Tuesday 23 November 2010

ದಟ್ಸ್ ಕನ್ನಡಕ್ಕೆ ಪತ್ರಕರ್ತರು ಬೇಕಾಗಿದ್ದಾರೆ

ನಮ್ಮ ಅಂತರ್ಜಾಲ ತಾಣದ ಮೋಟಾರು ವಾಹನ ಸುದ್ದಿಜಾಲ ವಿಭಾಗದಲ್ಲಿ ಕೆಲಸ ಮಾಡಲು ಪತ್ರಕರ್ತರು ಬೇಕಾಗಿದ್ದಾರೆ. ಹುದ್ದೆಯ ಸಂಖ್ಯೆ ಒಂದು. ಕಾರು, ಮೋಟಾರ್ ಬೈಕು, ಸ್ಕೂಟರ್, ವ್ಯಾನು ಮುಂತಾದ ವಾಹನ ಕಂಪನಿಗಳ ಮಾಹಿತಿಗಳು, ಅದರ ಉತ್ಪಾದನೆ ಮತ್ತು ಮಾರುಕಟ್ಟೆಗೆ ಬಿಡುಗಡೆಯಾಗುತ್ತಿರುವ ವಿವರಗಳು, ಮಾರಾಟ ಜಾಲ, ಅದರ ಬೆಲೆ ಮುಂತಾದ ಮಾಹಿತಿಗಳನ್ನು ಸುದ್ದಿ ಶೈಲಿಯಲ್ಲಿ, ಸುದ್ದಿ ಸಂಕ್ಷೇಪ ಮಾದರಿಯಲ್ಲಿ ಚಿಕ್ಕದಾಗಿ ಚೊಕ್ಕದಾಗಿ ಬರೆಯುವ ಜಾಣ್ಮೆ ಅರ್ಜಿಹಾಕಿಕೊಳ್ಳುವ ಪತ್ರಕರ್ತರಿಗೆ ಇರಬೇಕು.

ಅತಿವೇಗದಲ್ಲಿ ಬೆಳೆಯುತ್ತಿರುವ ವಾಹನ ಮಾರುಕಟ್ಟೆಯ ಮೇಲೆ ಅವ್ಯಾಹತ ನಿಗಾ ಇಡಬಲ್ಲ ಆಸಕ್ತಿ ಇರತಕ್ಕದ್ದು. ಮನೆಮಂದಿಯ ಉಪಯೋಗಕ್ಕಾಗಿ ಒಂದು ಕಾರು ಕೊಳ್ಳಬೇಕು ಎಂದು ಯೋಚಿಸುತ್ತಿರುವವರಿಗೆ, ಕಾಲೇಜಿಗೆ ಬೈಕಿನಲ್ಲೇ ಹೋಗಲು ಆಸೆಪಡುವ ಹುಡುಗ ಹುಡುಗಿಯರಿಗೆ ನಿಮ್ಮ ಕರಾರುವಾಕ್ಕು ಮಾಹಿತಿ ಭರಿತ ಬರವಣಿಗೆ ಮಾರ್ಗದರ್ಶಿಯಾಗಬೇಕು. ಸಾಲು ಸಾಲಾಗಿ ಮಾರುಕಟ್ಟೆಗೆ ಬರಲಿರುವ ಹೊಸ ವಾಹನಗಳ ವೈಶಿಷ್ಟ್ಯಗಳೇನು? ಶೋ ರೂಂಗಳ ವಿಳಾಸ, ಒಟ್ಟಾರೆ ವಾಹನ ಪ್ರಪಂಚದ ಆಗುಹೋಗುಗಳಿಗೆ ನಿಮ್ಮ ಬರವಣಿಗೆ ಕನ್ನಡ ಕನ್ನಡಿಯಾಗಬೇಕು. ಮುಖ್ಯವಾಗಿ : ನೇರವಾಗಿ, ಸ್ಫುಟವಾಗಿ, ಸರಳ ಕನ್ನಡದಲ್ಲಿ ಬರೆಯುವ ಕೌಶಲ್ಯ ಅತ್ಯಗತ್ಯ.

