, ಕ್ಯಾಮೆರಾ ಮೆನ್‌ಗಳು, ವಿಡಿಯೋ ಎಡಿಟರ್‌ಗಳು, ಆಂಕರ್‌ಗಳು (ಅರ್ಜಿ ಜೊತೆ ಫೋಟೋ ಕಳುಹಿಸಿ), ಮೇಕಪ್ ಮೆನ್‌ಗಳು, ಗ್ರಾಫಿಕ್ ಕಲಾವಿದರು, ಆನ್‌ಲೈನ್ ಆಡಿಯೋ ವಿಡಿಯೋ ಎಡಿಟರ್‌ಗಳು. ಇಂದಿನಿಂದ(ಆಗಸ್ಟ್ 26, 2011) ಏಳು ದಿನಗಳ ಒಳಗೆ ಅರ್ಜಿ ಕಳುಹಿಸಬೇಕು.

ವಿಳಾಸ: Writemen Media Private Limited, # 57, 4th Main, MLA Layout, RT Nagar, Banaglore-560032. Email: writemenjobs@gmanil.com, writemenjobs@rediffmail.com. ಸೂಚನೆ: ಅರ್ಜಿಯಲ್ಲಿ ಯಾವ ಹುದ್ದೆಗೆ ಎಂದು ನಮೂದಿಸಿ. ಅರ್ಜಿ ಕಳುಹಿಸಿದ ಮೇಲೆ ದೂರವಾಣಿ ಕರೆ ಮಾಡಬೇಡಿ! ಆಲ್ ದ ಬೆಸ್ಟ್. (ದಟ್ಸ್‌ಕನ್ನಡ ವಾರ್ತೆ)

Saturday 2 July 2011

ಮಲ್ಲೇಶ್ವರಂನ Dominos Pizza ದಲ್ಲಿ ಹುಡುಗ / ಹುಡುಗಿಯರಿಗೆ ಕೆಲಸ ಖಾಲಿ ಇದೆ

 ನಮ್ಮ ಸ್ನೇಹಿತ ಮಂಜುರವರು ಕೆಲಸವೊಂದನ್ನು ಹುಡುಕಿ ತಂದಿದ್ದಾರೆ

ಮಲ್ಲೇಶ್ವರಂನ Dominos Pizza ದಲ್ಲಿ ಹುಡುಗ / ಹುಡುಗಿಯರಿಗೆ ಕೆಲಸ ಖಾಲಿ ಇದೆ (Salary Rs.6000/- Above)  

Delivery Boys
Pizza Maker
Counter
Staff & etc.,

ಮಲ್ಲೇಶ್ವರಂ 5ನೇ ಅಡ್ಡರಸ್ತೆ,
ಬಿಗ್ ಬಜಾರ್ ಹತ್ತಿರ,
ಬೆಂಗಳೂರು - 560003.
 
ಹೆಚ್ಚಿನ ಮಾಹಿತಿಗೆ ಗೆಳಯ ಮಂಜುರವರನ್ನು ಸಂಪರ್ಕಿಸಿ 
ಅವರ ಮೊಬೈಲ್ ಸಂಖ್ಯೆ - 9060761447
 
ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಕೆಲಸಗಳ ಮಾಹಿತಿ ನೀಡಿ ನಮಗೆ ಸಹಾಯ ಮಾಡುತ್ತಿರುವ 'ಮಂಜು' ರವರಿಗೆ Thanks ಹೇಳೋಣ 

Saturday 25 June 2011

Toyota Kirloskar Company ನಲ್ಲಿ Diploma ಓದಿರುವವರಿಗೆ ಕೆಲಸ ಖಾಲಿ ಇದೆ

ಶ್ರೀ ಮಂಜು  ರವರು ಬೆಂಗಳೂರಿನಿಂದ ಕಳುಹಿಸಿದ ಮಾಹಿತಿ

Toyota Kirloskar Company ನಲ್ಲಿ Diploma ಓದಿರುವವರಿಗೆ ಕೆಲಸ ಖಾಲಿ ಇದೆ. 25/06/2011 ಕೊನೆಯ ದಿನ, ... ಹೆಚ್ಚಿನ ಮಾಹಿತಿಗಾಗಿ ಈ http://www.toyotabharat.com/inen/careers/index.aspx ನ್ನು ನೋಡಿ...

Wednesday 4 May 2011

ಕನ್ನಡದಲ್ಲಿ ಮೈಕ್ರೋಸಾಫ್ಟ್ ವಿಂಡೋಸ್ ಹಾಗೂ ಆಫೀಸ್ ಬಳಸುವದು ಹೇಗೆ?

ಇಂದು ಕಂಪ್ಯೂಟರ್ ನಲ್ಲಿ ಕನ್ನಡ ಬಳಸುವದು ಎಂದರೆ ಬರಹ ಅಥವಾ ನುಡಿ ಇನ್ಸ್ಟಾಲ್ ಮಾಡಿ ಬಳಸುವದು ಎಂಬ ಭಾವನೆ ನಮ್ಮದು. ಇದಕ್ಕೆ ಹೊರತಾಗಿ ಇಡೀ ವಿಂಡೋಸ್ ಆಪರೇಟಿಂಗ್ ಸಿಸ್ಟೆಮ್ ಗೆ ಕನ್ನಡ ಇಂಟರ್ ಫೇಸ್ ಇದೆ ಎಂಬುದು ಎಷ್ಟು ಜನರಿಗೆ ತಿಳಿದಿದೆ? ಎಷ್ಟು ಜನ ಕನ್ನಡಿಗರು ಬಳಸುತ್ತಿದ್ದಾರೆ?
ನಿಮ್ಮಲ್ಲಿ ವಿಂಡೋಸ್ ಎಕ್ಸ್ ಪಿ, ವಿಂಡೋಸ್ ವಿಸ್ತಾ ಅಥವಾ ವಿಂಡೋಸ್ 7 ಇದ್ದರೆ ಅದಕ್ಕೆ ಸಂಪೂರ್ಣ ಕನ್ನಡ ಇಂಟರ್ ಫೇಸ್ ಇದೆ. ಮೈಕ್ರೊಸಾಫ್ಟ್ ತನ್ನ ಭಾಷಾ ಇಂಡಿಯಾ ಪ್ರಾಜೆಕ್ಟ್ ಅಡಿಯಲ್ಲಿ ಭಾರತದ ಹಲವು ಭಾಷೆಗಳಿಗೆ ವಿಂಡೋಸ್ ಹಾಗೂ ಆಫೀಸ್ ಪ್ರಾಡಕ್ಟ್ ಗಳನ್ನು ಭಾಷಾಂತರಿಸಿದೆ.ಇದರಲ್ಲಿ ಕನ್ನಡವೂ ಒಂದು.ಇದು ಪ್ರಪಂಚಾದ್ಯಂತ ಕನ್ನಡಿಗರಿಗೆ ಸುಮಾರು ಐದು ವರ್ಷಗಳಿಂದ ಲಭ್ಯವಿದೆ. ಆದ್ರೆ ಎಷ್ಟು ಜನ ಬಳಸುತ್ತಿರಬಹುದು? ಗೊತ್ತಿಲ್ಲ.
ಸಾಮಾನ್ಯವಾಗಿ ನಾವೆಲ್ಲ ಕೆಲಸ ಮಾಡುವ ಆಫೀಸಿನಲ್ಲಿ ಬಳಸುವ ಕಂಪ್ಯೂಟರ್ ಗಳಲ್ಲಿ ಕನ್ನಡ ಇಂಟರ್ ಫೇಸ್ ಹಾಕಿಕೊಳ್ಳಲು ಅನುಮತಿ ನೀಡುವದಿಲ್ಲ.ಆದರೇನಾಯ್ತು ಕನಿಷ್ಟ ಪಕ್ಷ ನಮ್ಮ ನಿಮ್ಮ ಪರ್ಸನಲ್ ಡೆಸ್ಕಟಾಪ್ ನಲ್ಲಿ ಅಥವಾ ಲ್ಯಾಪಟಾಪ್ ನಲ್ಲಿ ಅಥವಾ ಬ್ರೌಸಿಂಗ್ ಸೆಂಟರ್, ಸ್ಕೂಲ್, ಡಿಟಿಪಿ ಸೆಂಟರ್ ನ ಕಂಪ್ಯೂಟರ್ ಗಳಲ್ಲಿ ಈ ಕನ್ನಡ ಇಂಟರ್ಫೇಸ್ ಹಾಕಿಕೊಂಡು ಬಳಸುವ ಅವಕಾಶ ಇದ್ದೇ ಇದೆ. ಈ ಮೂಲಕ ನಮ್ಮ ಕನ್ನಡ ಭಾಷೆಯನ್ನು ಬೆಳೆಸುವ ಅವಕಾಶ ನಿಮ್ಮದಿದೆ.

