Friday 31 December 2010

ಹೊಸ ವರ್ಷದ ಶುಭಾಷಯಗಳು

2010 ರ ಸಾಧನೆಯೇನು ಇಲ್ಲ ಹಾಗಾಗಿ

ಹೊಸ ವರ್ಷ ಆಚರಣೆಯ ಸಡಗರ ಇಲ್ಲ

ಆದರೆ ಮುಂದಿನ ವರ್ಷ ಇದು ಪುನರಾವರ್ತನೆಯಾಗದಂತೆ

ನೋಡಿಕೊಳ್ಳಬೇಕಿದೆ..........

ಅದೇನೇ ಇರಲಿ........

"ನಿಮ್ಮ ಎಲ್ಲಾ ಕನಸುಗಳು ಈ ವರ್ಷ ಪೂರ್ಣಗೊಳ್ಳಲಿ ಎಂದು ಹಾರೈಸುವೆ"

ನಾನು-ಮಗು

ಮುಗ್ಗರಿಸಿ ಬಿದ್ದಾಗಲೆಲ್ಲಾ
ಎದ್ದುಮತ್ತೆ
ನೆಡೆಯುವ ಛಲ
ಮಗುವಿಗೆ
ಬೀಳುವುದೆಂದರೆ
ಎಲ್ಲಿಲ್ಲದ ಅವಮಾನ
ನನಗೆ

ನೀನು ಕೇಳಿದ್ದು

ಹೇಗಿದ್ದಿಯಾ? ಎಂದು
ಇಂದು ಕೇಳುತ್ತಿದ್ದಿಯಲ್ಲ
ನೆನಪಿಲ್ಲವೇ?
ಪ್ರೀತಿಯ
ಶವದ ಪೆಟ್ಟಿಗೆಗೆ
ನೀನೇ
ಕೊನೆಯ ಮೊಳೆ ಹೊಡೆದದ್ದು

ಹೀಗಾಗೋದೇ ಲೈಫ್...


ಕ್ಯೂ: ಎರಡು ಸಮಾನಾಂತರ ಕ್ಯೂಗಳಲ್ಲಿ ಒಂದರಲ್ಲಿ ನಿಂತಿರುತ್ತೆವೆ.ನಿಂತಿರುವ ಕ್ಯೂ ಬೇಗನೆ ಚಲಿಸುತ್ತಿಲ್ಲ ಎಂದು ಪಕ್ಕದ ಕ್ಯೂನಲ್ಲಿ ನಿಲ್ಲುತ್ತೇವೆ ಆಗ ನಾವು ಬಿಟ್ಟು ಬಂದ ಕ್ಯೊ ಬೇಗನೆ ಚಲಿಸಲಾರಂಭಿಸುತ್ತದೆ.

ಟೆಲಿಫೋನ್: ನಾವು ರಾಂಗ್ ನಂಬರ್ ಗೆ ಡಯಲ್ ಮಾಡಿದಾಗ ಯಾವತ್ತೂ ಅದು ಎಂಗೇಜ್ ಆಗಿರುವುದೇ ಇಲ್ಲ.

ಬೈಕ್ ರಿಪೇರಿ: ಕೈಗೆ ಗ್ರೀಸ್ ಮೆತ್ತಿಕೊಂಡಿರುವಾಗಲೇ ಮೂಗು ತುರಿಸುತ್ತೆ.

ಕಚೇರಿ: ಬೈಕ್ ಟೈರ್ ಪಂಕ್ಚರ್ ಆಗಿದ್ದರಿಂದ ತಡವಾಯಿತು ಎಂದು ಬಾಸ್ ಬಳಿ ಸಬೂಬು ಹೇಳಿದರೆ. ಮಾರನೇ ದಿನವೇ ಟೈರ್ ಪಂಕ್ಚರ್ ಆಗಿರುತ್ತದೆ.

ಸ್ನಾನದಕಾನೂನು: ಮೈ-ಮುಖಕ್ಕೆಲ್ಲಾ ಸೋಪು ಬಳಿದುಕೊಂಡಿದ್ದಗಲೇ ಫೋನ್ ರಿಂಗಾಗುತ್ತದೆ.

ಆಕಸ್ಮಿಕ: ಇವಳ ಜೊತೆ ಇರುವುದನ್ನು ಯಾರೂ ನೋಡದಿದ್ದರೆ ಸಾಕು ಎಂದು ಮನಸ್ಸಿನಲ್ಲಿ ಮಂಡಿಗೆ ತಿನ್ನುತ್ತಿರುವಾಗಲೇ ಪರಿಚಯಸ್ಥರು ಎದುರು ಸಿಕ್ಕುತ್ತಾರೆ.

ಚಿತ್ರಮಂದಿರದಲ್ಲಿ: ಮೂಲೆಯ ಸೀಟ್ ನಲ್ಲಿ ಕುಳಿತುಕೊಳ್ಳಬೇಕಾದ ವ್ಯಕ್ತಿಗಳು ಯಾವಾಗಲೂ ಕೊನೆಗೆ ಬರುತ್ತಾರೆ.

ಪ್ರೀತಿ ಅಂದ್ರೆ ಇದೇನಾ?


ಅವಳು ಕುರುಡಿ ಅವಳನ್ನು ಯಾರೂ ಇಷ್ಟಪಡುತ್ತಿರಲ್ಲಿ 'ಅವನೊಬ್ಬನನ್ನು ಬಿಟ್ಟು' ಅವನು ಇವಳನ್ನು ಜೀವಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದ,
ಒಂದು ದಿನ ದೈರ್ಯ ಮಾಡಿ ಅವಳನ್ನು ಕೇಳಿಯೇಬಿಟ್ಟ 'ನನ್ನನ್ನು ಮದುವೆಯಾಗ್ತಿಯಾ? ನಿನ್ನನ್ನು ಚೆನ್ನಾಗಿ ನೋಡಿಕೊಳ್ತಿನಿ ' ಅಂತ ಅಂದ, ಅದಕ್ಕವಳು 'ನನಗೆ ದೃಷ್ಠಿ ಬಂದಕೂಡಲೇ ನಿನ್ನೇ ಮದುವೆ ಯಾಗುವೆ' ಎಂದಳು ಹುಡುಗ ಅವಳಮಾತಿನಿಂದ ಖುಷಿಯಾಗಿ ತಲೆಯಾಡಿಸಿದ.

ಸ್ವಲ್ಪ ದಿನಗಳ ನಂತರ ಹುಡುಗಿಗೆ ಯಾರೋ ಕಣ್ಣು ದಾನಮಾಡಿದರು ಅವಳಿಗೆ ದೃಷ್ಠಿಬಂತು, ಈಗವಳು ತನ್ನನ್ನು ಮದುವೆಯಾಗುತ್ತೆನೆಂದಿದ್ದ ಹುಡುಗನಿಗಾಗಿ ಹುಡುಕ ತೊಡಗಿದಳು, ಅವನು ಒಂದು ದಿನ ಇವಳಿಗೆ ಸಿಕ್ಕ ಅವಳಿಗೊಂದು ಆಶ್ಚರ್ಯ ಕಾದಿತ್ತು 'ಅವನಿಗೆ ಕಣ್ಣೇಇರಲ್ಲಿ ಅವನು ಕುರುಡನಾಗಿದ್ದ'
ಅವಳು ಬಂದಿದ್ದನ್ನರಿತ ಅವನು ಕೇಳಿದ 'ನನ್ನನ್ನು ಮದ್ವೆಯಾಗ್ತಿಯಾ?'
ಹುಡುಗಿ ಗಟ್ಟಿಮನಸ್ಸಿನಿಂದ ಹೇಳಿದಳು 'ಇಲ್ಲ ಸಾಧ್ಯವೇ ಇಲ್ಲ ನಿನ್ನಂಥ ಕುರುಡನನ್ನು ಮದುವೆಯಾಗಲಾರೆ' ಎಂದಳು, ಇದನ್ನು ಕೇಳಿ ಹುಡುಗನಿಗೆ ದುಖಃ ವಾಯಿತು ಸಮಾಧಾನ .ಪಟ್ಟುಕೊಂಡುಹೇಳಿದನು 'ನೀನು ನನ್ನನ್ನು ಮದುವೆಯಾಗಿ ಚೆನ್ನಗಿನೋಡಿಕೊಳ್ಳದಿದ್ದರೂ ಪರವಾಗಿಲ್ಲ ಕನಿಷ್ಟಪಕ್ಷ ನನ್ನ ಕಣ್ಣುಗಳನ್ನದರೂ ಚೆನ್ನಗಿ ನೋಡಿಕೋ' ಎಂದು ಹೇಳಿ ಹೊರಟು ಹೋದನು. 

