Wednesday 20 October 2010

ಯುಎಸ್‌ಬಿಗೊಂದು ಚುಚ್ಚುಮದ್ದು[ From- ಗಣಕಿಂಡಿ]

ನಿಮ್ಮ ಯುಎಸ್‌ಬಿ ಡ್ರೈವ್ ಅನ್ನು ಇನ್ನೊಬ್ಬರ ಗಣಕದಲ್ಲಿ ತೂರಿಸಿ ಅವರಿಂದ ಯಾವುದಾದರೂ ಫೈಲು ತೆಗೆದುಕೊಂಡು ಬಂದ ನಂತರ ನಿಮ್ಮ ಯುಎಸ್‌ಬಿ ಡ್ರೈವ್‌ನಲ್ಲಿ ವೈರಸ್ ಬಂದ ಅನುಭವ ನಿಮಗೆ ಆಗಿರಬಹುದು. ಈ ರೀತಿಯ ಅನುಭವ ಸಾಮಾನ್ಯವಾಗಿ ನೀವು ತೆಗೆದ ಫೋಟೋವನ್ನು ಮುದ್ರಣಕ್ಕಾಗಿ ಸ್ಟುಡಿಯೋದಲ್ಲಿ ನೀಡಿದ ಬಳಿಕ ಅಥವಾ ಯಾವುದಾದರೂ ಸೈಬರ್‌ಕೆಫೆಯಲ್ಲಿ ಬಳಸಿದ ಬಳಿಕ ಆಗುವುದು ಸಾಮಾನ್ಯ. ಬಹುಜನರು ತಮ್ಮಲ್ಲಿರುವ ಎಲ್ಲ ನಮೂನೆಯ ಡ್ರೈವ್‌ಗಳನ್ನು ಬಳಸಿ ಇಂತಹ ಸಾರ್ವಜನಿಕ ಬಳಕೆಯ ಗಣಕಗಳಲ್ಲಿ ವೈರಸ್ ತುಂಬಿರುತ್ತದೆ. ಅಂತಹ ಗಣಕದಿಂದ ನಿಮ್ಮ ಯುಎಸ್‌ಬಿ ಡ್ರೈವ್‌ಗೂ ಅದು ಬರುತ್ತದೆ. ಈ ರೀತಿ ಆಗದಂತೆ ನಿಮ್ಮ ಯುಎಸ್‌ಬಿ ಡ್ರೈವ್‌ಗೊಂದು ಚುಚ್ಚುಮದ್ದು (ವ್ಯಾಕ್ಸೀನ್) ತಂತ್ರಾಂಶ Panda USB Vaccine ಲಭ್ಯವಿದೆ. ಇದು ಬೇಕಿದ್ದಲ್ಲಿ ನಿವು ಭೇಟಿ ನೀಡಬೇಕಾದ ಜಾಲತಾಣದ ವಿಳಾಸ - ಇಲ್ಲಿದೆ