ನಾವು ಯಾಕೆ ವಿಂಡೋಸ ಕನ್ನಡವನ್ನು ಕಂಪ್ಯೂಟರ್ ಗಳಲ್ಲಿ ಬಳಸಬೇಕು?

ನೆನಪಿಡಿ ವಿಂಡೋಸ್ ನಂತಹ ಪರಿಪೂರ್ಣ ಆಪರೇಟಿಂಗ್ ಸಿಸ್ಟೆಮ್ ಹಾಗೂ ಆಫೀಸು ಸಾಫ್ಟವೇರ್ ತಯಾರಿಸಲು ವಾರ್ಷಿಕ ಸಹಸ್ರಾರು ಕೋಟಿ ರುಪಾಯಿ ಹಣ ಬೇಕಾಗುತ್ತದೆ. ಕನ್ನಡದಲ್ಲಿ ಅಷ್ಟು ಹಣ ಹಾಕಿ ವಾಪಸ್ ಬರುವದಿಲ್ಲ. ಅಷ್ಟೊಂದು ಹಣ ಪ್ರತಿವರ್ಷ ದಾನ ಮಾಡುವಷ್ಟು ದಾರಾಳಿಗಳು ಯಾರೂ ಇಲ್ಲ. ಅಷ್ಟು ಖರ್ಚು ಮಾಡಿದರೂ ಇಂತಹ ಆಪರೇಟಿಂಗ್ ಸಿಸ್ಟೆಮ್ ನಿರ್ಮಿಸಲು ಆಗುತ್ತೆ ಎಂಬುದಕ್ಕೆ ಖಾತರಿ ಇಲ್ಲ.ಇದಕ್ಕೆ ವಿಂಡೋಸ್ ಹಾಗೂ ಆಫೀಸು ನೀಡಿರುವ ಈ ಕನ್ನಡ ಇಂಟರ್ಫೇಸ್ ಬಳಸಿ ಏನೆ ಕುಂದು ಕೊರತೆ ಇದ್ದರೂ ಅವರಿಗೆ ದೂರು ನೀಡಿ ಸರಿ ಪಡಿಸಿಕೊಳ್ಳುವದರಲ್ಲಿದೆ ಜಾಣತನ.
ನೆನಪಿಡಿ ನಾವು ಹೆಚ್ಚು ಹೆಚ್ಚು ಇನ್ಸ್ಟಾಲ್ ಮಾಡಿ ಬಳಸಿದಷ್ಟೂ ಮೈಕ್ರೋಸಾಫ್ಟ್ ಗೆ ಮುಂದಿನ ವಿಂಡೋಸ್ ಅವತರಣಿಕೆಯನ್ನು ಕನ್ನಡಕ್ಕೆ ತರುವ ಇದಕ್ಕಾಗಿ ಲಕ್ಷಾಂತರ ಹಣ ಖರ್ಚು ಮಾಡುವ ಮನಸ್ಸು ಬರುತ್ತದೆ.ಯಾರಿಗೆ ಗೊತ್ತು ಇತರ ಆಪರೇಟಿಂಗ್ ಸಿಸ್ಟೆಮ್ ಆದ ಮ್ಯಾಕ್ ಹಾಗೂ ಗೂಗಲ್ ಅವರ ಅಂಡ್ರಾಯಿಡ್ ಅವರಿಗೂ ಕನ್ನಡದಲ್ಲಿ ತರಲು ಮನಸ್ಸಾದೀತು. ಇಲ್ಲಾಂದ್ರೆ ಬರುವದಿಲ್ಲ.
ಎಷ್ಟು ಜನ ಇನ್ಸ್ಟಾಲ್ ಮಾಡಿದ್ದಾರೆ ಬಳಸುತ್ತಿದ್ದಾರೆ ಎಂಬ ರಿಪೋರ್ಟ್ ಮೈಕ್ರೋಸಾಫ್ಟ್ ಅವರಿಗೆ ಲಭ್ಯ ಇರುತ್ತದೆ. ಕಡಿಮೆ ಜನ ಬಳಸುತ್ತಿದ್ದಾರೆ ಎಂದು ಕಂಡು ಬಂದರೆ ಮುಂದೆ ಇಂತಹ ಕಾರ್ಯಕ್ಕೆ ಕೈ ಹಾಕದಿರಬಹುದು. ಒಟ್ಟಿನಲ್ಲಿ ಕನ್ನಡವನ್ನು ಕಂಪ್ಯೂಟರ್ ನಲ್ಲಿ ಮೆರಸುವ ಅಥವಾ ಅಳಿಸಿಹಾಕುವ ಕೀಲಿ ಕೈ ನಮ್ಮ ಬಳಿಯೇ ಇದೆ. ಇದೇ ಮೈಕ್ರೊಸಾಫ್ಟ್ ಬಿಡುಗಡೆ ಮಾಡಿದ ತುಂಗಾ ಫಾಂಟು ಅಂತರ್ಜಾಲದಲ್ಲಿ ಕನ್ನಡ ಕ್ರಾಂತಿಗೆ ನಾಂದಿ ಹಾಡಿತು. ಇದನ್ನು ಕೂಡಾ ಹೆಚ್ಚು ಜನ ಬಳಸಿ ಅವರ ಶ್ರಮ ಸಾರ್ಥಕ ಗೊಳಿಸೋಣ. ಏನಂತೀರಾ?