ಉಚಿತ ಎಸ್, ಎಂ, ಎಸ್

ಇವತ್ತು 31-12-2011 ಇವತ್ತು ಮತ್ತು ನಾಳೆ Airtel, Vodafone, etc ಯಾವುದೇ ನೆಟ್ ವರ್ಕ ಆದ್ರೂ Free SmS ಸೇವೆ ಇರುದಿಲ್ಲ ಪ್ರತಿ SmS ಗೂ ಚಾರ್ಜ್ ವಿಧಿಸಲಾಗುತ್ತದೆ ಅಲ್ವಾ? ಇಂಟರ್ ನೆಟ್ ನಿಂದ Msg ಮಾಡಿದ್ರೆ ಜಾಹಿರಾತುಗಳಕಾಟ ಜಾಸ್ತಿ ಅದಕ್ಕೆ www.freesms8.com ಗೆ ಬೇಟಿ ನೀಡಿ, ಇಲ್ಲಿ ರಿಜಿಸ್ಟರ್ ಮಾಡಿದರೆ 160ಅಕ್ಷರಗಳ ಪೂರ್ಣ Msg ಮಾಡಬಹುದು , ಇಂಟರ್ ನೆಟ್ ನಿಂದ Msg ಮಾಡಿರೋದು ಸ್ವೀಕರಿಸುವವರಿಗೆ ತಿಳಿಯೋದಿಲ್ಲ

Thursday 30 December 2010

ಸುಲಭದ ದುಡಿಮೆ

ಹೆಂಡತಿ ಸ್ನಾನ ಮಾಡುತ್ತದ್ದಳು, ಗಂಡ ಟಾಯ್ಲೆಟ್ಟಿನಲ್ಲಿದ್ದ. ಸರಿಯಾಗಿ ಅದೇ ಸಮಯಕ್ಕೆ ಕಾಲಿಂಗ್ ಬೆಲ್ ಕೂಗಿತು. ಯಾರು ಬಾಗಿಲು ತೆಗೆಯಬೇಕೆಂಬ ಬಗ್ಗೆ ಇಬ್ಬರಲ್ಲೂ ಅವರವರು ಇದ್ದಲಿಂದಲೇ ಎರಡು ನಿಮಿಷ ವಾಗ್ವಾದವಾಯಿತು. ನಿರ್ವಾಹವಿಲ್ಲದೆ, ಹೆಂಡತಿಯೇ ಅವಸರಕ್ಕೊಂದು ಟವಲ್ ಸುತ್ತಿಕೊಂಡು ಹೋಗಿ ಬಾಗಿಲು ತೆಗೆದಳು. ಬಂದಿದ್ದು, ಪಕ್ಕದ ಮನೆಯಾತ. ಗಂಡನ ಪ್ರೆಂಡು. ಇವನು ಏನು ಎತ್ತ ಅಂತ ಕೇಳುವ ಮುಂಚೆಯೇ ಅವನು, "...ಮೇಡಂ, ನೀವೀಗ ಒಂದ್ನಿಮ್ಷ ಆ ಟವಲ್ ತೆಗೆದು ಹಾಕಿ ನಿಂತುಕೊಂಡರೆ ನಾನು ನಿಮ್ಗೆ ಐದುಸಾವಿರ ರುಪಾಯಿ ಕೊಡ್ತೀನಿ" ಅಂದ.
ತಕ್ಷಣ ಏನು ಹೇಳಬೇಕೆಂದು ತೋರದಿದ್ದರೂ, ಸ್ವಲ್ಪ ಯೋಚಿಸಿದ ಅವಳು, 'ಸರಿ' ಅಂತ ಹೇಳಿ ಟವಲ್ ಬಿಚ್ಚಿದಳು. ಒಂದೇ ನಿಮಿಷ, ಅಷ್ಟೇ; ಮತ್ತೆ ಸುತ್ತಿಕೊಂಡಳು. ಅವನು ಥ್ಯಾಂಕ್ಸ್ ಹೇಳಿ , ಐದುಸಾವಿರ ರುಪಾಯಿ ಕೊಟ್ಟು ನೆಡೆದುಬಿಟ್ಟ. ಅವಳಿಗೆ ತನ್ನ ಅದೃಷ್ಟವನ್ನು ನಂಬಲಾಗಲಿಲ್ಲ. ಅರೆ, ಒಂದೇ ನಿಮಿಷದಲ್ಲಿ ಐದು ಸಾವಿರ ರುಪಾಯಿ ದುಡಿಮೆ! ಖುಷಿಯಿಂದ ನಡುಗುತ್ತಲೇ ಮತ್ತೆ ಬಾತ್ ರೂಮ್ ಗೆ ಹೋಗಿ ಕದವಿಕ್ಕಿಕೊಂಡಳು. ಟಾಯ್ಲೆಟ್ಟಿನಲ್ಲಿದ್ದ ಗಂಡ ಅಲ್ಲಿಂದಲೇ ಕೂಗಿ ಕೇಳಿದ,"ಯಾರೇ ಬಂದಿದ್ದು?" "ಪಕ್ಕದ ಮನೆಯವ್ನು..." ಅಂದಳು ಹೆಂಡತಿ, ತನ್ನ ಖುಷಿಯನ್ನು ಒಂದಿಷ್ಟೂ ತೋರಿಸದೆ. ತಕ್ಷಣ ಗಂಡನಿಂದ ಮತ್ತೊಂದು ಪ್ರೆಶ್ನೆ ಸಿಡಿಯಿತು; "...ನಂಗೆ ಕೊಡ್ಬೇಕಾಗಿದ್ದ ಐದು ಸಾವಿರ ರುಪಾಯಿ ಸಾಲದ ಬಗ್ಗೆ ಏನಾದ್ರೊ ಹೇಳಿದ್ನೋ ಇಲ್ವೋ?!

ಹೃದಯದ ಬೂದಿ

ಬೀದಿ ಬಿಕಾರಿ ನಾನಲ್ಲ
ದಾರಿ ತಪ್ಪಿಯೂ ಬಂದಿಲ್ಲ
ನಾನಾರೆಂದು ಗೊತ್ತಾಗಲಿಲ್ಲವೆ ?
ಇರಲಿ ಬಿಡು;
ಈಗ ನೀನು ಉಪ್ಪರಿಗೆಯಲ್ಲಿರುವೆ.

ಅದೆಷ್ಟೋಸಲ ಬಂದು
ನನ್ನ ಮನದ ಕದವ ತಟ್ಟಿ
ಎದೆಯ ಮುಟ್ಟಿ
ಕೊಟ್ಟಿದ್ದ ಭಾಷೆ ನೆನಪಿಲ್ಲವೆ?
ಹೋಗಲಿ ಬಿಡು;
ಪ್ರೀತಿಯ ಪವಿತ್ರತೆ ಗೊತ್ತಿಲ್ಲ ನಿನಗೆ.