ಅರ್ಹತೆ : ಸುಮಾರು 22ರಿಂದ 27 ವಯೋಮಾನದ ಆಕಾಂಕ್ಷಿ ಪತ್ರಕರ್ತರಿಗೆ ಅರ್ಜಿಹಾಕಿಕೊಳ್ಳಲು ಸ್ವಾಗತ. ದಿನಕ್ಕೆ 8 ಗಂಟೆ ಕಾಲ ಕಂಪ್ಯೂಟರ್ ಮುಂದೆ ಕುಳಿತು ವಾಹನ ಮಾರುಕಟ್ಟೆಯ ಧ್ಯಾನ ಮತ್ತು ಅಧ್ಯಯನ ನಡೆಸಿ, ಮಾಹಿತಿ ಸಂಗ್ರಹಣೆ ಮಾಡಿ, ಲಗುಬಗೆಯಿಂದ ಸುದ್ದಿ ತಯಾರಿಸುವ ವೇಗಿಗಳಿಗೆ ಆದ್ಯತೆ ಕೊಡಲಾಗುವುದು. ಅಂತರ್ಜಾಲದ ಪರಿಚಯ ಸಾಕಷ್ಟು ಚೆನ್ನಾಗಿಯೇ ಇರಬೇಕು. ಯೂನಿಕೋಡ್ ಬಳಸಿಕೊಂಡು ನೋಟ್ ಪ್ಯಾಡಿನಲ್ಲಿ ಸರಸರ ಸುದ್ದಿ ಬರೆಯುವುದಕ್ಕೆ ಕೀಲಿ ಮಣೆ ಬಳಸುವ ಜ್ಞಾನ ಗೊತ್ತಿರಬೇಕು. ಅಭ್ಯರ್ಥಿಗಳು ಈಗಾಗಲೇ ಕಂಪ್ಯೂಟರ್ ಬಳಸಿಕೊಂಡೇ ಕನ್ನಡದಲ್ಲಿ ಬರೆಯುವ ವಿದ್ಯೆಯನ್ನು ಕರಗತ ಮಾಡಿಕೊಂಡಿದ್ದರೆ ಅವರು ನಮಗೆ ಬೇಕು. ನಾವು ನಡೆಸುವ ಲಿಖಿತ ಮತ್ತು ಮೌಖಿಕ ಪರೀಕ್ಷೆಗೆ ಒಟ್ಟು ಹತ್ತು ಅಂಕಗಳಿರುತ್ತವೆ. ಅಂಕಗಳ ವಿಭಜನೆ ಇಂತಿದೆ :

ಕನ್ನಡ ಅಂತರ್ಜಾಲ ತಾಣದಲ್ಲಿ ವೆಬ್ ರೈಟರ್ ಆಗಬೇಕೆಂಬ ಆಸಕ್ತಿಗೆ 4. ಆಟೋ ಸುದ್ದಿ ಸಂಗ್ರಹಣೆ, ಸುದ್ದಿ ಸಂಸ್ಕಾರ ಮಾಡುವ ಕಲೆಗೆ 3. ಅಂತರ್ಜಾಲದ ಪರಿಚಯ, ಇಂಗ್ಲಿಷ್ ಭಾಷಾ ಜ್ಞಾನದ ಜತೆಗೆ ಕಂಪ್ಯೂಟರ್ ನಲ್ಲಿ ಕನ್ನಡ ಬರೆಯುವ ಅನುಭವಕ್ಕೆ 2. ನಿತ್ಯ ಕಲಿಯುವ ಆಸಕ್ತಿ ಇದ್ದರೆ ಅದಕ್ಕೆ 1 ಅಂಕ. ಪತ್ರಿಕೋದ್ಯಮದಲ್ಲಿ ಔಪಚಾರಿಕ ಶಿಕ್ಷಣ, ಪದವಿ ಪಡೆದಿದ್ದರೆ ಸ್ವಾಗತವೇ. ಇಂಟರ್ನೆಟ್ ಪತ್ರಿಕೋದ್ಯಮದಲ್ಲಿ ಆಸಕ್ತಿ ಹಾಗೂ ಸುಲಲಿತ ಓದಿಗಾಗಿ ಸುದ್ದಿಗಳನ್ನು ಸಿದ್ಧಪಡಿಸುವ ಕಲೆ ಮತ್ತು ಶ್ರದ್ಧೆಯೇ ನಿರ್ಣಾಯಕ. ಕೆಲಸ ಮಾಡುವ ಸ್ಥಳ, ಜಯನಗರ, ಬೆಂಗಳೂರು.