ನನ್ನ ಲ್ಯಾಪ್ ಟಾಪ್ ನಲ್ಲಿ ವಿಂಡೋಸ್ ಕನ್ನಡ ಇಂಟರ್ ಫೇಸ್

ಈ ಮುಂದಿನ ಕೆಲವು ಚಿತ್ರ ನಿಮಗೆ ನನ್ನ ಕಂಪ್ಯೂಟರ್ ನಲ್ಲಿ ಇದನ್ನು ಹಾಕಿಕೊಂಡಿರುವದನ್ನು ನೋಡಬಹುದು.ಪ್ರತಿ ಮೆನುಗಳು ಕನ್ನಡಕ್ಕೆ ಬದಲಾಗುತ್ತದೆ.ಅಷ್ಟೇ ಅಲ್ಲ ವಿಂಡೋಸ್ ನೋಟ ಪ್ಯಾಡ್, ಎಕ್ಸ್ ಪ್ಲೋರರ್, ಮೂವಿ ಮೇಕರ್, ಕಾಲ್ಕುಲೇಟರ್ ಮತ್ತು ಗೇಮ್ ಗಳು ಹೀಗೆ ಎಲ್ಲವೂ ಕನ್ನಡಕ್ಕೆ ಭಾಷಾಂತರವಾಗುತ್ತದೆ. ನಾನು ಇಂಟರ್ ನೆಟ್ ಎಕ್ಸ್ಪ್ ಪ್ಲೋರರ್ ಹಾಗೂ ವಿಂಡೋಸ್ ಮಿಡಿಯಾ ಪ್ಲೇಯರ್ ಗಳನ್ನು ಅಪ್ ಗ್ರೇಡ್ ಮಾಡಿದ್ದರಿಂದ ಅವು ಆಗಲಿಲ್ಲ. ಬಹುಶಃ ವಿಂಡೋಸ್ ಅಪಡೇಟ್ ಮೂಲಕವೇ ಮಾಡಿದ್ದರೆ ಅವೂ ಆಗುತ್ತಿದ್ದವೇನೋ.
ಭಾಷಾಂತರದ ಗುಣಮಟ್ಟ ಅತ್ಯುತ್ತಮ ಎಂದು ನಾನು ಹೇಳಬಲ್ಲೆ. ಅಕಸ್ಮಾತ್ ಎಲ್ಲಿಯಾದರೂ ಲೋಪ ಇದ್ದರೆ ಅದಕ್ಕೆ ನಾವೇ ದೋಷಿಗಳು(ನಾನು ಸಹ). ಅವರಿಗೆ ಬಳಸಿ ಫೀಡ್ ಬ್ಯಾಕ್ ಕೊಟ್ಟಿದ್ದರೆ ಸರಿಪಡಿಸುತ್ತಿದ್ದರು. ನಾವು ಹಾಗೆ ಮಾಡಿಲ್ಲ.
ವಿಂಡೋಸ್ ಕನ್ನಡ ೧ವಿಂಡೋಸ್ ಕನ್ನಡ ೧
ವಿಂಡೋಸ್ ಕನ್ನಡ ೨ವಿಂಡೋಸ್ ಕನ್ನಡ ೨
ವಿಂಡೋಸ್ ಕನ್ನಡ ೩ವಿಂಡೋಸ್ ಕನ್ನಡ ೩
ವಿಂಡೋಸ್ ಕನ್ನಡ ೪ವಿಂಡೋಸ್ ಕನ್ನಡ ೪

 ನಿಮ್ಮ ಕಂಪ್ಯೂಟರ್ ಗಳಲ್ಲಿ ಇನ್ಸ್ಟಾಲ್ ಮಾಡುವದು ಹೇಗೆ?

ಸೂಚನೆ: ನಿಮ್ಮ ಬಳಿ ಒರಿಜಿನಲ್ ವಿಂಡೋಸ್ ಅಥವಾ ಆಫೀಸು ಇರಬೇಕು. ಕದ್ದ ವಿಂಡೋಸ ಅಥವಾ ಆಫೀಸು ಇರಬಾರದು.
 ಹಂತ ೧:
ಕೆಳಗೆ ವಿವಿಧ ಪ್ರಾಡಕ್ಟ್ ಗಳ ಕನ್ನಡ ಇಂಟರ್ ಫೇಸ್ ಪ್ಯಾಕ್ ಗಳ ಲಿಂಕ್ ನೀಡಲಾಗಿದೆ. ನಿಮಗೆ ಬೇಕಾದುದನ್ನು ಆಯ್ಕೆ ಮಾಡಿ ಕೊಳ್ಳಿ. ಅಲ್ಲಿಂದ ಪ್ಯಾಕ್ ಡೌನ್ ಲೋಡ್ ಮಾಡಿಕೊಳ್ಳಿ.ಮೊದಲು ನಿಮ್ಮ ವಿಂಡೋಸ್ ಇಂಟರ್ ಫೇಸ್ ಪ್ಯಾಕ್ ಹಾಕಿಕೊಂಡು ನಂತರ ಆಫೀಸು ಹಾಕಿಕೊಳ್ಳುವದು ಉತ್ತಮ.
ವಿಂಡೋಸ್ 7 ಕನ್ನಡ ಭಾಷೆಯ ಇಂಟರ್ ಫೇಸ್ ಪ್ಯಾಕ್
http://www.microsoft.com/downloads/details.aspx?FamilyID=a1a48de1-e264-48d6-8439-ab7139c9c14d&displaylang=kn
ವಿಂಡೋಸ್ ವಿಸ್ತಾ ಕನ್ನಡ ಭಾಷೆಯ ಇಂಟರ್ ಫೇಸ್ ಪ್ಯಾಕ್
http://www.microsoft.com/downloads/details.aspx?FamilyId=0E21EB7B-E01A-4FCC-B7F1-30E419DA7F5B&displaylang=kn
ವಿಂಡೋಸ್ ಎಕ್ಸ್ ಪಿ ಕನ್ನಡ ಭಾಷೆಯ ಇಂಟರ್ ಫೇಸ್ ಪ್ಯಾಕ್
http://www.microsoft.com/downloads/details.aspx?FamilyId=0DB2E8F9-79C4-4625-A07A-0CC1B341BE7C&displaylang=kn