ನನ್ನ ಮನೆಯಂಗಳಕೆ
ಹಾಕ ಬೇಕಿದ್ದ ರಂಗೋಲಿ
ಇನ್ನೊಬ್ಬರ ಮನೆಯಂಗಳದ
ರಂಗವಲ್ಲಿಯಾಗಿರುವೆ ಈಗ

ಓ ಅರಗಿಣಿಯೇ
ನೆನಪಿದ್ದರೆ ಸಾಕು ನಿನಗೆ
ನೀ ಹಾಕುವ ರಂಗೋಲಿ
ನನ್ನ ಹೃದಯದ ಸುಟ್ಟ ಬೂದಿ ಎಂದು

Wednesday 29 December 2010

ಮಹಾಭಾರತ [ಇದನ್ನ ಸೀರಿಯಸ್ಸ್ಆಗಿ ತಗೋಬೇಡಿ ಪ್ಲೀಸ್]

ಮಹಾಭಾರತದ ದೃತರಾಷ್ಟ್ರ ನಿಮಗೆ ಗೊತ್ತಲ್ಲ? (ಗಾಂಧಾರಿಯ ಗಂಡ, ಹುಟ್ಟು ಕುರುಡ)
ಈ ದೃತರಾಷ್ಟ್ರ ಒಂದುಬಾರಿ ಸ್ವೀಟ್ ತೆಗೆದು ಕೋಡು ಪಾಂಡವರ ಮನೆಗೆ ಬಂದ, ಪಾಂಡವರು TVನೋಡ್ತಾ ಹಾಲ್ ನಲ್ಲಿ ಕುಳಿತಿದ್ದರು, ಪಾಂಡವರಿಗೆಲ್ಲಾ ಸ್ವೀಟ್ ಕೊಟ್ಟನಂತರ ದ್ರೌಪತಿ ಅಲ್ಲಿ ಇರದೇ ಇದ್ದದ್ದು ಅವನ ಗಮನಕ್ಕೆ ಬಂತು,
'ದ್ರೌಪತಿ ಎಲ್ಲಿ' ಎಂದು ಪಾಂಡವರನ್ನು ಕೇಳಿದ, ಅವಳು ಸ್ನಾನ ಮಾಡುತ್ತಿರುವುದಾಗಿ ಪಾಂಡವರು ಹೇಳಿದರು, 'ಸರಿ' ಎಂದು ದೃತರಾಷ್ಟ್ರ Bathroom ಹತ್ರ ಹೋಗಿ Bathroom ಬಾಗಿಲು ತಟ್ಟಿದ,
ಒಳಗಿನಿಂದ ದ್ರೌಪತಿ 'ಯಾರದು?'
'ನಾನು ದೃತರಾಷ್ಟ್ರ'
'ಏನು ವಿಷಯ?' ಎಂದು ದ್ರೌಪತಿ ಅಲ್ಲಿಂದಲೇ ಕೇಳಿದಳು.
'ನಿನಗೆ ಸ್ವೀಟ್ ಕೊಡಬೇಕಿತ್ತು,, ತಗೋ ಬಾ'
ದ್ರೌಪತಿ ಮೈಮೇಲೆ ಒಂಚೂರು ಬಟ್ಟೆ ಇಲ್ಲದೇ ಸ್ನಾನ ಮಾಡುತ್ತದ್ದರಿಂದ ಮತ್ತೆ ಬಟ್ಟೆ ಹಾಕಿಕೊಂಡು ಬಾಗಿಲು ತೆಗೆಯೋದೇಕೆ? ದೃತರಾಷ್ಟ್ರ ಹೇಗಿದ್ದರೂ ಕುರುಡ ಅಲ್ವಾ? ಅವನಿಗೇನು ಗೊತ್ತಾಗುತ್ತೆ.. ಎಂದುಕೊಂಡು ಬಟ್ಟೆ ಹಾಕಿಕೊಳ್ಳದೇ ಬಾಗಿಲು ತೆರೆದಳು. ದೃತರಾಷ್ಟ್ರ ಅವಳಿಗೆ ಸ್ವೀಟ್ ಕೊಟ್ಟ,
ದ್ರೌಪತಿ ಸ್ವೀಟ್ ತಿನ್ನುತ್ತಾ,,,'ಸ್ವೀಟ್  ಕೊಟ್ರಲ್ಲಾ ಏನು ವಿಶೇಷ?'' ಎಂದಳು.
ಅದಕ್ಕೆ ದೃತರಾಷ್ಟ್ರ ' ನನಗೆ ಕಣ್ಣು ಬಂದವು ಅದ್ಕೇ ಈ ಸ್ವೀಟ್ ' ಅಂದ

Sunday 26 December 2010

ಹೀಗೊಂದು ಕರೆ...

ಮಧ್ಯಾನ್ಹ ಸುಮಾರು ಎರಡು ಗಂಟೆ ಯಾಗಿರಬಹುದು ಯಾವುದೋ ಪುಸ್ತಕ ಓದುತ್ತ ಕುಳಿತ್ತಿದ್ದೆ, ಪೋನ್ ರಿಂಗಾಯಿತು,,,,  ಎತ್ತಿ 'ಹಲೋ' ಹೇಳಿದೆ ಅತ್ತಕಡೆಯಿಂದ ಯಾವುದೋ ಹುಡುಗಿ ಧ್ವನಿ
'ಸರ್ ನಿಮ್ಮ ಬ್ಲಾಗ್ ನೋಡಿದೆ ಅದರಲ್ಲಿ ಕೆಲಸ ಕೊಡಿಸ್ತಿವಿ ಅಂತ ಇತ್ತಲ್ಲ ಸರ್ ಅದ್ಕೆ Call ಮಾಡಿದೆ' ಎಂದಳು
' ಸರಿ ನಿಮಗೆ ಕೆಲಸ ಬೇಕಿತ್ತಾ?' ಎಂದೆ.
'ನನಗಲ್ಲ ಸರ್ ನಮ್ಮ ಅಣ್ಣನಿಗೆ'
'ok ಅವರು ಏನು ಓದಿದ್ದಾರೆ?'
'SSLC ಫೇಲ್ ಆಗಿದ್ದಾರೆ ಸರ್'
'ಪರ್ವಗಿಲ್ಲ ಬಿಡಿ. ಎಷ್ಟು ಸಂಬಳ ನಿರೀಕ್ಷೆ ಮಾಡ್ತರೆ?..
'4ರಿಂದ 4ವರೆ ಸಾವಿರ ಆದ್ರೂ Ok ಸರ್'
ನನಗೆ ಬೇಕಾದ ಎಲ್ಲಾ ಮಾಹಿತಿಯನ್ನು ಪಡೆದುಕೊಂಡು  ಪೋನ್ Cut ಮಾಡಿದೆ.
ಈಗ ಕೆಲಸ ಹುಡುಕುವ ಜವಬ್ಧಾರಿ ನನ್ನದಾಗಿತ್ತು. ನಮ್ಮ ಟೀಮ್ ನ ಹುಡುಗ ಪ್ರೇಮ್ ನ ಸಹಾಯದಿಂದ ಯಶವಂತಪುರದಲ್ಲಿ ಕೆಲಸವೊಂದು ಖಾಲಿ ಇರುವುದು ತಿಳಿತು. ಆ ವಿಷಯವನ್ನು ಅವಳಿಗೆ Phone ಮಾಡಿ ತಿಳಿಸಿ 'ಅವಳ ಅಣ್ಣನಿಗೆ Phone ಮಾಡಲು ಹೇಳಿದೆ' ಒಂದೆರಡು ಗಂಟೆಗಳ ಬಳಿಕ ಅವಳ ಅಣ್ಣ ಪೋನ್ ಮಾಡಿದ
'ಕೆಲಸ ಏನು? ಯಾವ ಏರಿಯಾದಲ್ಲಿ? ಎಷ್ಟು ಸಂಬಳ?' ಒಂದೇ ಉಸಿರಿನಲ್ಲಿ ಪ್ರಶ್ನೆ ಕೇಳಿದ
ನಾನು '4500 ರೂ ಸಂಬಳ ಬಟ್ಟೆ ಫ್ಯಾಕ್ಟರಿಯಲ್ಲಿ ಕೆಲಸ' ಎಂದೆ.
'ಏನೂ ಬಟ್ಟೆ ಫ್ಯಾಕ್ಟರಿಯಲ್ಲಿ ಕೆಲಸನಾ?.. ನನಗೆ ಬೇಡ' ಎಂದು ದಭಾಯಿಸುವ ರೀತಿಯಲ್ಲಿ
ನನ್ನ ಉತ್ತರವನ್ನೂ ನೀರೀಕ್ಷಿಸದೇ ಪೋನಿಟ್ಟ....