ಸಂಬಳ ಮತ್ತು ನೇಮಕಾತಿ ನಿಯಮಗಳು ಅಭ್ಯರ್ಥಿಗಳ ವಿದ್ಯಾರ್ಹತೆ, ಅನುಭವ ಮತ್ತು ಆಸಕ್ತಿಯ ತೀರ್ವತೆಗಳನ್ನು ಅವಲಂಬಿಸಿರುತ್ತದೆ. ನಿಮ್ಮ ಅರ್ಜಿಗಳನ್ನು ರವಾನಿಸುವ ವಿಳಾಸ shami.sk@greynium.com. ಈ ಸಂಬಂಧ ದೂರವಾಣಿ, ಎಸ್ ಎಂಎಸ್ ಮೂಲಕ ವಿವರಗಳನ್ನು ನಾವು ನೀಡಲಾರೆವು. ಅರ್ಜಿ ಹಾಕಲು ಕಡೆ ದಿನಾಂಕ 1 ಡಿಸೆಂಬರ್ 2010. ನಿಮ್ಮ ಅರ್ಜಿಗಳನ್ನು ಈ ಮೇಲ್ ಮುಖಾಂತರವೇ ಕಳಿಸಬೇಕು. ಸಬ್ಜೆಕ್ಟ್ ಲೈನಿನಲ್ಲಿ Auto News/Copy Writer ಎಂದು ನಮೂದಿಸಬೇಕು.

Friday 19 November 2010

ಏಕಕಾಲದಲ್ಲಿ ಎರಡು ಜಿಮೇಲ್ ಖಾತೆಗಳಿಗೆ ಲಾಗಿನ್ ಆಗಬಹುದೇ?

ಏಕಕಾಲದಲ್ಲಿ ಎರಡು ಜಿಮೇಲ್ ಖಾತೆಗಳಿಗೆ ಲಾಗಿನ್ ಆಗಬಹುದೇ? ಒಂದೇ ಬ್ರೌಸರ್ ತೆರೆದು,ಒಂದು ಮಿಂಚಂಚೆ ಖಾತೆಗೆ ಲಾಗಿನ್ ಆದೊಡನೆ,ಇನ್ನೊಂದು ಖಾತೆಯಿಂದ ಲಾಗೌಟ್ ಆಗುವುದು ಸಾಮಾನ್ಯ.ಹಲವು ಬಳಕೆದಾರರು ಒಂದಕ್ಕಿಂತ ಹೆಚ್ಚು ಜಿಮೇಲ್ ಖಾತೆಯನ್ನು ಹೋಂದಿರುವುದು ಈಗ ಸಾಮಾನ್ಯವಾಗಿರುವುದರಿಂದ ಈ ಸೌಲಭ್ಯವನ್ನು ಗೂಗಲ್ ನೀಡಲಾರಂಭಿಸಿದೆ.ಮಿಂಚಂಚೆಯ ಜತೆಗೆ ಇತರ ಗೂಗಲ್ ಸೇವೆಗಳಿಗೂ ಪ್ರವೇಶ ಪಡೆಯುವುದು,ಸಹ ಸಾಧ್ಯವಾದರೂ, ಸದ್ಯಕ್ಕೆ, ಈ ರೀತಿಯ ಏಕಕಾಲದ ಪ್ರವೇಶ ಸಾಧ್ಯವಾಗದೆ ಹೋಗಬಹುದು ಎಂದು ಗೂಗಲ್ ಕಿವಿಮಾತು ಹೇಳಿದೆ.ಈ ಸವಲತ್ತು ಸಿಗಲು,ಮೊದಲಾಗಿ ಗೂಗಲ್‌ನ ಖಾತೆಯ ಸಿದ್ಧತೆಗಳಲ್ಲಿ "ಬಹುಖಾತೆಗಳನ್ನು ಸಾಧ್ಯವಾಗಿಸಬೇಕು.ಇದಕ್ಕೆ google.com/accounts ವಿಳಾಸ ನೋಡಿ.

ಸುಲಭವಾಗಿ ವೈರಸ್ ತಯಾರಿಸಿ.