ಆಫೀಸ್ 2003 ಕನ್ನಡ ಭಾಷೆಯ ಇಂಟರ್ ಫೇಸ್ ಪ್ಯಾಕ್
http://www.microsoft.com/downloads/details.aspx?displaylang=kn&FamilyID=ccf199bc-c987-48f5-9707-dc6c7d0e35d0
ಆಫೀಸ್ 2007 ಕನ್ನಡ ಭಾಷೆಯ ಇಂಟರ್ ಫೇಸ್ ಪ್ಯಾಕ್
http://www.microsoft.com/downloads/details.aspx?FamilyID=91426c33%2Dea45%2D482d%2Daf08%2Dcd8ea8cbfd53&displaylang=kn
ಆಫೀಸ್ 2010 ಕನ್ನಡ ಭಾಷೆಯ ಇಂಟರ್ ಫೇಸ್ ಪ್ಯಾಕ್
http://www.microsoft.com/downloads/details.aspx?displaylang=kn&FamilyID=cfec65b7-131c-440f-953f-43731fdabb8b

ಹಂತ ೨:

ಮೈಕ್ರೋಸಾಫ್ಟನ ಡೌನ್ ಲೋಡ ಪುಟದಲ್ಲಿ ಕೆಳಗೆ ಸ್ಕ್ರೋಲ್ ಮಾಡಿದರೆ ಆಯಾ ಪ್ಯಾಕ್ ನ ಇನ್ಸ್ಟಾಲೆಶನ್ ವಿವರ ಕಾಣಬಹುದು.
LIPSetup.msi ಮೇಲೆ ಕ್ಲಿಕ್ ಮಾಡಿ.
I Accept the license agreement ಆಯ್ಕೆ ಮಾಡಿ.
Next ಕ್ಲಿಕ್ ಮಾಡಿ.
ಮುಂದೆ ಮತ್ತೆ Next ಕ್ಲಿಕ್ ಮಾಡಿ.
ಮುಂದಿನ ಪುಟದಲ್ಲಿ Install ಕ್ಲಿಕ್ ಮಾಡಿ.
Ok ಕ್ಲಿಕ್ ಮಾಡಿ. ಕಂಪ್ಯೂಟರ್ ಅನ್ನು ರಿಸ್ಟಾರ್ಟ್ ಮಾಡಿ.

ಹಂತ ೩:

ನೀವು ವಿಂಡೋಸ್ ಹಾಗೂ ಅಫೀಸ್ ಎರಡರ ಕನ್ನಡ ಇಂಟರ್ ಫೇಸ್ ಇನ್ಸ್ಟಾಲ್ ಮಾಡುತ್ತಿದ್ದರೆ ಇದನ್ನು ಒಮ್ಮೆ ಮಾಡಿದರೆ ಸಾಕು. ಇದು ಕನ್ನಡ ಫಾಂಟುಗಳನ್ನು ಇನ್ನಷ್ಟು ಸುಂದರವಾಗಿ ತೋರಿಸುವಂತೆ ಮಾಡುತ್ತದೆ.
ರೈಟ್ ಕ್ಲಿಕ್ ಮಾಡಿ. ಮೆನುನಲ್ಲಿ ಗುಣಗಳು ಆಯ್ಕೆ ಮಾಡಿ.
ತೋರಿಕೆ ಟ್ಯಾಬ್ ಆಯ್ಕೆ ಮಾಡಿ.
ಸ್ಕ್ರೀನ್ ಫಾಂಟು ಅಂಚು ಮೃದು ಮಾಡಲು ಕೆಳಗಿನ ಪದ್ಧತಿ ಬಳಸು ಕೆಳಗೆ
ClearType ಆಯ್ಕೆ ಮಾಡಿ
ಸರಿ ಬಟನ್ ಕ್ಲಿಕ್ ಮಾಡಿ.
ವಿಂಡೋಸ್ ಕನ್ನಡ ೫ವಿಂಡೋಸ್ ಕನ್ನಡ ೫
ತೋರಿಕೆ ಟ್ಯಾಬ್ ಕೆಳಗೇ ಇರುವ ಆಧುನಿಕ ಬಟನ್ ಕ್ಲಿಕ್ ಮಾಡಿ.
ಇದರಲ್ಲಿ ಐಟಂ ಡ್ರಾಪ್ ಡೌನ್ ಅಲ್ಲಿ ಇರುವ ಪ್ರತಿ ಐಟಂ ಆಯ್ಕೆ ಮಾಡಿ ಅಲ್ಲಿ ಫಾಂಟ್ ಇದ್ದರೆ ಅದಕ್ಕೆ ಸೈಜ್ 12 ಸೆಟ್ ಮಾಡಿ.
ಸರಿ ಬಟನ್ ಕ್ಲಿಕ್ ಮಾಡಿ.
ಗುಣಗಳು ವಿಂಡೋ ನಲ್ಲೂ ಸರಿ ಬಟನ್ ಕ್ಲಿಕ್ ಮಾಡಿ.
ವಿಂಡೋಸ್ ಕನ್ನಡ ೬ವಿಂಡೋಸ್ ಕನ್ನಡ ೬
ಈಗ ನಿಮ್ಮ ಕಂಪ್ಯೂಟರ್ ಕನ್ನಡ ಮೆರೆದಾಡುತ್ತಿರುತ್ತದೆ. ಬಳಸಿ. ಮೊದ ಮೊದಲು ಡಿಫರಂಟ್ ಅನ್ನಿಸಿದ್ರೂ ಕಾಲಕ್ರಮೇಣ ಸಹಜ ಅನ್ನಿಸುತ್ತದೆ. ಅಕಸ್ಮಾತ್ ಯಾವುದಾದರೂ ಶಬ್ದ ಇನ್ನೂ ಚೆನ್ನಾಗಿ ಭಾಷಾಂತರಿಸಬಹುದಿತ್ತು ಅನ್ನಿಸಿದರೆ ಮೈಕ್ರೊಸಾಫ್ಟ್ ಅವರಿಗೆ ಸಲಹೆ ನೀಡಿ. ಅವರು ಪರಿಶೀಲಿಸುತ್ತಾರೆ.
ನಾನಂತೂ ವಿಂಡೋಸ್ ಅನ್ನು ಕನ್ನಡದಲ್ಲೇ ಬಳಸುತ್ತೇನೆ. ನೀವು ಇದನ್ನು ಈಗಾಗಲೇ ಬಳಸುತ್ತಿದ್ದೀರಾ? ಬಳಸಲಿದ್ದೀರಾ? ಅಥವಾ ಬಳಸಿದ್ದೀರಾ?ಕೆಳಗೆ ನಿಮ್ಮ ಅನಿಸಿಕೆ ಮೂಲಕ ತಿಳಿಸಿ. ಈಗಲೇ ಈ ಲೇಖನದ ಕೊಂಡಿಯನ್ನು ಕನ್ನಡ ಬಲ್ಲ ನಿಮ್ಮ ಗೆಳೆಯರಿಗೆ ಕಳುಹಿಸಿ. ಯಾರಿಗೆ ಗೊತ್ತು ಅವರಲ್ಲಿ ಕೆಲವರಾದರೂ ಇದನ್ನು ಬಳಸಬಹುದು. ಅದಕ್ಕಿಂತ ದೊಡ್ಡ ಕನ್ನಡ ಸೇವೆ ಇನ್ನೊಂದಿಲ್ಲ.