ಸ್ವಂತ ಊರಲ್ಲೇ ಕೆಲಸ 4500 ರೂ ಸಂಬಳ ಅರೇ ಅವನು ಮನಸ್ಸು ಮಾಡಿದ್ರೆ ಹಾಯಾಗಿ ಕೆಲಸ ಮಾಡಬಹುದಿತ್ತಲ್ವಾ? ಅಂದುಕೊಂಡೆ ಬಹುಷ ಅವನು ಅದೇನು ಯೋಚಿಸಿ ಬಿಟ್ಟನೋ ತಿಳಿಲಿಲ್ಲ.

'ಇಂಥಹ ಸಣ್ಣ ಪುಟ್ಟ ವಿಷಯಗಳಿಗೆ ನಾನು ಬೇಜಾರು ಮಾಡ್ಕೊಳಲ್ಲ ಬಿಡಿ '

Wednesday 15 December 2010

ನಿಮ್ಮ ಟೈಪಿಂಗ್ ನ ವೇಗವನ್ನು ಹೆಚ್ಚಿಸಲು ಕೆಲವು ಸೂತ್ರಗಳು

ಎಷ್ಟೋಜನ ಬರವಣಿಗೆಯನ್ನು ವೇಗವಾಗಿಸಿರುತ್ತಾರೆ ಹೊರತು.ಟೈಪಿಂಗ್ ಗೆ ಬಿಟ್ಟ್ರೆ ಅಮೆ ವೇಗದಿಂದ ಇರುತ್ತಾರೆ ಅಲ್ಲವೇ ಅಂತವರು ಇಲ್ಲಿರುವ ಕೆಲವು ಸೂತ್ರಗಳನ್ನು ಅನುಸರಿಸಿದರೆ ನಿಮ್ಮ ಟೈಪಿಂಗ್ ನ ವೇಗವನ್ನು ಇನ್ನೂ ಹೆಚ್ಚಿಕೊಳ್ಳಬಹುದು.


ಸೂತ್ರ ಒಂದು:- ನಿಮ್ಮ ಯಾವ ಬೆರಳು ಯಾವ ಅಕ್ಷರಗಳನ್ನು ಒತ್ತಬೇಕೆಂದು ತಿಳಿಯಿರಿ. ಪ್ರತಿಯೊಂದು ಬೆರಳಿಗೂ ಒಂದೊಂದು ಕೆಲವು ಅಕ್ಷರದಂತೆ ಇಲ್ಲಿ ಒಂದು ಚಾರ್ಟ ಮಾಡಲಾಗಿದೆ ಗಮನಿಸಿ.
The number row.
LEFT HAND RIGHT HAND
LF RF MF IF IF IF IF MF RF LF
1 2 3 4 5 6 7 8 9 0
Q W E R T Y U I O P
A S D F G H J K L ;
Z X C V B N M , . /


LF = little finger, RF = ring finger, MF = middle finger, IF = index finger

ಸೂತ್ರ ಎರಡು :- ಸಾಧ್ಯವಾದಷ್ಟೂ ಕೀ ಬೋರ್ಡ್ ನ್ನು ನೋಡದೇ ಟೈಪ್ ಮಾಡಲು ಪ್ರಯತ್ನಿಸಿ.
ಸೂತ್ರ ಮೂರು:- ಟೈಪ್ ಮಾಡುವಾಗ ಸಣ್ಣ ಪುಟ್ಟ ತಪ್ಪುಗಳಾಗುವುದು ಸಹಜ, ತಪ್ಪುಗಳಾದ ತಕ್ಷಣ ಅದನ್ನು ಸರಿಪಡಿಸಲು ಪ್ರಯತ್ನಿಸಬೇಡಿ ಇದರಿಂದ ನಿಮ್ಮ ವೇಗಕ್ಕೆ ಬ್ರೇಕ್ ಬೀಳುವ ಸಾಧ್ಯತೆ ಹೆಚ್ಚು.


ಇನ್ನೂ ಹಲವು ಸೂತ್ರಗಳೊಂದಿಗೆ ಮತ್ತೆ ಸಿಗುವೆ..............

Tuesday 7 December 2010

ಅಶ್ಲೀಲ ತಾಣಗಳನ್ನು ತಡೆಯಿರಿ

ನಿಮ್ಮ ಮನೆಯಲ್ಲಿರು ಮಕ್ಕಳು ಇಂಟರ್ ನೆಟ್ ಉಪಯೋಗಿಸುವಾಗ ಯಾವುದಾದರೂ ಅಶ್ಲೀಲ ತಾಣಗಳನ್ನು ತರೆಯಬಹುದು ಎಂಬ ಭಯ ನಿಮ್ಮನ್ನು ಕಾಡುತ್ತಿದೆಯಾ? Parental Filter 0.29 ಎಂಬ ತಂತ್ರಂಶವನ್ನು ನಿಮ್ಮ ಕಂಪ್ಯೂಟರ್ ನಲ್ಲಿ ಅಳವಡಿಸಿ
ಈ ತಂತ್ರಂಶವನ್ನು Download ಮಾಡಲು ಇಲ್ಲಿ ಕ್ಲಿಕ್ ಮಾಡಿ
Download ಆಗದೇ ಇದ್ದರೇ ಇಲ್ಲಿಗೆ ಬೇಟಿ ನೀಡಿ

Tuesday 23 November 2010

ದಟ್ಸ್ ಕನ್ನಡಕ್ಕೆ ಪತ್ರಕರ್ತರು ಬೇಕಾಗಿದ್ದಾರೆ

ನಮ್ಮ ಅಂತರ್ಜಾಲ ತಾಣದ ಮೋಟಾರು ವಾಹನ ಸುದ್ದಿಜಾಲ ವಿಭಾಗದಲ್ಲಿ ಕೆಲಸ ಮಾಡಲು ಪತ್ರಕರ್ತರು ಬೇಕಾಗಿದ್ದಾರೆ. ಹುದ್ದೆಯ ಸಂಖ್ಯೆ ಒಂದು. ಕಾರು, ಮೋಟಾರ್ ಬೈಕು, ಸ್ಕೂಟರ್, ವ್ಯಾನು ಮುಂತಾದ ವಾಹನ ಕಂಪನಿಗಳ ಮಾಹಿತಿಗಳು, ಅದರ ಉತ್ಪಾದನೆ ಮತ್ತು ಮಾರುಕಟ್ಟೆಗೆ ಬಿಡುಗಡೆಯಾಗುತ್ತಿರುವ ವಿವರಗಳು, ಮಾರಾಟ ಜಾಲ, ಅದರ ಬೆಲೆ ಮುಂತಾದ ಮಾಹಿತಿಗಳನ್ನು ಸುದ್ದಿ ಶೈಲಿಯಲ್ಲಿ, ಸುದ್ದಿ ಸಂಕ್ಷೇಪ ಮಾದರಿಯಲ್ಲಿ ಚಿಕ್ಕದಾಗಿ ಚೊಕ್ಕದಾಗಿ ಬರೆಯುವ ಜಾಣ್ಮೆ ಅರ್ಜಿಹಾಕಿಕೊಳ್ಳುವ ಪತ್ರಕರ್ತರಿಗೆ ಇರಬೇಕು.