ನಿಮ್ಮ ಶತ್ರುವಿನ ಕಂಪ್ಯೂಟರ್ ಹಾಳುಮಾಡಲು ಒಂದು ವೈರಸ್ ತಯಾರಿಸಬೇಕು ಅಂತ ಅನ್ನಿಸುತ್ತಿದೆಯಾ?
ಹಾಗಾದರೆ ಇನ್ನೇಕೆ ತಡ ನೀವೇ ಒಂದು ವೈರಸ್ ತಯಾರಿಸಿಬಿಡಿ.
---> Notepad ನಲ್ಲಿ ಇಲ್ಲಿರುವ ಪಠ್ಯವನ್ನು Copy ಮಾಡಿ Paste ಮಾಡಿ. AUTOEXE.bat ಹೆಸರಿನಲ್ಲಿ Save ಮಾಡಿ.








ಎಚ್ಚರಿಕೆ:- ಇಲ್ಲಿರುವ ಮಾಹಿತಿಯನ್ನು ಕೇವಲ ಕಲಿಯುವ ಆಸಕ್ತಿಗಾಗಿ ಮತ್ತು ತಮಾಷೆಗಾಗಿ ಮಾತ್ರ ಉಪಯೋಗಿಸಿ. ಬೇರೆಯವರ ಗಣಕಯಂತ್ರಕ್ಕೆ VIRUS ದಾಳಿಮಾಡುವುದು ಕಾನೂನಿನ ಪ್ರಕಾರ ಅಪರಾಧ.

Thursday 18 November 2010

SMS ಮೂಲಕ ಈ-ಮೇಲ್ ಸೇವೆ.

ದಿನಾ ಬರುವ E-mail ಗಳನ್ನು ನೋಡಲು ಪದೇ ಪದೇ ಕಂಪ್ಯೂಟರ್ ಗಳ ಮುಂದೆ ಕುಳಿತು ಬೇಜಾರಾಗಿದೆಯಾ?

ಇದಕ್ಕಿದೆ ಒಂದು ಸುಲಭ ಉಪಾಯ, http://linksutra.com ಗೆ ಬೇಟಿ ನೀಡಿ ಅಲ್ಲಿ ನಿಮ್ಮ ದೂರವಾಣಿ ಮತ್ತು e-mail id ಯನ್ನು ನಮೂದಿಸಿದರೆ ಅಷ್ಟೇ ಸಾಕು. ನಿಮಗೆ ಬರುವ ಪ್ರತಿಯೊಂದು ಈ ಮೇಲ್ ಕೂಡ 'ತಕ್ಷಣ' ನಿಮ್ಮ ಮೊಬೈಲ್ ಗೆ ಬಂದು ಬೀಳುತ್ತದೆ. ಇದು ಉಚಿತ ಸೇವೆಯಾಗಿದೆ.
ನೆನಪಿರಲಿ: ಇದರಲ್ಲಿ Gmail ನ ಸೇವೆಯನ್ನು ಮಾತ್ರ  ಪಡೆಯಬಹುದು.

Wednesday 17 November 2010

ಕೆಲಸ ಖಾಲಿ ಇದೆ....

ಕೆಲಸದ ಹೆಸರು  : ಕಂಪ್ಯೂಟರ್ ಶಿಕ್ಷಕರು.
ಕೆಲಸದ ಸ್ಥಳ      : ಕರ್ನಾಟಕದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ
ವೇತನ ಶ್ರೇಣಿ    : 3500-00
ವಿದ್ಯಾರ್ಹತೆ      : ಯಾವುದೇ ಪದವಿ. ಮತ್ತು
                        ಕಂಪ್ಯೂಟರ್ ನಲ್ಲಿ PGDCA  ಅಥವಾ ಇದಕ್ಕೆ ಸಮನಾದ ಕಂಪ್ಯೂಟರ್ ಕೊರ್ಸ್ ಆಗಿರಬೇಕು.

  ಈ ಉದ್ದೆಯಬಗ್ಗೆ  ಹೆಚ್ಚಿನ ಮಾಹಿತಿಗೆ ನಿಮ್ಮ ಸಮೀಪದ ಸರ್ಕಾರಿ or ಅನುಧಾನಿತ ಶಾಲೆಯಲ್ಲಿನ ಮುಖ್ಯಶಿಕ್ಷಕರು or ಕಂಪ್ಯೂಟರ್ ಶಿಕ್ಷಕರನ್ನು ಸಂಪರ್ಕಿಸಿ.