(ಈ ಲೇಖನವನ್ನು 'ವಿಸ್ಮಯ ನಗರಿ' ಯಿಂದ ಎರವಲು ಪಡೆಯಲಾಗಿದೆ)

Thursday 21 April 2011

YOUtube ನಿಂದ ವಿಡಿಯೋ ಬೇಕೆ?

Youtube ನಿಂದ ವಿಡಿಯೋ ಡೌನ್ ಲೋಡ್ ಮಾಡಿಕೊಳ್ಳುವುದಕ್ಕೆ ಹಲವಾರು ತಂತ್ರಾಂಶಗಳಿವೆ. but ನೀವು ನೇರವಾಗಿ ಮೊಬೈಲ್ ಗೆ Download ಮಾಡಿಕೊಳ್ಳುವುದು ಅಸಾಧ್ಯ( ಇದಕ್ಕೆ ಕೆಲವೊಂದು ತಂತ್ರಾಂಶಗಳು ಲಭ್ಯವಿದ್ದರೂ ಅವುಗಳು 100% ಕೆಲಸಮಾಡಲಾರವು) ಹಾಗಾಗಿ ನೀವುಗಳು ಸುಲಭವಾಗಿ Online ಮೂಲಕವೇ Download ಮಾಡಿಕೊಳ್ಳ ಬಹುದು (Mobile or PC ಗೆ)
youtube download website ಗಾಗಿ ಇಲ್ಲಿ ಕ್ಲಿಕ್ ಮಾಡಿ
Download ಮಾಡುವ ವಿದಾನ:
ಮೊದಲು youtube.com ಗೆ ಹೋಗಿ ನಿಮ್ಮ ನೆಚ್ಚಿನ ವಿಡಿಯೋ ದ URLನ್ನು ಕಾಫಿ ಮಾಡಿ .
ನಂತರ ಮೇಲೆತಿಳಿಸಿರುವ siteಲ್ಲಿ URL ಎನ್ನುವ ಕಾಲಂನಲ್ಲಿ ಅದನ್ನು (URLನ್ನು) ಫೇಸ್ಟ್ ಮಾಡಿ.
ಆಮೇಲೆ Download ಬಟನ್ ಒತ್ತಿ. ನಂತರ ಅದು ಹಲವು ಪಾರ್ಮೆಟ್ ಗಳ ಆಯ್ಕೆ ಕೇಳುತ್ತದೆ ನಿಮಗಿಷ್ಟವಾದದ್ದನ್ನು Download ಮಾಡಿಕೊಳ್ಳಿ.....

Friday 18 March 2011

ಬೃಹತ್ ಉದ್ಯೋಗವಕಾಶಗಳು


Company Name : Village Laundry Services Pvt Ltd

Brief description about the Client products/services:
Village Laundry Service (VLS) is a start up venture. VLS offers one-machine laundry booths franchises to carefully selected and trained low-income entrepreneurs. Operating under the trade name Chamak, it offers affordable and high quality washing, drying, and ironing services.
Chamak booths use high-quality and modern washing methods such as use of premium quality detergents and high-efficiency, eco-friendly front-loading washing machines to provide a superior wash product to our customers. This service is especially useful for people who desire better cleaning but either don’t have the facility or the financial affordability, these are typically students, young adults or lower income families,
VLS currently has 15 booths in operation in Bangalore.
Date of Request: 22/01/11
Proposed Closing Date:
Probation Period: 3 Months
Permanent/ Temp: Permanent (post 15 days confirmation).
Experience Required:
Any fresher or Retail experience and being able to handle cash transactions
Experience Years: 0 to 2 Years +
Gender Preference: None
Educational Qualification : 10th  Pass or fail.
Position/Designation: Booth Operator
Posting location : Bangalore & Mysore
Name & Designation of Request Owner: Hemanth.S, Manager - HR
Nature of the position- New Position.
Position reports to: Area Manager
Roles & Responsibilities / KRA::
  • Run the Chamak booth operator including washing, drying and ironing of clothes.
  • Collect money from customers and be trust-worthy.
  • Ensure that the collections can be reconciled with the sale at the end of every day.
  • Articulate enough to be able to inform customers about the Chamak services and price
Mandatory Skills:
Able to SMS on mobile and able to read/ write English
Fluent in Kannada/ Hindi
Number of People Required: As and when required
Work Timings: 8:30 AM – 8:00PM

Night Shift Allowance: None

Transport to work site provided: - No
Provision of Food: No
Salary: Rs. 4500 gross
Incentive: Based on performance (usually Rs. 2000pm)
Employee Insurance, Provident Fund provided
Conveyance: None
Mobile: Yes (actual for official use)
Location restriction: Bangalore/Mysore
Two Wheeler Required (Y/N): N
Recommended Channels of sourcing if any (competitors etc...):
Signed by Hemanth.S Manager-HR




ಗೂಗಲ್, ಯೂಟ್ಯೂಬ್ ನಲ್ಲಿ ಬೃಹತ್ ಉದ್ಯೋಗವಕಾಶ

Monday 14 February 2011

"ಆಪರೇಷನ್ ಕಂಪ್ಯೂಟರ್"

ಮೊನ್ನೆ ನೆಡೆದ ನನ್ನ ಮೊದಲ ಕೃತಿ ಹಾಗೂ. ಕನ್ನಡದ ಮೊದಲ ಕಂಪ್ಯೂಟರ್ ರಿಪೇರಿ ಕೈಪಿಡಿ  "ಆಪರೇಷನ್ ಕಂಪ್ಯೂಟರ್" ಪುಸ್ತಕ ಬಿಡುಡೆಯ ಸಮಾರಂಭದ ಕೆಲವು ಪೋಟೋಗಳು

Tuesday 8 February 2011

AntiVirus ಅಪ್ ಡೇಟ್

ನಿಮ್ಮ ಕಂಪ್ಯೂಟರ್ ನಲ್ಲಿರುವ AntiVirus ನ ಪ್ರತಿ ತಿಂಗಳು ಅಪ್ ಡೇಟ್ ಮಾಡಬೇಕು ಅನ್ನೋದು ನಿಜ, ಆದರೆ ಇಂಟರ್ ನೆಟ್ ಇಲ್ಲದೇ ಇದ್ರೆ ಕಷ್ಟ ಅಲ್ವ? ಅದಕ್ಕೆ Offline update ಮಾಡೋದೇ ಸೂಕ್ತ,
Offline update ಮಾಡಬೆಕಂದ್ರೆ ಮೊದಲು Internet ನಿಂದ ಅಪ್ ಡೇಟ್  ಡೌನ್ ಲೋಡ್  ಮಾಡಿಕೊಂಡಿರ ಬೇಕು,