ಅತಿವೇಗದಲ್ಲಿ ಬೆಳೆಯುತ್ತಿರುವ ವಾಹನ ಮಾರುಕಟ್ಟೆಯ ಮೇಲೆ ಅವ್ಯಾಹತ ನಿಗಾ ಇಡಬಲ್ಲ ಆಸಕ್ತಿ ಇರತಕ್ಕದ್ದು. ಮನೆಮಂದಿಯ ಉಪಯೋಗಕ್ಕಾಗಿ ಒಂದು ಕಾರು ಕೊಳ್ಳಬೇಕು ಎಂದು ಯೋಚಿಸುತ್ತಿರುವವರಿಗೆ, ಕಾಲೇಜಿಗೆ ಬೈಕಿನಲ್ಲೇ ಹೋಗಲು ಆಸೆಪಡುವ ಹುಡುಗ ಹುಡುಗಿಯರಿಗೆ ನಿಮ್ಮ ಕರಾರುವಾಕ್ಕು ಮಾಹಿತಿ ಭರಿತ ಬರವಣಿಗೆ ಮಾರ್ಗದರ್ಶಿಯಾಗಬೇಕು. ಸಾಲು ಸಾಲಾಗಿ ಮಾರುಕಟ್ಟೆಗೆ ಬರಲಿರುವ ಹೊಸ ವಾಹನಗಳ ವೈಶಿಷ್ಟ್ಯಗಳೇನು? ಶೋ ರೂಂಗಳ ವಿಳಾಸ, ಒಟ್ಟಾರೆ ವಾಹನ ಪ್ರಪಂಚದ ಆಗುಹೋಗುಗಳಿಗೆ ನಿಮ್ಮ ಬರವಣಿಗೆ ಕನ್ನಡ ಕನ್ನಡಿಯಾಗಬೇಕು. ಮುಖ್ಯವಾಗಿ : ನೇರವಾಗಿ, ಸ್ಫುಟವಾಗಿ, ಸರಳ ಕನ್ನಡದಲ್ಲಿ ಬರೆಯುವ ಕೌಶಲ್ಯ ಅತ್ಯಗತ್ಯ.

ಅರ್ಹತೆ : ಸುಮಾರು 22ರಿಂದ 27 ವಯೋಮಾನದ ಆಕಾಂಕ್ಷಿ ಪತ್ರಕರ್ತರಿಗೆ ಅರ್ಜಿಹಾಕಿಕೊಳ್ಳಲು ಸ್ವಾಗತ. ದಿನಕ್ಕೆ 8 ಗಂಟೆ ಕಾಲ ಕಂಪ್ಯೂಟರ್ ಮುಂದೆ ಕುಳಿತು ವಾಹನ ಮಾರುಕಟ್ಟೆಯ ಧ್ಯಾನ ಮತ್ತು ಅಧ್ಯಯನ ನಡೆಸಿ, ಮಾಹಿತಿ ಸಂಗ್ರಹಣೆ ಮಾಡಿ, ಲಗುಬಗೆಯಿಂದ ಸುದ್ದಿ ತಯಾರಿಸುವ ವೇಗಿಗಳಿಗೆ ಆದ್ಯತೆ ಕೊಡಲಾಗುವುದು. ಅಂತರ್ಜಾಲದ ಪರಿಚಯ ಸಾಕಷ್ಟು ಚೆನ್ನಾಗಿಯೇ ಇರಬೇಕು. ಯೂನಿಕೋಡ್ ಬಳಸಿಕೊಂಡು ನೋಟ್ ಪ್ಯಾಡಿನಲ್ಲಿ ಸರಸರ ಸುದ್ದಿ ಬರೆಯುವುದಕ್ಕೆ ಕೀಲಿ ಮಣೆ ಬಳಸುವ ಜ್ಞಾನ ಗೊತ್ತಿರಬೇಕು. ಅಭ್ಯರ್ಥಿಗಳು ಈಗಾಗಲೇ ಕಂಪ್ಯೂಟರ್ ಬಳಸಿಕೊಂಡೇ ಕನ್ನಡದಲ್ಲಿ ಬರೆಯುವ ವಿದ್ಯೆಯನ್ನು ಕರಗತ ಮಾಡಿಕೊಂಡಿದ್ದರೆ ಅವರು ನಮಗೆ ಬೇಕು. ನಾವು ನಡೆಸುವ ಲಿಖಿತ ಮತ್ತು ಮೌಖಿಕ ಪರೀಕ್ಷೆಗೆ ಒಟ್ಟು ಹತ್ತು ಅಂಕಗಳಿರುತ್ತವೆ. ಅಂಕಗಳ ವಿಭಜನೆ ಇಂತಿದೆ :

ಕನ್ನಡ ಅಂತರ್ಜಾಲ ತಾಣದಲ್ಲಿ ವೆಬ್ ರೈಟರ್ ಆಗಬೇಕೆಂಬ ಆಸಕ್ತಿಗೆ 4. ಆಟೋ ಸುದ್ದಿ ಸಂಗ್ರಹಣೆ, ಸುದ್ದಿ ಸಂಸ್ಕಾರ ಮಾಡುವ ಕಲೆಗೆ 3. ಅಂತರ್ಜಾಲದ ಪರಿಚಯ, ಇಂಗ್ಲಿಷ್ ಭಾಷಾ ಜ್ಞಾನದ ಜತೆಗೆ ಕಂಪ್ಯೂಟರ್ ನಲ್ಲಿ ಕನ್ನಡ ಬರೆಯುವ ಅನುಭವಕ್ಕೆ 2. ನಿತ್ಯ ಕಲಿಯುವ ಆಸಕ್ತಿ ಇದ್ದರೆ ಅದಕ್ಕೆ 1 ಅಂಕ. ಪತ್ರಿಕೋದ್ಯಮದಲ್ಲಿ ಔಪಚಾರಿಕ ಶಿಕ್ಷಣ, ಪದವಿ ಪಡೆದಿದ್ದರೆ ಸ್ವಾಗತವೇ. ಇಂಟರ್ನೆಟ್ ಪತ್ರಿಕೋದ್ಯಮದಲ್ಲಿ ಆಸಕ್ತಿ ಹಾಗೂ ಸುಲಲಿತ ಓದಿಗಾಗಿ ಸುದ್ದಿಗಳನ್ನು ಸಿದ್ಧಪಡಿಸುವ ಕಲೆ ಮತ್ತು ಶ್ರದ್ಧೆಯೇ ನಿರ್ಣಾಯಕ. ಕೆಲಸ ಮಾಡುವ ಸ್ಥಳ, ಜಯನಗರ, ಬೆಂಗಳೂರು.

ಸಂಬಳ ಮತ್ತು ನೇಮಕಾತಿ ನಿಯಮಗಳು ಅಭ್ಯರ್ಥಿಗಳ ವಿದ್ಯಾರ್ಹತೆ, ಅನುಭವ ಮತ್ತು ಆಸಕ್ತಿಯ ತೀರ್ವತೆಗಳನ್ನು ಅವಲಂಬಿಸಿರುತ್ತದೆ. ನಿಮ್ಮ ಅರ್ಜಿಗಳನ್ನು ರವಾನಿಸುವ ವಿಳಾಸ shami.sk@greynium.com. ಈ ಸಂಬಂಧ ದೂರವಾಣಿ, ಎಸ್ ಎಂಎಸ್ ಮೂಲಕ ವಿವರಗಳನ್ನು ನಾವು ನೀಡಲಾರೆವು. ಅರ್ಜಿ ಹಾಕಲು ಕಡೆ ದಿನಾಂಕ 1 ಡಿಸೆಂಬರ್ 2010. ನಿಮ್ಮ ಅರ್ಜಿಗಳನ್ನು ಈ ಮೇಲ್ ಮುಖಾಂತರವೇ ಕಳಿಸಬೇಕು. ಸಬ್ಜೆಕ್ಟ್ ಲೈನಿನಲ್ಲಿ Auto News/Copy Writer ಎಂದು ನಮೂದಿಸಬೇಕು.