ಇನ್ನೂ ಹೆಚ್ಚಿನ ಮಾಹಿತಿಗೆ : 9740769286

Friday 12 November 2010

ಉದ್ಯೋಗ ಭೇಟೆ

ಬಂದುಗಳೇ,,,,

ದಿನ ಬೆಳಿಗ್ಗೆಯಿಂದ ಸಂಜೆಯವರೆಗೂ ನೂರಾರುಕಡೆಗಳಲ್ಲಿ ಓಡಾಡುವಾಗ ಸಾಮಾನ್ಯವಾಗಿ ನೂರಾರು ಅಕ್ಷರಸ್ಥ ನಿರುದ್ಯೋಗಿಗಳನ್ನು ಕಂಡಿದ್ದೇನೆ.ಹಾಗೂ "ಯಾವ ಕೆಲಸನಾದ್ರೂ ಇದ್ರೆ ಕೊಡಿ ಸಾರ್ ಮಾಡ್ತಿನಿ" ಅನ್ನೋ ಅವರ ಮಾತು ನನಗೆ ಕೇಳಿಸದೇ ಇರಲಿಲ್ಲ. ಅದೇರೀತಿ ಹಲವಾರು ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ನನ್ನ ಫ್ರಂಡ್ಸ್ ಗಳು Call ಮಾಡಿ "ನಾಲ್ಕೈದು ಕೆಲಸ ಖಾಲಿ ಇದೆ ಯಾರಾದ್ರೂ ಒಳ್ಳೆ ಹುಡುಗರು ಇದ್ರೆ ಹೇಳು" ಅನ್ನುವುದು ನನಗೆ ಮಾಮೂಲಾಗಿದೆ.

"ಯಾವ ಕೆಲಸನಾದ್ರೂ ಇದ್ರೆ ಕೊಡಿ ಸಾರ್ ಮಾಡ್ತಿನಿ" ಅನ್ನುವವರು ನಾನು ಎಷ್ಟೇ ಹುಡುಕಿದರೂ ಆ timeಗೆ ಸಿಗೋದೇ ಇಲ್ಲ. ಅದಕ್ಕೆ ಫ್ರೆಂಡ್ಸ್ ನನಗೊಂದು idea ಬಂದಿದೆ. ಅದೇನೆಂದರೆ ನಿಮಗೆ or ನಿಮ್ಮ ಫ್ರೆಂಡ್ಸ್ ಗೆ ಕೆಲಸದ ಅವಶ್ಯಕತೆ ಇದ್ದಲ್ಲಿ ನಿಮ್ಮ Resume ಅನ್ನು ದಯವಿಟ್ಟು ನನಗೆ mail ಮಾಡಿ. ನಿಮ್ಮ ವಿದ್ಯಾರ್ಹತೆಗೆ ತಕ್ಕುದಾದ ಕೆಲಸವನ್ನು ನಾವೇ ನಿಮಗೆ ಹುಡುಕಿಕೊಡುತ್ತೆವೆ.(Phone number ಬರೆಯೊದನ್ನು ಮರೀಬೇಡಿ)
www.netkannada.blogspot.com ಬ್ಲಾಗ್ ನಲ್ಲಿ ಎಲ್ಲೆಲ್ಲಿ Job ಖಾಲಿ ಇದೆ ಅದಕ್ಕೆ ಬೇಕಾದ ಅರ್ಹತೆಗಳೇನು ಎಂಬುದನ್ನು ಪ್ರಕಟಿಸುತ್ತೆನೆ.ಒಂದು ವೇಳೆ ನೀವು ನಿಮ್ಮ Resume ಕಳುಹಿಸಿದ್ದರೆ.sms Or Call ಮಾಡಿ ನಾವೇ ಹೇಳುತ್ತೆವೆ.

ನೆನಪಿರಲಿ
ಈ ಮಾಹಿತಿಗೆ ಯಾವುದೇ ಶುಲ್ಕವಿರುವುದಿಲ್ಲ ಇದು ಉಚಿತ ಸೇವೆ

ಹೆಚ್ಚಿನ ಮಾಹಿತಿಗೆ:- 9740769286 ಅಥವಾ ontipremi@gmail.com