ಕೆಲವರಿಗೆ Update ಬೇಕಂದ್ರೆ ಗೂಗಲ್ Search ನಲ್ಲಿ ಹುಡುಕುತ್ತಾರೆ, ಅದು ತುಂಬಾ ತಲೆತಿನ್ನುವ ಕೆಲಸ  ಅದಕ್ಕಾಗಿ ಎಲ್ಲಾ update ಗಳು ಒಂದೇ ಜಾಗದಲ್ಲಿ ಸಿಕ್ಕರೆ ಸೂಕ್ತ ಅಲ್ಲವಾ ??

ಅಂತಹದ್ದೇ ಒಂದು ಚಿಕ್ಕ ಪ್ರಯತ್ನವನ್ನು ನಾನಿಲ್ಲಿ ಮಾಡಿದ್ದೆನೆ,, ಆದರೆ ಇಲ್ಲಿ ಕೇವಲ ಲಿಂಕ್ ಮಾತ್ರ ಕೊಟ್ಟಿದ್ದೆನೆ ಯಾಕಂದ್ರೆ ನೀವು ಯಾವಗ್ಲಾದ್ರೂ ಬನ್ನಿ New Update ರೆಡಿ ಇರುತ್ತೆ...
ನಿಮಗೆ ಯಾವ AntiVirus updates ಬೇಕು ಅಂತ ಹೆಳಿದ್ರೆ ಅದನ್ನೂಇಲ್ಲಿ ತಂದು ಹಾಕುವ ಪ್ರಯತ್ನ ಮಾಡುವೆ.

AVG Antivirus updates 
Avast Antivirus updates
Kaspersky Antivirus updates

Avira Antivirus updates


Sunday 30 January 2011

ವರ್ಡನಲ್ಲಿ ಬರೆದಿದ್ದನ್ನು ಇಮೇಜ್ ಗೆ ಪರಿವರ್ತಿಸಿ

MS ವರ್ಡನಲ್ಲಿ ಟೈಪ್ ಮಾಡಿದ ಪಠ್ಯವನ್ನು ಕೆಲವೊಮ್ಮೆ ಇಮೇಜ್ ಗೆ ಪರಿವರ್ತಿಸುವ ಸಂದರ್ಭಗಳು ಬಂದಿರ ಬಹುದು , ಅದಕ್ಕಾಗಿ ಮಾರುಕಟ್ಟೆಯಲ್ಲಿ ಹಲವಾರು ತಂತ್ರಾಂಶಗಳಿವೆ (ಕೆಲವೊಮ್ಮೆ ಇದರಿಂದ ದೊರಕುವ ಚಿತ್ರ(Image) ಗಳ ಗುಣಮಟ್ಟ ಕೂಡ ಕಡಿಮೆ ಇರುತ್ತದೆ,)
ತಂತ್ರಾಂಶಗಳನ್ನು ಬಳಸದೇ ಇಮೇಜ್ ಗೆ ಪರಿವರ್ತಿಸುವ ಸುಲಭ ವಿಧಾನವೊಂದನ್ನು ನಾ ಕಂಡುಕೊಂಡಿದ್ದೆನೆ, ಅದೆನೆಂದರೆ
ಮೊದಲು ನಿಮ್ಮ ಪಠ್ಯವನ್ನು ಟೈಪ್ ಮಾಡಿಕೊಳ್ಳಿ.
ನಂತರ Ctrl+P ಒತ್ತಿರಿ

ಪ್ರಿಂಟರ್ Name ನಲ್ಲಿ Send to oneNote 2007 ನ್ನು ಆಯ್ಕೆ ಮಾಡಿ
 ok Click ಮಾಡಿ
ನಂತರ  oneNote ನಲ್ಲಿ ನಿಮ್ಮ ದಾಕ್ಯುಮೆಂಟ್ ತೆರೆದುಕೊಳ್ಳುವುದು

ದಾಕ್ಯುಮೆಂಟ್ ನ ಮೇಲೆ ಬಲಗಡೆ ಕ್ಲಿಕ್ ಮಾಡಿ Save As ಆಯ್ಕೆ ಮಾಡಿ


ಈಗ ನಿಮ್ಮ ದಾಕ್ಯುಮೆಂಟ್ JPEG ಪಾರ್ಮೆಟ್ ನಲ್ಲಿ ಸೇವ್ ಆಗುವುದು





Monday 10 January 2011

ಐದು ರೂಪಾಯಿ ಮತ್ತು ಓ ಮನಸೇ

          ಯಾವುದೇ ಊರಿಗೆ ಹೋದರೂ ಬರುವಾಗ ಕೆಲವು ಪುಸ್ತಕಗಳನ್ನು ಕೊಂಡು ತರುವ ಖಯಾಲಿ ನನ್ನದು, ಮೊನ್ನೆ ಕೂಡ ಈಗೇ ಆಯ್ತು ಬೆಂಗಳೂರಿಗೆ ಹೋದಾಗ ಹಲವು ಸೆಕೆಂಡ್ ಹ್ಯಾಂಡ್ ಪುಸ್ತಕಗಳನ್ನೂ ಹೊತ್ತುತಂದೆ ಅವುಗಳಲ್ಲಿ ರವಿ ಬೆಳಗೆರೆಯ ಓ ಮನಸೇ ಕೂಡ 2-3 ಇದ್ದವು. ಓ ಮನಸೇ ಯ ಒಂದನೇ ಸಂಚಿಕೆಯಿಂದ ತಪ್ಪದೇ ಕೊಂಡು ಓದಿದಂತವನು ನಾನು, ಯಾಕೋ ಇತ್ತೀಚೆ ಬೆಳಗೆರೆಯ ಬರಹಗಳು ಸರಿ ಬರುತ್ತಿಲ್ಲ, ಅವನ ಬರಹಗಳಿಗೆ ಹಿಂದಿನ ಮೊನಚುತನ ಇಲ್ಲ.
ಬಹುಶಃ ದುಡ್ಡು ಮಾಡುವ ಹುಂಬತನಕ್ಕೆ ಇಳಿದಿರಬಹುದು, ಯಾಕೆಂದರೆ ಮೊನ್ನೆ ನಾನು ಕೊಟ್ಟ 5 ರೂಪಾಯಿ ( ಸೆಕೆಂಡ್ ಹ್ಯಾಂಡ್ ಓ ಮನಸೇ ಗೆ) ಕೂಡ ವೇಸ್ಟ ಆಯಿತಲ್ಲ ಅಂತ ಅನ್ನಿಸಿ ಬಿಡ್ತು. ಯಾಕೆಂದರೆ ಅದರಲ್ಲಿ ಏನೊಂದು ವಿಷಯ ಇರಲಿಲ್ಲ ಮೊದಲ ಸಂಚಿಕೆಗಲ ಕಥೆಗಳನ್ನೇ ಮತ್ತೆ ಮತ್ತೆ ಕೊಟ್ಟಿದ್ದಾನೆ. ಅವನ ಫ್ಯಾಮಿಲಿ ಬಗ್ಗೆ ಕೇಳಿ ಕೇಳಿ (Sorry ಓದಿ ಓದಿ) ತಲೆ ಕೆಟ್ಟು ಹೋಗಿದೆ, ಮೊದಲೆಲ್ಲ ಅವನ ಲೇಖನಗಳೆಂದರೆ ಹುಚ್ಚೆದ್ದು ಓದುತ್ತಿದ್ದ ನಾನು ಈಗ ಹುಚ್ಚೆದ್ದು ಓಡುತ್ತಿದ್ದೆನೆ,