Friday 19 November 2010

ಏಕಕಾಲದಲ್ಲಿ ಎರಡು ಜಿಮೇಲ್ ಖಾತೆಗಳಿಗೆ ಲಾಗಿನ್ ಆಗಬಹುದೇ?

ಏಕಕಾಲದಲ್ಲಿ ಎರಡು ಜಿಮೇಲ್ ಖಾತೆಗಳಿಗೆ ಲಾಗಿನ್ ಆಗಬಹುದೇ? ಒಂದೇ ಬ್ರೌಸರ್ ತೆರೆದು,ಒಂದು ಮಿಂಚಂಚೆ ಖಾತೆಗೆ ಲಾಗಿನ್ ಆದೊಡನೆ,ಇನ್ನೊಂದು ಖಾತೆಯಿಂದ ಲಾಗೌಟ್ ಆಗುವುದು ಸಾಮಾನ್ಯ.ಹಲವು ಬಳಕೆದಾರರು ಒಂದಕ್ಕಿಂತ ಹೆಚ್ಚು ಜಿಮೇಲ್ ಖಾತೆಯನ್ನು ಹೋಂದಿರುವುದು ಈಗ ಸಾಮಾನ್ಯವಾಗಿರುವುದರಿಂದ ಈ ಸೌಲಭ್ಯವನ್ನು ಗೂಗಲ್ ನೀಡಲಾರಂಭಿಸಿದೆ.ಮಿಂಚಂಚೆಯ ಜತೆಗೆ ಇತರ ಗೂಗಲ್ ಸೇವೆಗಳಿಗೂ ಪ್ರವೇಶ ಪಡೆಯುವುದು,ಸಹ ಸಾಧ್ಯವಾದರೂ, ಸದ್ಯಕ್ಕೆ, ಈ ರೀತಿಯ ಏಕಕಾಲದ ಪ್ರವೇಶ ಸಾಧ್ಯವಾಗದೆ ಹೋಗಬಹುದು ಎಂದು ಗೂಗಲ್ ಕಿವಿಮಾತು ಹೇಳಿದೆ.ಈ ಸವಲತ್ತು ಸಿಗಲು,ಮೊದಲಾಗಿ ಗೂಗಲ್‌ನ ಖಾತೆಯ ಸಿದ್ಧತೆಗಳಲ್ಲಿ "ಬಹುಖಾತೆಗಳನ್ನು ಸಾಧ್ಯವಾಗಿಸಬೇಕು.ಇದಕ್ಕೆ google.com/accounts ವಿಳಾಸ ನೋಡಿ.

ಸುಲಭವಾಗಿ ವೈರಸ್ ತಯಾರಿಸಿ.

ನಿಮ್ಮ ಶತ್ರುವಿನ ಕಂಪ್ಯೂಟರ್ ಹಾಳುಮಾಡಲು ಒಂದು ವೈರಸ್ ತಯಾರಿಸಬೇಕು ಅಂತ ಅನ್ನಿಸುತ್ತಿದೆಯಾ?
ಹಾಗಾದರೆ ಇನ್ನೇಕೆ ತಡ ನೀವೇ ಒಂದು ವೈರಸ್ ತಯಾರಿಸಿಬಿಡಿ.
---> Notepad ನಲ್ಲಿ ಇಲ್ಲಿರುವ ಪಠ್ಯವನ್ನು Copy ಮಾಡಿ Paste ಮಾಡಿ. AUTOEXE.bat ಹೆಸರಿನಲ್ಲಿ Save ಮಾಡಿ.








ಎಚ್ಚರಿಕೆ:- ಇಲ್ಲಿರುವ ಮಾಹಿತಿಯನ್ನು ಕೇವಲ ಕಲಿಯುವ ಆಸಕ್ತಿಗಾಗಿ ಮತ್ತು ತಮಾಷೆಗಾಗಿ ಮಾತ್ರ ಉಪಯೋಗಿಸಿ. ಬೇರೆಯವರ ಗಣಕಯಂತ್ರಕ್ಕೆ VIRUS ದಾಳಿಮಾಡುವುದು ಕಾನೂನಿನ ಪ್ರಕಾರ ಅಪರಾಧ.

Thursday 18 November 2010

SMS ಮೂಲಕ ಈ-ಮೇಲ್ ಸೇವೆ.

ದಿನಾ ಬರುವ E-mail ಗಳನ್ನು ನೋಡಲು ಪದೇ ಪದೇ ಕಂಪ್ಯೂಟರ್ ಗಳ ಮುಂದೆ ಕುಳಿತು ಬೇಜಾರಾಗಿದೆಯಾ?

ಇದಕ್ಕಿದೆ ಒಂದು ಸುಲಭ ಉಪಾಯ, http://linksutra.com ಗೆ ಬೇಟಿ ನೀಡಿ ಅಲ್ಲಿ ನಿಮ್ಮ ದೂರವಾಣಿ ಮತ್ತು e-mail id ಯನ್ನು ನಮೂದಿಸಿದರೆ ಅಷ್ಟೇ ಸಾಕು. ನಿಮಗೆ ಬರುವ ಪ್ರತಿಯೊಂದು ಈ ಮೇಲ್ ಕೂಡ 'ತಕ್ಷಣ' ನಿಮ್ಮ ಮೊಬೈಲ್ ಗೆ ಬಂದು ಬೀಳುತ್ತದೆ. ಇದು ಉಚಿತ ಸೇವೆಯಾಗಿದೆ.
ನೆನಪಿರಲಿ: ಇದರಲ್ಲಿ Gmail ನ ಸೇವೆಯನ್ನು ಮಾತ್ರ  ಪಡೆಯಬಹುದು.

Wednesday 17 November 2010

ಕೆಲಸ ಖಾಲಿ ಇದೆ....

ಕೆಲಸದ ಹೆಸರು  : ಕಂಪ್ಯೂಟರ್ ಶಿಕ್ಷಕರು.
ಕೆಲಸದ ಸ್ಥಳ      : ಕರ್ನಾಟಕದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ
ವೇತನ ಶ್ರೇಣಿ    : 3500-00
ವಿದ್ಯಾರ್ಹತೆ      : ಯಾವುದೇ ಪದವಿ. ಮತ್ತು
                        ಕಂಪ್ಯೂಟರ್ ನಲ್ಲಿ PGDCA  ಅಥವಾ ಇದಕ್ಕೆ ಸಮನಾದ ಕಂಪ್ಯೂಟರ್ ಕೊರ್ಸ್ ಆಗಿರಬೇಕು.

  ಈ ಉದ್ದೆಯಬಗ್ಗೆ  ಹೆಚ್ಚಿನ ಮಾಹಿತಿಗೆ ನಿಮ್ಮ ಸಮೀಪದ ಸರ್ಕಾರಿ or ಅನುಧಾನಿತ ಶಾಲೆಯಲ್ಲಿನ ಮುಖ್ಯಶಿಕ್ಷಕರು or ಕಂಪ್ಯೂಟರ್ ಶಿಕ್ಷಕರನ್ನು ಸಂಪರ್ಕಿಸಿ.