  ಹೌದು, ಅವನ ಬರಹದಲ್ಲೇನಿದೆ ಎಂದು ಕುಳಿತಲ್ಲೇ ಊಹಿಸಬಹುದಾಗಿದೆ, ಅವನ ಫ್ಯಾಮಿಲಿ, ಅವನ ವಿದೇಶಿ ಟೂರು, ಅವನ ಸ್ಟಾಫ್, ಅದ್ಯಾವುದೋ ಕಿತ್ತೋಗಿರೊ ಅವನ Love ಸ್ಟೋರಿ ಅಬ್ಬಾ!! ನಮಗೇ ಇಷ್ಟು ಹಿಂಸೆಯಾಗುತ್ತಲ್ಲ ಪಾಪ ಅವನ ಆಫೀಸಿನಲ್ಲಿ ಕೆಲಸ ಮಾಡುತ್ತಿರುವವರಿಗೆ ಹೇಗಾಗಿರಬೇಡ??
ಇನ್ನೊಂದು ಮುಖ್ಯವಾದ ವಿಷಯ ಏನಪ್ಪ ಅಂದ್ರೆ ಅವನ ಅಳಿಯ (ಶ್ರೀನಗರ ಕಿಟ್ಟಿ) ಮಾಡಿರೋ ಎಲ್ಲಾ ಫಿಲಂಗಳು "ತುಂಭಾ ಚೆನ್ನಾಗಿರುತ್ತವೆ, ಅದರಲ್ಲೂ ಅವನ ನಟನೆಯಂತು ಸೂಪರ್" ಈ ರೀತಿ ಬರೆದರೆ ನಂಬೊಕೆ ನಾವೇನು ಕಿವಿಯಲ್ಲಿ ಹೂ ಇಟ್ಟುಕೊಂಡಿದಿವಾ?

ಅದೇನೇ ಇರಲಿ ನನ್ನ ನೆಚ್ಚಿನ ಬರಹಗಾರನೊಬ್ಬನು ಈ ರೀತಿಯ ಹಾದಿ ತುಳಿಯುತ್ತಿರುವುದು ನನಗೆ ಬೇಸರವನ್ನುಂಟುಮಾಡಿದೆ

Saturday 8 January 2011

ಕೃತಿ ಚೌರ್ಯ

ಇವತ್ತು ಕನ್ನಡಹನಿಗಳು ಡಾಟ್ ಕಾಂ ನಲ್ಲಿ ಒಂದು ವಾಕ್ಯ ಎದ್ದು ಕಾಣುತ್ತಿತ್ತು ಅದೇನೆಂದರೆ

"ಕನ್ನಡಹನಿಗಳಲ್ಲಿ ಹೊಸ ಕವಿತೆ ಬರೆದರೆ ಅದು ಕವಿತ್ವ...
ಕನ್ನಡಹನಿಗಳನ್ನೇ ಕದ್ದು ಬೇರೆಡೆ ಬರೆದರೆ ಅದು ಕಪಿತ್ವ
ಸೃಜನ ಶೀಲತೆಯನ್ನು ಪ್ರೋತ್ಸಾಯಿಸುವುದೇ ನೈಜತ್ವ " ಅಂತ ಈ ವಿಷಯ ಇಲ್ಲಿ ಯಾಕೆ ಬಂತು ಅಂತಿರಾ? ಕೆಲವು ವರ್ಷಗಳ ಹಿಂದೆ ಯಾವುದಾದರೂ ಲೇಖಕರು ಒಂದು ಕೃತಿ ಬರೆದರೆ ಅದರಲ್ಲಿನ ಯಾವುದೇ ಸಾಲುಗಳನ್ನಗಲಿ ಅಥವಾ ಕದಿಯುತ್ತಿರಲಿಲ್ಲ ಒಂದುವೇಳೆ ಬಳಸಲೇ ಬೇಕಾದ ಸಂದರ್ಭ ಬಂದಾಗ ಆ ಲೇಖಕರ ಅನುಮತಿಯನ್ನು ಪಡೆಯುತ್ತಿದ್ದರು. ಹಾಗೂ ಪುಸ್ತಕದ ಹೆಸರನ್ನು ಮತ್ತು ಲೇಖಕರ ಹೆಸರನ್ನು ಉಲ್ಲೇಖಿಸುತ್ತಿದ್ದರು.
ಆದರೆ ಈಗ ಕಾಲ ಬದಲಾಗಿದೇ ತಂತ್ರಜ್ಞಾನ ಮುಂದುವರೆದಂತೆಲ್ಲ ಕೃತಿಚೌರ್ಯದ ಹಾವಳಿ ಹೈಟೆಕ್ ಆಗುತ್ತಿದೆ, ಬರೆಯುವುದಕ್ಕೆ ಪುರುಸೊತ್ತಿಲ್ಲವೆಂದು ಸುಲಭವಾಗಿ Copy & Paste ಮಾಡುತ್ತಾರೆ, ಇನ್ನುಕೆಲವರು ಆ ಕಥೆ/ಕವಿತೆ ತನ್ನದೇನೋ ಎಂಬಂತೆ ತಮ್ಮ ಬ್ಲಾಗ್ ಗಳಲ್ಲಿ ಅಲಂಕರಿಸಿರುತ್ತಾರೆ.