ಇನ್ನೂ ಹೆಚ್ಚಿನ ಮಾಹಿತಿಗೆ : 9740769286

Friday 12 November 2010

ಉದ್ಯೋಗ ಭೇಟೆ

ಬಂದುಗಳೇ,,,,

ದಿನ ಬೆಳಿಗ್ಗೆಯಿಂದ ಸಂಜೆಯವರೆಗೂ ನೂರಾರುಕಡೆಗಳಲ್ಲಿ ಓಡಾಡುವಾಗ ಸಾಮಾನ್ಯವಾಗಿ ನೂರಾರು ಅಕ್ಷರಸ್ಥ ನಿರುದ್ಯೋಗಿಗಳನ್ನು ಕಂಡಿದ್ದೇನೆ.ಹಾಗೂ "ಯಾವ ಕೆಲಸನಾದ್ರೂ ಇದ್ರೆ ಕೊಡಿ ಸಾರ್ ಮಾಡ್ತಿನಿ" ಅನ್ನೋ ಅವರ ಮಾತು ನನಗೆ ಕೇಳಿಸದೇ ಇರಲಿಲ್ಲ. ಅದೇರೀತಿ ಹಲವಾರು ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ನನ್ನ ಫ್ರಂಡ್ಸ್ ಗಳು Call ಮಾಡಿ "ನಾಲ್ಕೈದು ಕೆಲಸ ಖಾಲಿ ಇದೆ ಯಾರಾದ್ರೂ ಒಳ್ಳೆ ಹುಡುಗರು ಇದ್ರೆ ಹೇಳು" ಅನ್ನುವುದು ನನಗೆ ಮಾಮೂಲಾಗಿದೆ.

"ಯಾವ ಕೆಲಸನಾದ್ರೂ ಇದ್ರೆ ಕೊಡಿ ಸಾರ್ ಮಾಡ್ತಿನಿ" ಅನ್ನುವವರು ನಾನು ಎಷ್ಟೇ ಹುಡುಕಿದರೂ ಆ timeಗೆ ಸಿಗೋದೇ ಇಲ್ಲ. ಅದಕ್ಕೆ ಫ್ರೆಂಡ್ಸ್ ನನಗೊಂದು idea ಬಂದಿದೆ. ಅದೇನೆಂದರೆ ನಿಮಗೆ or ನಿಮ್ಮ ಫ್ರೆಂಡ್ಸ್ ಗೆ ಕೆಲಸದ ಅವಶ್ಯಕತೆ ಇದ್ದಲ್ಲಿ ನಿಮ್ಮ Resume ಅನ್ನು ದಯವಿಟ್ಟು ನನಗೆ mail ಮಾಡಿ. ನಿಮ್ಮ ವಿದ್ಯಾರ್ಹತೆಗೆ ತಕ್ಕುದಾದ ಕೆಲಸವನ್ನು ನಾವೇ ನಿಮಗೆ ಹುಡುಕಿಕೊಡುತ್ತೆವೆ.(Phone number ಬರೆಯೊದನ್ನು ಮರೀಬೇಡಿ)
www.netkannada.blogspot.com ಬ್ಲಾಗ್ ನಲ್ಲಿ ಎಲ್ಲೆಲ್ಲಿ Job ಖಾಲಿ ಇದೆ ಅದಕ್ಕೆ ಬೇಕಾದ ಅರ್ಹತೆಗಳೇನು ಎಂಬುದನ್ನು ಪ್ರಕಟಿಸುತ್ತೆನೆ.ಒಂದು ವೇಳೆ ನೀವು ನಿಮ್ಮ Resume ಕಳುಹಿಸಿದ್ದರೆ.sms Or Call ಮಾಡಿ ನಾವೇ ಹೇಳುತ್ತೆವೆ.

ನೆನಪಿರಲಿ
ಈ ಮಾಹಿತಿಗೆ ಯಾವುದೇ ಶುಲ್ಕವಿರುವುದಿಲ್ಲ ಇದು ಉಚಿತ ಸೇವೆ

ಹೆಚ್ಚಿನ ಮಾಹಿತಿಗೆ:- 9740769286 ಅಥವಾ ontipremi@gmail.com

Wednesday 20 October 2010

ಯುಎಸ್‌ಬಿಗೊಂದು ಚುಚ್ಚುಮದ್ದು[ From- ಗಣಕಿಂಡಿ]

ನಿಮ್ಮ ಯುಎಸ್‌ಬಿ ಡ್ರೈವ್ ಅನ್ನು ಇನ್ನೊಬ್ಬರ ಗಣಕದಲ್ಲಿ ತೂರಿಸಿ ಅವರಿಂದ ಯಾವುದಾದರೂ ಫೈಲು ತೆಗೆದುಕೊಂಡು ಬಂದ ನಂತರ ನಿಮ್ಮ ಯುಎಸ್‌ಬಿ ಡ್ರೈವ್‌ನಲ್ಲಿ ವೈರಸ್ ಬಂದ ಅನುಭವ ನಿಮಗೆ ಆಗಿರಬಹುದು. ಈ ರೀತಿಯ ಅನುಭವ ಸಾಮಾನ್ಯವಾಗಿ ನೀವು ತೆಗೆದ ಫೋಟೋವನ್ನು ಮುದ್ರಣಕ್ಕಾಗಿ ಸ್ಟುಡಿಯೋದಲ್ಲಿ ನೀಡಿದ ಬಳಿಕ ಅಥವಾ ಯಾವುದಾದರೂ ಸೈಬರ್‌ಕೆಫೆಯಲ್ಲಿ ಬಳಸಿದ ಬಳಿಕ ಆಗುವುದು ಸಾಮಾನ್ಯ. ಬಹುಜನರು ತಮ್ಮಲ್ಲಿರುವ ಎಲ್ಲ ನಮೂನೆಯ ಡ್ರೈವ್‌ಗಳನ್ನು ಬಳಸಿ ಇಂತಹ ಸಾರ್ವಜನಿಕ ಬಳಕೆಯ ಗಣಕಗಳಲ್ಲಿ ವೈರಸ್ ತುಂಬಿರುತ್ತದೆ. ಅಂತಹ ಗಣಕದಿಂದ ನಿಮ್ಮ ಯುಎಸ್‌ಬಿ ಡ್ರೈವ್‌ಗೂ ಅದು ಬರುತ್ತದೆ. ಈ ರೀತಿ ಆಗದಂತೆ ನಿಮ್ಮ ಯುಎಸ್‌ಬಿ ಡ್ರೈವ್‌ಗೊಂದು ಚುಚ್ಚುಮದ್ದು (ವ್ಯಾಕ್ಸೀನ್) ತಂತ್ರಾಂಶ Panda USB Vaccine ಲಭ್ಯವಿದೆ. ಇದು ಬೇಕಿದ್ದಲ್ಲಿ ನಿವು ಭೇಟಿ ನೀಡಬೇಕಾದ ಜಾಲತಾಣದ ವಿಳಾಸ - ಇಲ್ಲಿದೆ

Friday 17 September 2010

ಎಂ.ಎನ್.ಪಿ ಸೇವೆ ಅ.31 ರಿಂದ ಜಾರಿ

ಸೇವಾ ಕಂಪನಿಯನ್ನು ಬದಲಾಯಿಸಿದರೂ 'ಮೊಬೈಲ್ ನಂಬರ್ ಪೋರ್ಟಬಿಲಿಟಿ (ಎಂ.ಎನ್.ಪಿ)' ಸೇವೆಯು ಅಕ್ಟೋರರ್ 31ರ ನಂತರ ಜಾರಿಗೆ ಬರುವುದು ಖಚಿತವಾಗಿದೆ. ಏ ಸೇವೆ ಒದಗಿಸಲು ಎಲ್ಲ ಮಾರ್ಪಾಟುಗಳನ್ನು ಮಾಡಿಕೊಳ್ಳಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ BSNL ಹೇಳಿರುವುದು ಇದಕ್ಕೆ ಸಾಕ್ಷಿ.

               ಇದಕ್ಕೂ ಮೊದಲು ಭಾರ್ತಿ ಏರ್ ಟೆಲ್  ಸೇರಿದಂತೆ ಹಲವು ಖಾಸಗಿವಲಯದ ಟೆಲಿಕಾಂ ಕಂಪನಿಗಳು ಈ ಸೇವೆಯನ್ನು ನೀಡಲುಸಿದ್ದವಿರುವುದಾಗಿ ಪ್ರಕಟಿಸಿದ್ದವು. ಆದರೆ BSNL ಮಾತ್ರ ಎರಡು ಮೂರು ಬಾರಿ ನಿಗದಿತ ಸಮಯವನ್ನು ಮುಂದಕ್ಕೆ ಹಾಕಿತ್ತು.
              ಈಗ ಎಲ್ಲಾ ಸಿದ್ದತೆಗಳು ಪೂರ್ಣಗೊಂಡಿದ್ದು, ಅಕ್ಟೋಬರ್ 31ರಿಂದ ಈ ಸೇವೆ ಜಾರಿಗೊಳ್ಳಲಿದೆ

ವಿಂಡೋಸ್೭ಕ್ಕೆ ಕನ್ನಡದ ಹೊದಿಕೆ [ From- ಗಣಕಿಂಡಿ ]

ಮೈಕ್ರೋಸಾಫ್ಟ್ ವಿಂಡೋಸ್ ೭ ಕಾರ್ಯಾಚರಣೆಯ ವ್ಯವಸ್ಥೆಗೆ (ಆಪರೇಟಿಂಗ್ ಸಿಸ್ಟಮ್) ಕನ್ನಡದ ಹೊದಿಕೆ ಲಭ್ಯವಿದೆ. ಇದನ್ನು ಡೌನ್‌ಲೋಡ್ ಮಾಡಿಕೊಂಡು ಇನ್‌ಸ್ಟಾಲ್ ಮಾಡಿಕೊಂಡರೆ ವಿಂಡೋಸ್‌ನ ಬಹುಪಾಲು ಆದೇಶ ಮತ್ತು ಸಂದೇಶಗಳು ಕನ್ನಡ ಭಾಷೆಯಲ್ಲೇ ಬರುತ್ತವೆ. ಇದನ್ನು ಲಾಂಗ್ವೇಜ್ ಇಂಟರ್‌ಫೇಸ್ ಪ್ಯಾಕ್ ಎಂದು ಕರೆಯುತ್ತಾರೆ. ಇದರಲ್ಲಿ ದಿನನಿತ್ಯ ಬಳಕೆಗೆ ಬೇಕಾಗುವ ಶೇಕಡ ೮೦ ಕನ್ನಡದ ಅನುಭವ ಬರುವಂತೆ ಅನುವಾದ ಮಾಡಲಾಗಿದೆ. ಈ ಕನ್ನಡದ ಲಾಂಗ್ವೇಜ್ ಇಂಟರ್‌ಫೇಸ್ ಪ್ಯಾಕ್ ಅನ್ನು ಇಲ್ಲಿ    ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಧಿಕೃತ ವಿಂಡೋಸ್ ೭ ಇರುವವರು ಮಾತ್ರ ಇದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಹೊದಿಕೆಯನ್ನು ಅಳವಡಿಸಿದ ಮೇಲೆ ಗಣಕ ಪ್ರಾರಂಭಿಸಿದಾಗ ಇಂಟರ್‌ನೆಟ್ ಎಕ್ಸ್‌ಪ್ಲೋರರ್, ನೋಟ್‌ಪ್ಯಾಡ್, ಇತ್ಯಾದಿಗಳು ಕನ್ನಡದಲ್ಲಿರುತ್ತವೆ. ಅಂದರೆ ಅವುಗಳ ಮೆನುಗಳು ಕನ್ನಡ ಭಾಷೆಯಲ್ಲಿರುತ್ತವೆ. ಸಂವಾದ ಚೌಕಗಳೂ ಕನ್ನಡ ಭಾಷೆಯಲ್ಲಿ ಕಾಣಿಸುತ್ತವೆ. ಆದರೆ ಸಹಾಯ ಕಡತಗಳು ಮಾತ್ರ ಇಂಗ್ಲೀಷಿನಲ್ಲಿರುತ್ತವೆ.

Wednesday 18 August 2010

ಮೈಕ್ರೊಸಾಫ್ಟ್ ನ ಹೊಸ ಭಾಷ ಸೌಲಭ್ಯ

  ಸಾಫವೇರ್ ದೈತ್ಯ ಸಂಸ್ಥೆ ಮೈಕ್ರೊಸಾಫ್ಟ್  . ಕಂಪ್ಯೂಟರ್ ಬಳಕೆಯಲ್ಲಿ ಅಡ್ಡಿಯಾಗುವ ಭಾಷ ಸಮಸ್ಯೆ ನಿವಾರಿಸಲು ಮುಂದಾಗಿದೆ. ಈ ಮೂಲಕ ಇದುವರೆಗೆ ಸದ್ಬಳಕೆ ಮಾಡದ ಪ್ರಾದೇಶಿಕ ಭಾಷಾ ಮಾರುಕಟ್ಟೆ ಮೇಲೆ ಹಿಟಿತ ಸಾದಿಸಲು ಉದ್ದೇಶಿಸಿದೆ ಕನ್ನಡವೂ ಸೇರಿದಂತೆ 12 ಪ್ರಾದೇಶಿಕ ಭಾಷೆಗಳಲ್ಲಿ  (language interface packs- LIPs) ಹೊಸ ಸೌಲಭ್ಯ ಒದಗಿಸಿದೆ. ಎಂಎಸ್ ಆಪೀಸ್ ಮತ್ತು ವಿಂಡೋಸ್ ನಲ್ಲಿ ಈ ಸೌಲಭ್ಯ ದೊರೆಯಲಿದೆ. ಈ ಪ್ರಾದೇಶಿಕ ಭಾಷೆಗಳ ಬಳಕೆಗೆಂದೇ ಮೈಕ್ರೊಸಾಫ್ಟ್  45 ಹೆಚ್ಚುವರಿ ಕೀಲಿಮಣಿ ರೂಪಿಸಿದೆ. 'ವಿಂಡೋಸ್ ಲೈವ್' ನಲ್ಲಿಯೂ ಕನ್ನಡ ಸೇರಿದಂತೆ ಏಳು ಪ್ರಾದೇಶಿಕ ಭಾಷೆಗಳ ಬಳಕೆಗೆ ಅವಕಾಶ ಇದೆ.

Monday 16 August 2010

ನಿಮ್ಮ ANTIVIRUS ಕೆಲಸ ಮಾಡುತ್ತಿದೆಯೇ?

ಕೆಲವು ANTIVIRUS ಗಳು ಅಪ್ ಡೇಟ್ ಮಾಡಿದರೂ ಸಹ ಕೆಲಸ ಮಾಡುವುದಿಲ್ಲ ಅದ್ದರಿಂದ ನಿಮ್ಮ ANTIVIRUS ಕೆಲಸ ಮಾಡುತ್ತಿದೆಯೇ? ಎಂದು ಪರೀಕ್ಷಿಸಲು X5O!P%@AP[4\PZX54(P^)7CC)7}$EICAR-STANDARD-ANTIVIRUS-TEST-FILE!$H+H* ಈ ಪಟ್ಯ ವನ್ನು ನಕಲಿಸಿNOTPAD ನಲ್ಲಿ fakevirus.exe ಹೆಸರಿನಲ್ಲಿ ಸೇವ್ ಮಾಡಿ ಈ file ಡಿಲಿಟ್ ಆದರೆ ನಿಮ್ಮ ANTIVIRUS ಕೆಲಸ ಮಾಡುತ್ತದೆ ಎಂದು ಅರ್ಥ ಇಲ್ಲದಿದ್ದಲ್ಲಿ ಬೇರೆANTIVIRUS ಬಳಸಿ.