'ನಿಮ್ಮ ಮಗುವನ್ನು ಬೇರೊಬ್ಬರು ತನ್ನ ಮಗುವೆಂದರೆ ನಿಮಗೆಹೇಗಾಗಿರಲಿಕ್ಕಿಲ್ಲ?' ನೀವೇ ಹೇಳಿ.ಈ ರೀತಿ ಮಾಡಿದಾಗ ಎಂಥವನೇ ಆದರೂ ಬರೆಯಲು ಹಿಂದೇಟಾಕುತ್ತಾನೆ.ಆತನ ಬರವಣಿಗೆ ಕುಸಿಯುತ್ತದೆ, ಹಾಗಾಗದಿರಬೇಕಾದರೆ ಅವನಿಗೆ ಸಲ್ಲಬೇಕಾದ ಗೌರವ ಸಲ್ಲಬೇಕು
ಇನ್ನುಮುಂದೆ ನಾವುಗಳೂ ಕೂಡ ಬೇರೆಯವರ ಲೇಖನಗಳನ್ನು ಉಪಯೋಗಿಸುವಾಗ ಅವರನ್ನು ನೆನೆಯೋಣ

ಅಂದಹಾಗೆ ಕನ್ನಡಹನಿಗಳಲ್ಲಿರುವ ಆ ಸಾಲುಗಳನ್ನು ಬರೆದವನು ನಾನೇ, ನನ್ನ ಸಾಲುಗಳಿಗೆ ಬೆಲೆಕೊಟ್ಟು ಅಲ್ಲಿ ಪ್ರಕಟಿಸಿದ ಸಂತೋಷರವರಿಗೆ ನಾನು ಅಭಾರಿಯಾಗಿದ್ದೆನೆ

Friday 7 January 2011

ಅನರ್ಥ ಕೋಶ



ಡಾಕ್ಟರ್ - ಯಮಧರ್ಮರಾಯನ ಏಜೆಂಟ್
ಜೈಲು - ಮಂತ್ರಿಗಳ ಬೇಸಿಕ್ ಟ್ರೈನಿಂಗ್
ಕಾಯಿಲೆ - ದೇಹವು ಆತ್ಮಕ್ಕೆ ಕಟ್ಟುವ ಕಂದಾಯ
ಸೂರ್ಯ - ಕತ್ತಲಾದಾಗ ಹೊರಬರದ ಹೇಡಿ
ರೆಪ್ಪೆ - ಕಣ್ಣಿನ ಮೇಲೆ ಇರುವ ಭೂತ
ಹಾಲು - ದ್ರವ ರೂಪದ ಹಸುವಿನ ಮಾಂಸ
ಹೋಟೆಲ್ - ಪರಸ್ಪರ ಎಂಜಲನ್ನು ಸಾರ್ವಜನಿಕರು ಹಂಚಿಕೊಳ್ಳುವ ಕ್ಷೇತ್ರ
ಫಾಲಿಡಾಲ್ - ಬೇಜಾರಾದಾಗ ಸಂತೊಷಕ್ಕೆ ತೆಗೆದುಕೊಳ್ಳುವ ಶುದ್ದ ಔಷದ
ಅನುಭವ - ಈಗ ಮಾಡುವ ತಪ್ಪುಗಳಿಗೆ ನಾಳೆಕೊಡುವ ಹೆಸರು
ಜಾಣತನ - ಮೋಸ ಮಾಡಿ ತಪ್ಪಿಸಿಕೊಳ್ಳುವ ಶಕ್ತಿ
ತಿರುಪೆ - ನಮ್ಮ ದೇಶದಲ್ಲಿ ಬಂಡವಾಳವಿಲ್ಲದ ಒಂದು ದೊಡ್ಡ ಕೈಗಾರಿಕೆ
ಕಳ್ಳ - ಅನ್ಯರ ಆಸ್ತಿಗೆ ಒಡೆಯ
ಅಗಸ - ಇತರರ ಬಟ್ಟೆಗಳನ್ನು ಚೆನ್ನಾಗಿ ಧರಿಸುವ ವ್ಯಕ್ತಿ..
ಜ್ಯೋತಿಷಿ - ಅನ್ಯರ ದುಡ್ಡಿನಿಂದ ತನ್ನ ಭವಿಷ್ಯ ರೂಪಿಸಿ ಕೊಳ್ಳುವವ.
ವಕೀಲ - ನ್ಯಾಯ ದೇಗುಲದಲ್ಲಿ ಅನ್ಯಾಯ ಎತ್ತಿ ಹಿಡಿಯುವ ವ್ಯಕ್ತಿ.
Mathemetics(ಮೆಂತೆ ಮೆಣಸಿನಕಾಯಿ) - ಮೆಂತೆ ಮೆಣಸಿನಕಾಯಿ ನೆಂಚಿಕೊಂಡು ಮೊಸರು ಅನ್ನ ತಿಂದು ಮಲಗುವದು.
Arithmetic(ಅರಿತ ಮೆಟ್ರಿಕ್ ) - ಅರಿತ ಮೇಲೆ ಮೆಟ್ರಿಕ್ ಪಾಸಾಗ ಬಹುದೇನೋ?.
Algebra(ಎಲ್ಲ ಗೊಬ್ರ ) - ಇದು ನಮ್ಮ ಹೊಲಕ್ಕೆ ಹಾಕಿದರೆ ಬೆಳೆ ಚೆನ್ನಾಗಿ ಬರುತ್ತೆ.
Geometry(ಗೋ ಮೂತ್ರ ) - ಗೋ ಮೂತ್ರ ತುಂಬಾ ಪವಿತ್ರವಾದುದು. ಅದಕ್ಕೆ ತುಂಬಾ ಔಷಧಿಯ ಗುಣಗಳು ಇರುತ್ತವೆ.
Trignometry (ತಿರಗೋಣು ಮತ್ತೆ ) - ಮತ್ತೆ ಮತ್ತೆ ತಿರುಗಿ ಕಲಿಯೂ ಸೂತ್ರ
Calculas (ಖಾಲಿ ಕೆಲಸ) - ಇದನ್ನು ಕಲಿತ್ತಿದ್ದರೆ ಕೆಲಸ ಖಾಲಿ ಇರಬಹುದು.
physics (ಫಿಸಿಕ್ ) - ಕಟ್ಟು ಮಸ್ತಾದ ದೇಹ(ಯಾರದು ಅಂತ ಕೇಳಬೇಡಿ?).
chemistry(ಕೆಮ್ಮು ಎಷ್ಟುರಿ ?) - ಕದ್ದು ಸೇದುವ ಸಮಯದಲ್ಲಿ ಬರುವ ವ್ಯಾಧಿ.
sociology (ಸೋಸಿ ಒಳಗೆ) - ಮಿತ್ರರನ್ನು ಮಾಡಿಕೊಳ್ಳುವಾಗ ಬಳಸುವ ಸೂತ್ರ.
biology(ಭಯಾಲಜಿ) - ಪರೀಕ್ಷೆ ಮುಂಚೆ ಬರುವ ವ್ಯಾಧಿ.
-- ಕನ್ನಡ ಹನಿಗಳಿಂದ ಆರಿಸಲಾಗಿದೆ